ಸಮರಾಂಗಣ: ಯುಪಿಎ ಅಧ್ಯಕ್ಷೆ ವಿರುದ್ಧ ಮಾಜಿ ಕಾಂಗ್ರೆಸ್ಸಿಗ ಕಣಕ್ಕೆ

ರಾಯ್ ಬರೇಲಿ(ಉ.ಪ್ರ), ಏಪ್ರಿಲ್ 05: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾಜಿ ಕಾಂಗ್ರೆಸ್ ನಾಯಕರನ್ನು ಎದುರಾಳಿಯಾಗಿ ಕಣಕ್ಕಿಳಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಯ್ಬರೇಲಿಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮಾಜಿ ಎಂಎಲ್ ದಿನೇಶ್ ಪ್ರತಾಪ್ ಸಿಂಗ್ ಅವರು ಸೋನಿಯಾ ವಿರುದ್ಧ ಕಣಕ್ಕಿಳಿದಿದ್ದಾರೆ.

2016ರಲ್ಲಿ ವಿಧಾನಪರಿಷತ್ ಗೆ ಎರಡನೇ ಬಾರಿಗೆ ಆಯ್ಕೆಯಾದ ದಿನೇಶ್ ಅವರು 2018ರಲ್ಲಿ ಕಾಂರ್ಗೆಸ್ ತೊರೆದು ಬಿಜೆಪಿ ಸೇರಿದ್ದರು. ವಿಶೇಷವೆಂದರೆ, ದಿನೇಶ್ ಕಿರಿಯ ಸಹೋದರ ರಾಕೇಶ್ ಸಿಂಗ್ ರಾಯ್ಬರೇಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರ್​ಚಂದಪುರ್ ವಿಧಾನಸಭಾ ಕ್ಷೇತ್ರದ ಶಾಸಕ. 1966, 1996 ಹಾಗೂ 1998 ಹೊರತುಪಡಿಸಿ 1952ರಿಂದ ರಾಯ್ಬರೇಲಿ ಕಾಂಗ್ರೆಸ್ ವಶದಲ್ಲಿದೆ.

BJP Fields Dinesh Pratap Singh Opposite Sonia Gandhi In Rae Bareli

2004ರಿಂದ ಈ ಕ್ಷೇತ್ರದಿಂದ ಸೋನಿಯಾ ಆಯ್ಕೆಯಾಗುತ್ತಿದ್ದಾರೆ.ಸೋನಿಯಾ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಯತ್ನಿಸಿತ್ತು. ದೆಹಲಿ ಸಂಸದೆ ಮೀನಾಕ್ಷಿ ಲೇಖಿ, ಉತ್ತರಪ್ರದೇಶದ ಸಚಿವೆ ಅನುಪಮಾ ಜೈಸ್ವಾಲ್, ಉತ್ತರಪ್ರದೇಶದ ಬಿಜೆಪಿ ವಕ್ತಾರ, ನಟ ಮನೋ ಬಾಜಪೇಯಿ ಅವರ ಹೆಸರುಗಳು ಕೂಡಾ ಪರಿಗಣಿಸಲಾಗಿತ್ತು. ಕೊನೆಗೆ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಅವಕಾಶ ಸಿಕ್ಕಿದೆ.

ಇದೇ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸ್ಪರ್ಧಿಸಿರ ಆಜಂಗಢದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭೋಜಪುರಿ ನಟ, ಗಾಯಕ ದಿನೇಶ್ ಲಾಲ್ ಯಾದವ್​ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ವಿರುದ್ಧ ವಿರುದ್ಧ ಪ್ರೇಮ್ ಸಿಂಗ್ ಶಾಖ್ಯ ಅವರು ಸ್ಪರ್ಧಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+