ರೈತರ ಪ್ರತಿಭಟನೆಗೆ ರಾಜಕೀಯ ತಿರುವು? ರಾಂಪುರಕ್ಕೆ ಪ್ರಿಯಾಂಕಾ ಭೇಟಿ
ಲಖ್ನೋ, ಫೆಬ್ರುವರಿ 04: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆಗೆ ವಿರೋಧ ಪಕ್ಷಗಳು ಬೆಂಬಲ ಸೂಚಿಸುತ್ತಿವೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೂಡ ರೈತರಿಗೆ ಬೆಂಬಲ ಘೋಷಿಸಿದೆ.
ಈ ನಡುವೆ ಪ್ರತಿಭಟನೆಯು ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಮಾತುಗಳೂ ಕೇಳಿಬರುತ್ತಿವೆ. ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಗಣರಾಜ್ಯೋತ್ಸವದಂದು ನಡೆದ ಗಲಭೆ ಸಂದರ್ಭ ಸಾವನ್ನಪ್ಪಿದ ರೈತ ನವರೀತ್ ಸಿಂಗ್ ಮನೆಗೆ ಭೇಟಿ ನೀಡಲು ರಾಂಪುರಕ್ಕೆ ತೆರಳುತ್ತಿದ್ದಾರೆ.

ನವರೀತ್ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ರಾಂಪುರಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿದುಬಂದಿದೆ. ನವರೀತ್ ಸಿಂಗ್ ಅವರು ಕೆನಡಾದಿಂದ ಇಲ್ಲಿಗೆ ಬಂದು ರೈತರ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಪೊಲೀಸರು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಇಲ್ಲಿಗೆ ಬಂದು ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ಲಲ್ಲು ತಿಳಿಸಿದ್ದಾರೆ.












Click it and Unblock the Notifications