ನಮ್ಮನ್ನು ಕಡೆಗಣಿಸಿದರೆ ಅಪಾಯ! ಮಾಯಾವತಿಗೆ ಕಾಂಗ್ರೆಸ್ ಖಡಕ್ ಎಚ್ಚರಿಕೆ
Recommended Video

ಲಕ್ನೋ, ಜನವರಿ 12: "ನಮ್ಮನ್ನು ಕಡೆಗಣಿಸಿದರೆ ಅದೊಂದು ದೊಡ್ಡ ತಪ್ಪಾಗಲಿದೆ. ಅದರಿಂದ ನಿಮಗೇ ಅಪಾಯ" ಎಂದು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರಿಗೆ ಕಾಂಗ್ರೆಸ್ ಖಡಕ್ ವಾರ್ನಿಂಗ್ ನೀಡಿದೆ.
ಕಾಂಗ್ರೆಸ್ ಅನ್ನು ಹೊರಗಿಟ್ಟು ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿರುವ ಬಿಎಸ್ಪಿ-ಎಸ್ಪಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
"ನಮ್ಮೆಲ್ಲರ ಗುರಿಯೂ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವುದು. ಎಲ್ಲರ ಉದ್ದೇಶವೂ ಒಂದೇ ಆಗಿರುವಾಗ ಬೇರೆ ಬೇರೆಯಾಗಿ ಹೋರಾಡುವುದು ಎಲ್ಲ ಪಕ್ಷಗಳಿಗೂ ನಷ್ಟ. ಕಾಂಗ್ರೆಸ್ ಅನ್ನು ಹೊರಗಿಟ್ಟು ಚುನಾವಣೆ ಎದುರಿಸಿದರೆ ಮುಂದೆ ಅಪಾಯ ಎದುರಿಸಬೇಕಾಗಬಹುದು" ಎಂದು ಸಿಂಘ್ವಿ ಹೇಳಿದ್ದಾರೆ.

ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ್ ಇಬ್ಬರೂ ಒಂದಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದಾರೆ. ಆದರೆ ಈ ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ. ಉತ್ತರ ಪ್ರದೇಶದಲ್ಲಿ ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ 78(80) ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈ ಮೈತ್ರಿಕೂಟ ನಿರ್ಧರಿಸಿದೆ. ಈ ಎರಡು ಕ್ಷೇತ್ರ ಗಾಂಧಿ ಕುಟುಂಬದ ಭದ್ರಕೋಟೆಯಗಿರುವ ಕಾರಣ ಈ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಮೈತ್ರಿಕೂಟ ಕಣಕ್ಕಿಳಿಸುತ್ತಿಲ್ಲ.












Click it and Unblock the Notifications