ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ದೋಣಿ ವಿಹಾರ ಮಾಡ್ಬಿಟ್ರೆ ಚುನಾವಣೇಲಿ ಗೆದ್ದುಬಿಡೋಲ್ಲ!"

|
Google Oneindia Kannada News

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ದೋಣಿ ವಿಹಾರ ಮಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ವಿಭಿನ್ನವಾಗಿ ನಾಂದಿ ಹಾಡಿದ ಪ್ರಿಯಾಂಕಾ ಗಾಂಧಿ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ.

ಬಡೇ ಹನುಮಾನ್ ಗೆ ನಮಿಸಿ 'ಗಂಗಾ ಯಾತ್ರೆ' ಆರಂಭಿಸಿದ ಪ್ರಿಯಾಂಕಾಬಡೇ ಹನುಮಾನ್ ಗೆ ನಮಿಸಿ 'ಗಂಗಾ ಯಾತ್ರೆ' ಆರಂಭಿಸಿದ ಪ್ರಿಯಾಂಕಾ

"ಪ್ರಿಯಾಂಕಾ ಗಾಂಧಿ ಅವರು ಎಷ್ಟು ಬಾರಿ ಬೇಕಾದರೂ ದೋಣಿ ವಿಹಾರ ಮಾಡಬಹುದು. ಎಷ್ಟು ದೇವಾಲಯಗಳನ್ನು ಬೇಕಾದರೂ ಸುತ್ತಬಹುದು. ಆದರೆ ಆಕೆಗೆ ಒಂದು ವಿಷಯ ಗೊತ್ತಿರಲಿ. ಉತ್ತರ ಪ್ರದೇಶದ ಜನರು ಯಾರನ್ನು ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನಿಸಿದ್ದಾರೆ" ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ? ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ?

"ನಮ್ಮ ಪಕ್ಷ 73 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ" ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Boat ride cant ensure win: BJP to Priyanka Gandhi

ಮೂರು ದಿನಗಳ ಪ್ರಯಾಗ್ ರಾಜ್ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ, ದೋಣಿ, ಕಾಲ್ನಡಿಗೆ ಮತ್ತು ಕಾರಿನ ಮೂಲಕ ಒಟ್ಟು 140 ಕಿ.ಮೀ. ಸಾಗಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನರನ್ನು ತಲುಪುವ ಉದ್ದೇಶ ಅವರದು.

ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಅವರು ಕಣಕ್ಕಿಳಲಿಯುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದ್ದು, ಅವರು ಪಕ್ಷದ ಪರ ಪ್ರಚಾರದಲ್ಲೇ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

English summary
A boat ride cannot ensure a win in the elections. She (Priyanka) can visit as many temples and take as many boat rides as she wants. (But) The truth is that people will decide who to vote for and in UP, Congress will struggle to win anything at all BJP tells about Priyanka Gandhi's boatride at Uttar Pradsh's Prayagraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X