ವಿಶ್ವಾಸ ಮತ: ಬಿಎಸ್‌ಪಿ ಶಾಸಕ ಮಹೇಶ್‌ಗೆ ಮಾಯಾವತಿ ನಿರ್ದೇಶನ ಏನು?
Recommended Video
ಲಕ್ನೋ, ಜುಲೈ 22: ಕರ್ನಾಟಕ ಸರ್ಕಾರದ ವಿಶ್ವಾಸಮತ ಯಾಚನೆ ರಾಜಕೀಯ ನಾಟಕ ಮುಂದುವರೆದಿದ್ದು, ಬಿಎಸ್‌ಪಿಯ ದ್ವಂದ್ವ ಹೆಚ್ಚಿದೆ.
ಆರಂಭದಲ್ಲಿ ಬಿಜೆಪಿ ಪರ ಮತದಾನ ಮಾಡುವುದಾಗಿ ಮಹೇಶ್ ತಿಳಿಸಿದ್ದರು.ಬಳಿಕ ಮತದಾದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದರು. ಈ ಎರಡೂ ಬೆಳವಣಿಗೆಯೂ ಬಿಎಸ್‌ಪಿ ನಾಯಕರ ನಿರ್ದೇಶನದಂತೆಯೇ ನಡೆದಿತ್ತು.
ಆದರೆ ವಿಶ್ವಾಸಮತಕ್ಕೂ ಮುನ್ನ ಟ್ವೀಟ್ ಮಾಡಿರುವ ಮಾಯಾವತಿ ಕುಮಾರಸ್ವಾಮಿ ಸರ್ಕಾರದ ಪರ ನಿಲ್ಲಲು ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಕರ್ನಾಟಕದಲ್ಲಿರುವ ಬಿಎಸ್‌ಪಿ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾಯಾವತಿಯ ಈ ಟ್ವೀಟ್ ಗೊಂದಲ ಮೂಡಿಸಿದ್ದರೂ ಕುಮಾರಸ್ವಾಮಿ ಸರ್ಕಾರಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.
ಭಾನುವಾರ ಮಧ್ಯಾಹ್ನವಷ್ಟೇ ಹೇಳಿಕೆ ನೀಡಿದ್ದ ಶಾಸಕ ಮಹೇಶ್ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಲಾಪದಿಂದ ದೂರ ಉಳಿಯುತ್ತೇನೆ. ಬಿಜೆಪಿ ಅಥವಾ ಕಾಂಗ್ರೆಸ್ ಪರ ಮತದಾನ ಮಾಡದಿರಲು ನಿರ್ಧರಿಸಲಾಗಿದೆ. ಬಿಎಸ್‌ಪಿ ಹೈಕಮಾಂಡ್ ನಿರ್ದೇಶನದಂತೆ ಹೀಗೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.
ಆದರೆ ಕೊನೆಯ ಕ್ಷಣದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಧ್ಯಪ್ರವೇಶಿಸಿ ಮಾಯಾವತಿ ಜೊತೆಗೆ ಮಾತನಾಡಿದ ಬಳಿಕ ಈ ಬದಲಾವಣೆಗ ನಡೆದಿದೆ.
ಹಾಗೆಯೇ ಬಿಎಸ್‌ಪಿ ಉಪಾಧ್ಯಕ್ಷ ಹಾಗೂ ಮಾಯಾವತಿ ಸಹೋದರ ಆನಂದ್ ಕುಮಾರ್‌ಗೆ ಸೇರಿದ ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ ಮಾಡಿರುವುದು ಬಿಎಸ್‌ಪಿ ಕೆಂಗಣ್ಣಿಗೆ ಕಾರಣವಾಗಿದೆ. ಬಿಜೆಪಿ ಸಕಾರದ ಈ ಕ್ರಮದಿಂದ ಅಸಮಧಾನಗೊಂಡಿರುವ ಮಾಯಾವತಿ ಈ ಕ್ರಮಕ್ಕೆ ಸೂಚಿಸಿದ್ದಾರೆ .
ಎನ್ನಲಾಗಿದೆ.ದೇವೇಗೌಡರು ಕೂಡ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ ಸಂಬಂಧಿಸಿ ಮಾಯಾವತಿಗೆ ಮಾಯಾವತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಜತೆಗಿದ್ದ ಮಹೇಶ್ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಆದರೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದ ಬಿಎಸ್‌ಪಿ ಸರ್ಕಾರದಿಂದ ಹೊರ ಬರುವಂತೆ ಮಹೇಶ್‌ಗೆ ನಿರ್ದೇಶಿಸಿತ್ತು.ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದಿಂದ ಹೊರಹೋಗಿದ್ದರು.












Click it and Unblock the Notifications