ಯೋಗಿ ತವರು ಕ್ಷೇತ್ರದಲ್ಲಿ ಭೋಜ್‌ಪುರಿ ಸ್ಟಾರ್ ನಟ ರವಿ ಕಿಶನ್‌ಗೆ ಬಿಜೆಪಿ ಟಿಕೆಟ್
ಲಕ್ನೋ, ಏ.16: ಭೋಜ್‌ಪುರಿ ಚಿತ್ರರಂಗದ ಸ್ಟಾರ್ ನಟ ರವಿ ಕಿಶನ್‌ಗೆ ಯೋಗಿ ಆದಿತ್ಯನಾಥ್ ತವರುಮನೆಯಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ.
ಲೋಸಭಾ ಉಪ ಚುನಾವಣೆಯಲ್ಲಿ ಮಹಾಮೈತ್ರಿ ಎದುರು ಸೋಲು ಕಂಡು ತೀವ್ರ ಮುಖಭಂಗ ಎದುರಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಈಗ ಏನಾದರೂ ಮಾಡಿ ಗೋರಖ್‌ಪುರ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಈ ನಿರ್ಧಾರ ಮಾಡಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿರುವ 9ಕ್ಷೇತ್ರಗಳ 21ನೇ ಪಟ್ಟಿಯಲ್ಲಿ ರವಿ ಕಿಶನ್ ಹೆಸರೂ ಕೂಡ ಇದೆ. ಈಗಾಗಲೇ ಬಿಜೆಪಿ ಸೇರಿರುವ ರವಿ ಕಿಶನ್ ರಂಗದ ಖ್ಯಾತಿಯ ಕಾರಣದಿಂದ ಉತ್ತರಪ್ರದೇಶ ಹಾಗೂ ಬೇರೆ ರಾಜ್ಯಗಳಲ್ಲಿ ಖ್ಯಾತರಾಗಿದ್ದಾರೆ.
ಭೋಜಪುರಿ ಚಿತ್ರರಂಗದ ನಂಬರ್ ಒನ್ ನಟ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು , ಕನ್ನಡ ಸೇರಿ ಇತರೆ ಭಾಷೆಗಳಲ್ಲಿಯೂ ರವಿ ಕಿಶನ್ ನಟಿಸಿದ್ದಾರೆ.
ಇದರ ಮಧ್ಯೆ ನಿಶಾದ್ ಪಕ್ಷದ ಮುಖ್ಯಸ್ಥ ಪ್ರವೀಣ್ ನಿಷಾದ್ ಕ್ಷೇತ್ರ ಬದಲಿಸಲಾಗಿದೆ. ಗೋರಖ್‌ಪುರದ ಹಾಲಿ ಸಂಸದರಾಗಿರುವ ಪ್ರವೀಣ್ ಅವರಿಗೆ ಸಂತಕಬೀರ ನಗರದಿಂದ ಬಿಜೆಪಿ ಟಿಕೆಟ್ ನೀಡಿದೆ.
ಗೋರಖ್‌ಪುರ ಉಪ ಚುಆವಣೆಯಲ್ಲಿ ಎಸ್‌ಪಿ, ಬಿಎಸ್‌ಪಿ ಮಹಾಮೈತ್ರಿಯಲ್ಲಿ ನಿಷಾದ್ ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನಾಗಿಯೂ ಘೋಷಿಸಲಾಗಿತ್ತು.
ಆದರೆ ಬಿಜೆಪಿ ಕಾರ್ಯತಂತ್ರದ ಪರಿಣಾಮವಾಗಿ ನಿಷಾದ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಗೋರಖ್‌ಪುರ ಸಂತ ಕಬೀರನಗರ ಹಾಗೂ ಉತ್ತರಪ್ರದೇಶದ ಕೆಲ ಕ್ಷೇತ್ರಗಳಲ್ಲಿ ನಿಷಾದ್ ಸಮುದಾಯ ತೀವ್ರ ಪ್ರಭಾವ ಹೊಂದಿದೆ.











Click it and Unblock the Notifications