ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ನೀಡಲಿಲ್ಲ ಎಂದು ಇಬ್ಬರನ್ನು ಢಂ ಎನಿಸಿದ

ಲಖನೌ (ಉತ್ತರಪ್ರದೇಶ), ನವೆಂಬರ್ 1: ಯಾರಾದರೂ ವಸ್ತು ಖರೀದಿಸಿದ ನಂತರ ರಿಯಾಯಿತಿ ನೀಡದಿದ್ದರೆ ಏನು ಮಾಡಬಹುದು? ಇಲ್ಲೊಬ್ಬ ವ್ಯಕ್ತಿ ವಾರಾಣಸಿಯ ಮಾಲ್ ವೊಂದರಲ್ಲಿ ಇಬ್ಬರು ಸೇಲ್ಸ್ ಮನ್ ಗಳನ್ನು ಗುಂಡಿಟ್ಟು ಕೊಂದೇಬಿಟ್ಟಿದ್ದಾನೆ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ಈ ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯಗಳಾಗಿವೆ.

ಮಾಲ್ ನ ಬಟ್ಟೆ ಅಂಗಡಿಯೊಂದರಲ್ಲಿ ಬೆಲೆ ಮೇಲೆ ರಿಯಾಯಿತಿ ನೀಡುವಂತೆ ಕೇಳುತ್ತಾ ಸೇಲ್ಸ್ ಮನ್ ಜತೆಗೆ ವಾದ ತಾರಕಕ್ಕೇರಿದೆ. ಆ ವೇಳೆ ಆರೋಪಿಯು ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಮತ್ತಿಬ್ಬರಿಗೆ ಗಾಯಗಳಾಗಿವೆ. ಸುನೀಲ್ ಹಾಗೂ ಗೋಪಿ ಎಂಬಿಬ್ಬರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಗೋಲು ಮತ್ತು ವಿಶಾಲ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರಿಬ್ಬರ ಸ್ಥಿತಿ ಗಂಭೀರವಾಗಿದೆ.

Bizarre News: Denied discount, man allegedly Killed 2 Sales persons in Varanasi mall

ಈ ಘಟನೆಯಿಂದ ಮಾಲ್ ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಹಳ ಜನರು ಇರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಆ ನಂತರ ಮಳಿಗೆಯನ್ನು ಮುಚ್ಚಲಾಗಿದೆ. ಕಂಟೋನ್ಮೆಂಟ್ ರಸ್ತೆ ಪ್ರದೇಶದಲ್ಲಿರುವ ಮಾಲ್ ನಲ್ಲಿ ಜನರನ್ನು ತೆರವು ಮಾಡಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿದ್ದವರನ್ನು ವಿಚಾರಣೆ ಮಾಡಲಾಗುತ್ತದೆ. ಜತೆಗೆ ಸಿಸಿಟಿವಿ ಫೂಟೇಜ್ ಪರಿಶೀಲಿಸಲಾಗುತ್ತಿದೆ. ಆದರೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+