ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಕ್ಷಸನಿಗೆ ಸಿಎಂ ಯೋಗಿ ಹೋಲಿಕೆ: ಮಾಜಿ ರಾಜ್ಯಪಾಲ ಖುರೇಷಿ ವಿರುದ್ಧ ಪ್ರಕರಣ

|
Google Oneindia Kannada News

ರಾಂಪುರ್, ಸೆಪ್ಟೆಂಬರ್ 06: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿರುವ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿ ನೀಡಿದ್ದ ಹೇಳಿಕೆಯ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಆಜೀಜ್ ಖುರೇಷಿ ವಿರುದ್ಧ ಪ್ರಕರಣ ದಾಖಲಾಗಿದೆ.

"ಖುರೇಷಿ ಅವರು ರಾಮ್ ಪುರದಲ್ಲಿರುವ ನಾಯಕ ಆಜಮ್ ಖಾನ್ ನಿವಾಸಕ್ಕೆ ತೆರಳಿದ್ದು, ಶಾಸಕರು ಹಾಗೂ ಖಾನ್ ಅವರ ಪತ್ನಿ ತನ್ಜೀಮ್ ಫಾತೀಮಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ದೆವ್ವ- ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿದ್ದರು" ಎಂದು ಸಕ್ಸೇನಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Former UP Governor Qureshi Booked For Sedition Over Remark On Yogi Adityanath Govt

ಖುರೇಷಿ ಅವರ ಹೇಳಿಕೆ ವಿವಾದಾತ್ಮಕವಾಗಿದ್ದು, ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವಂತದ್ದಾಗಿದೆ ಎಂದು ಸಕ್ಸೇನಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಬಿಜೆಪಿ ಕಾರ್ಯಕರ್ತ ಆಕಾಶ್ ಸಕ್ಸೇನಾ ರಾಮ್ ಪುರ ಜಿಲ್ಲೆಯಲ್ಲಿ ಸಿವುಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ಸೆಕ್ಷನ್ 124ಎ (ರಾಷ್ಟ್ರದ್ರೋಹ) 153 ಎ ( ಧರ್ಮಗಳ ನಡುವೆ ದ್ವೇಷ ಹರಡುವುದು) 153 ಬಿ ( ಸೂಚನೆಗಳು, ಪ್ರತಿಪಾದನೆಗಳು ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕಾರಕ) 505 (1) (ಬಿ) ಜನತೆಯಲ್ಲಿ ಆತಂಕ ಮೂಡಿಸುವ ಯತ್ನದ ಆರೋಪದಡಿ ಮಾಜಿ ರಾಜ್ಯಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಜೀಜ್​ ಖುರೇಷಿ ಮೂಲತಃ ಮಧ್ಯಪ್ರದೇಶದ ಭೋಪಾಲ್​​ನ ಹಿರಿಯ ಕಾಂಗ್ರೆಸ್​ ನಾಯಕ. ಅವರಿಗೆ ಈಗ 81 ವರ್ಷ. ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಅಜೀಂ ಖಾನ್​ ಮತ್ತು ಅವರ ಪುತ್ರ ಸದ್ಯ ಜೈಲಿನಲ್ಲಿದ್ದಾರೆ. ಫೋರ್ಜರಿ, ನಕಲಿ ಬರ್ತ್ ಸರ್ಟಿಫಿಕೇಟ್​ ಸೇರಿ ಹಲವು ಪ್ರಕರಣಗಳಲ್ಲಿ ಅಜೀಂ ಖಾನ್​, ಅವರ ಪತ್ನಿ ಮತ್ತು ಪುತ್ರ ಮೂವರೂ ಕಳೆದ ವರ್ಷ ಜೈಲು ಸೇರಿದ್ದರು. ಅದರಲ್ಲಿ ಪತ್ನಿ ಫಾತ್ಮಾಗೆ ಜಾಮೀನು ಸಿಕ್ಕಿದೆ.

ಅಜಂ ಖಾನ್​ಗೆ ಇಲ್ಲಿನ ಸರ್ಕಾರ ಎಷ್ಟು ಹಿಂಸೆ ನೀಡುತ್ತಿದೆ ಎಂಬುದನ್ನು ವಿವರಿಸಬೇಕಾಗಿಲ್ಲ. ನಾನೀಗ ಇಲ್ಲಿಗೆ, ಫಾತ್ಮಾರಿಗೆ ಧೈರ್ಯ ತುಂಬಲು ಬಂದಿದ್ದೇನೆ. ನಾವು, ಜನರು ಆಕೆಯೊಂದಿಗೆ ಸದಾ ಇರುತ್ತೇವೆ.

ಯೋಗಿ ಆದಿತ್ಯನಾಥ್​ ಸರ್ಕಾರ ರಾಕ್ಷಸ ಸರ್ಕಾರ ಮತ್ತು ಜನರ ರಕ್ತ ಹೀರುವ ಪಿಶಾಚಿಗಳು ಎಂದು ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ಅಜೀಂ ಖಾನ್​ ನಮ್ಮ ಮುಸ್ಲಿಂ ಸಮುದಾಯದ ಒಳಿತಿಗಾಗಿ ಕೆಲಸ ಮಾಡಿದ್ದರು.

ಆದರೆ ಕೆಲವರಿಗೆ ನಮ್ಮ ಸಮುದಾಯ ಶಿಕ್ಷಣವಂತರಾಗುವುದು, ಅವರಿಗೆ ಒಳಿತಾಗುವುದು ಇಷ್ಟವಿಲ್ಲ' ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

English summary
Former Uttar Pradesh Governor Aziz Qureshi has been booked for sedition by Uttar Pradesh Police on Sunday for his alleged derogatory remarks against Chief Minister Yogi Adityanath-led government in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X