ಪ್ರಿಯಾಂಕಾ ಗಾಂಧಿ ಎದುರಲ್ಲೇ 'ಕೈ' ಕಾರ್ಯಕರ್ತರು ಹೀಗೆ ವರ್ತಿಸುವುದೇ?

ಲಕ್ನೋ, ಜನವರಿ.04: ಕಾಂಗ್ರೆಸ್ ಜನರಲ್ ಸೆಕ್ರಟರಿ ಪ್ರಿಯಾಂಕಾ ವಾದ್ರಾ ಎದುರಿನಲ್ಲೇ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ಹೈಕಮಾಂಡ್ ನಾಯಕಿಯಲ್ಲೇ ಅಚ್ಚರಿ ಹುಟ್ಟಿಸಿದೆ.

ಉತ್ತರ ಪ್ರದೇಶ ಮೀರತ್ ನ ಪರ್ತಾರ್ ಪುರ್ ಗೆ ಎಐಸಿಸಿ ಜನರಲ್ ಸೆಕ್ರಟರಿ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದ್ದು, ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ಡಿಸೆಂಬರ್.20ರಂದು ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಉಗ್ರ ಹೋರಾಟ ನಡೆದಿತ್ತು. ಅಂದು ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಹಾಗೂ ಗಂಭೀರವಾಗಿ ಗಾಯಗೊಂಡವರ ಮನೆಗೆ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದರು.

Congress workers Fight Infront Of AICC General Secretary Priyanaka Vadra.

ಕೈ ಕೈ ಮಿಲಾಯಿಸಿದ ಕೈ ಕಾರ್ಯಕರ್ತರು

ಮುಜಾಫರ್ ನಗರದ ನೂರಾ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ, ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಇನ್ನೊಂದೆಡೆ ಪೊಲೀಸರು ನಡೆಸಿ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ರುಖೈಯಾ ಪರ್ವೀನಾ ಮನೆಗೂ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದ್ದರು. ಇದರ ಮಧ್ಯೆ ಪರ್ತಾರ್ ಪುರ್ ನಲ್ಲಿ ಕಾರ್ಯಕರ್ತರ ಜೊತೆಗಿನ ಮಾತುಕತೆ ವೇಳೆ ಪಕ್ಷದ ಕಾರ್ಯಕರ್ತರೇ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+