ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿಗೆ ಮುನ್ನಡೆ: ಅಖಿಲೇಶ್‌ಗೆ ಒಳ್ಳೆಯ ಸುದ್ದಿ ಆದರೆ

ಲಕ್ನೋ ಮಾರ್ಚ್ 08: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಎಲ್ಲಾ ಏಳು ಹಂತಗಳು ಮುಗಿದಿದ್ದು, ಈಗ ಎಲ್ಲರೂ ಮಾರ್ಚ್ 10 ರಂದು ನಡೆಯುವ ಮತ ಎಣಿಕೆಯ ಅಂತಿಮ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಮಾರ್ಚ್ 10 ರಂದು ಫಲಿತಾಂಶಗಳು ಹೊರಬೀಳುವ ಮೊದಲು ಹಲವಾರು ಎಕ್ಸಿಟ್ ಪೋಲ್‌ಗಳು ಹೊರಬಂದಿದ್ದು, ಇದನ್ನು ಗಮನಿಸಿದರೆ ಭಾರತೀಯ ಜನತಾ ಪಕ್ಷವು ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಸಂಪೂರ್ಣ ಬಹುಮತವನ್ನು ಪಡೆಯುವಂತಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕೂಡ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಪಡೆಯುತ್ತಿದೆ ಎಂದು ತೋರಿಸುತ್ತದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮುಖದಲ್ಲಿ ನಗುವನ್ನು ತರಿಸುವಂತ ಫಲಿತಾಂಶವಿದು. ಆದರೆ ಈ ನಗು ಗೆಲುವಿನ ಸಂತೋಷದ್ದಲ್ಲ. ಎಸ್‌ಪಿ ಮತಗಳಿಕೆಯಲ್ಲಿ ಹೆಚ್ಚಳವಾಗಿದ್ದರೂ ಬಿಜೆಪಿಯನ್ನು ಸೋಲಿಸಲು ಈ ಅಂಕಿ ಅಂಶ ಸಾಕಾಗುತ್ತಿಲ್ಲ. ಎಕ್ಸಿಟ್ ಪೋಲ್‌ಗಳಲ್ಲಿ ಸಮಾಜವಾದಿ ಪಕ್ಷ ಮತಗಳ ದೃಷ್ಟಿಯಿಂದ ದೊಡ್ಡ ಲಾಭವನ್ನು ಕಾಣುತ್ತಿದೆ. ಕಳೆದ ಚುನಾವಣೆಗಿಂತ ಹೆಚ್ಚು ಮತಗಳು ಬರುತ್ತಿರುವುದು ಮಾತ್ರವಲ್ಲದೆ, ಕಳೆದ ಬಾರಿಗೆ ಹೋಲಿಸಿದರೆ ಪಕ್ಷದ ಸ್ಥಾನಗಳಲ್ಲಿ ಏರಿಕೆ ಕಾಣಲಿದೆ.

ಎರಡಂಕಿಯನ್ನೂ ದಾಟದ ಬಿಎಸ್‌ಪಿ

ಎರಡಂಕಿಯನ್ನೂ ದಾಟದ ಬಿಎಸ್‌ಪಿ

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಭಾರತೀಯ ಜನತಾ ಪಕ್ಷ 288-326 ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಎಸ್‌ಪಿ 71-101 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ ಮಾಯಾವತಿಯವರ ಪಕ್ಷ ಬಿಎಸ್‌ಪಿಗೆ ಕೆಟ್ಟ ಸುದ್ದಿ ಎಂದರೆ ಎಕ್ಸಿಟ್ ಪೋಲ್‌ಗಳಲ್ಲಿ ಪಕ್ಷವು ಎರಡಂಕಿಯನ್ನೂ ದಾಟಿಲ್ಲ. ಪಕ್ಷ 3-9 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಬಹುದು.

ಬಿಜೆಪಿಯ ಮತದಾರರ ಓಲೈಸಲು ಎಡವಿತಾ ಬಿಜೆಪಿ

ಬಿಜೆಪಿಯ ಮತದಾರರ ಓಲೈಸಲು ಎಡವಿತಾ ಬಿಜೆಪಿ

ಕಳೆದ 2017 ರ ಚುನಾವಣೆಯಲ್ಲಿ ಎಸ್‌ಪಿ ಕೇವಲ 47 ಸ್ಥಾನಗಳನ್ನು ಗೆದ್ದಿದ್ದರೆ, 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 44 ಸ್ಥಾನಗಳನ್ನು ಗಳಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಈಗ ಎಸ್ಪಿ ತನ್ನ ಸಂಖ್ಯೆಯನ್ನು ಹೆಚ್ಚಿಸಬಹುದು ಎಂಬ ವಿಶ್ವಾಸವನ್ನಿಟ್ಟುಕೊಂಡಿದೆ. ಬಿಜೆಪಿಯ ಮತದಾರರನ್ನು ಓಲೈಸಲು ಸಾಧ್ಯವಾಗದಿರುವುದು ಎಸ್‌ಪಿಗೆ ಈ ಚುನಾವಣೆಯಲ್ಲಿ ಕಷ್ಟವಾಗಿದೆ. ಆದರೆ ಎಸ್‌ಪಿ ಪಕ್ಷಕ್ಕೆ ಬಿಎಸ್ಪಿ ಮತದಾರರು ಮತಚಲಾಯಿಸಿದ್ದಾರೆನ್ನುವುದು ಮಾತ್ರ ಸತ್ಯ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ 19 ಸ್ಥಾನಗಳಲ್ಲಿ ಜಯಗಳಿಸಿದ್ದರೆ, 2019ರಲ್ಲಿ ಬಿಎಸ್‌ಪಿ 65 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. 2019ರಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು ಎಂಬುದು ಪ್ರಮುಖ ವಿಷಯ.

ಎಕ್ಸಿಟ್ ಪೋಲ್‌

ಎಕ್ಸಿಟ್ ಪೋಲ್‌

ಶೇಕಡಾವಾರು ಮತಗಳ ಬಗ್ಗೆ ಮಾತನಾಡುವುದಾದರೆ, 2017 ರಲ್ಲಿ ಬಿಎಸ್‌ಪಿ ಶೇಕಡಾ 22ರಷ್ಟು ಮತಗಳನ್ನು ಪಡೆದಿದ್ದರೆ, ಈ ಬಾರಿ ಪಕ್ಷವು ಶೇಕಡಾ 12ರಷ್ಟು ಮತಗಳನ್ನು ಪಡೆಯುವಂತಿದೆ. ಎಸ್‌ಪಿಯ ಮತ ಗಳಿಕೆಯಲ್ಲಿ ಹೆಚ್ಚಳವಾಗಿದ್ದರೂ, ಪಕ್ಷ 21.8% ಮತಗಳನ್ನು ಪಡೆಯಬಹುದು. 2017 ರಲ್ಲಿ ಎಸ್‌ಪಿ 21.8% ಮತಗಳನ್ನು ಪಡೆದಿದ್ದರೆ, 2019 ರಲ್ಲಿ ಪಕ್ಷ 20.1% ಮತಗಳನ್ನು ಪಡೆದಿದೆ. ಆದರೆ ಎಕ್ಸಿಟ್ ಪೋಲ್‌ಗಳ ಪ್ರಕಾರ, ಎಸ್‌ಪಿ ಈ ಬಾರಿ ಶೇಕಡಾ 36 ರಷ್ಟು ಮತಗಳನ್ನು ಪಡೆಯಬಹುದು. ಬಿಜೆಪಿ ಶೇ 46ರಷ್ಟು ಮತಗಳನ್ನು ಪಡೆಯಬಹುದು. 2017ರಲ್ಲಿ ಬಿಜೆಪಿ 41.4% ಮತಗಳನ್ನು ಪಡೆದಿತ್ತು. 2019ರಲ್ಲಿ ಬಿಜೆಪಿ 51.2% ಮತಗಳನ್ನು ಪಡೆದಿತ್ತು.

ಈ ಬಾರಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ

ಈ ಬಾರಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ

ಕಾಂಗ್ರೆಸ್ ಬಗ್ಗೆ ಮಾತನಾಡುವುದಾದರೆ ಪಕ್ಷ 2017ರಲ್ಲಿ 6.2 ಶೇಕಡಾ ಮತಗಳನ್ನು ಪಡೆದಿದ್ದರೆ, 2019ರಲ್ಲಿ ಪಕ್ಷವು 6.4 ಶೇಕಡಾ ಮತಗಳನ್ನು ಪಡೆದಿದೆ. ಆದರೆ ಎಕ್ಸಿಟ್ ಪೋಲ್‌ಗಳನ್ನು ನಂಬುವುದಾದರೆ ಈ ಬಾರಿ ಕಾಂಗ್ರೆಸ್ ಕೇವಲ 3 ಶೇಕಡಾ ಮತಗಳನ್ನು ಪಡೆಯಬಹುದು. ಕಾಂಗ್ರೆಸ್ ಪಕ್ಷ 1-3 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. 2017ರಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಗೆದ್ದಿತ್ತು. 2017ರಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 325 ಸ್ಥಾನಗಳನ್ನು ಗೆದ್ದಿದ್ದವು. ಎಕ್ಸಿಟ್ ಪೋಲ್‌ಗಳನ್ನು ನಂಬಿದರೆ ಬಿಜೆಪಿ ಸುಮಾರು 35 ಸ್ಥಾನಗಳನ್ನು ಕಳೆದುಕೊಳ್ಳಬಹುದು. 2019ರಲ್ಲಿ ಬಿಜೆಪಿ 284 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+