ಅಮೇಥಿ: ರೈಲ್ವೆ ಹಳಿ ಮೇಲೆ ಮಾಜಿ ಸಚಿವರ ಸಂಬಂಧಿ ಶವ ಪತ್ತೆ
ಅಮೇಥಿ,ಫೆಬ್ರವರಿ 12: ಅಮೇಥಿಯ ರೈಲ್ವೆ ಹಳಿ ಮೇಳೆ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಸಂಬಂಧಿ(ಸಹೋದರನ ಮಗ)ಯ ಶವ ಪತ್ತೆಯಾಗಿದೆ.
20 ವರ್ಷದ ಶುಭಂ ಮೃತಪಟ್ಟವರು, ಅಮೇಥಿಯ ಖರೌನಾ ಪ್ರದೇಶದಲ್ಲಿ ಘಟನೆ ನಡೆದಿದೆ. ಗುರುವಾರ ಸಂಜೆ ಆತ ಮನೆಯಿಂದ ಹೊರಗೆ ಹೋಗಿದ್ದ, ಬಳಿಕ ರೈಲ್ವೆ ಹಳಿಯಲ್ಲಿ ಶವ ಪತ್ತೆಯಾಗಿದೆ ಎಂದು ಅಮೇಥಿ ಎಸ್‌ಎಚ್‌ಒ ಶ್ಯಾಂ ಸುಂದರ್ ತಿಳಿಸಿದ್ದಾರೆ.
ಅಂತ್ಯಸಂಸ್ಕಾರಕ್ಕೂ ಅಸಹಾಯಕತೆ; ಸಮಾಜಸೇವಕರ ಮಾನವೀಯತೆ
ಶುಭಂ ತಲೆ ದೇಹದಿಂದ ಬೇರೆಯಾಗಿತ್ತು, ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಜಾಪತಿಯವರ ಕಿರಿಯ ಸಹೋದರ ಜಗದೀಶ್ ಪ್ರಜಾಪತಿ ಅವರ ಮಗನಾಗಿದ್ದಾನೆ. ಶುಭಂ ಅಮೇಥಿಯ ಪಾರ್ಸವಾ ಹಳ್ಳಿಯಲ್ಲಿ ವಾಸವಿದ್ದಾರೆ.
ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರು ಸಮಾಜವಾದಿ ಪಕ್ಷದ ಅಧಿಕಾರದ ಸಂದರ್ಭದಲ್ಲಿ ಸಚಿವರಾಗಿದ್ದರು, ಈಗ ಜೈಲಿನಲ್ಲಿದ್ದಾರೆ.