ಉತ್ತರ ಪ್ರದೇಶ ರಣರಂಗ: ನೊಟಾ ಆಯ್ಕೆಗೆ ಲಖಿಂಪುರ ಖೇರಿ ರೈತರ ಚಿಂತನೆ
ಲಖಿಂಪುರ ಖೇರಿ (ಯುಪಿ) ಫೆಬ್ರವರಿ 02: ಅಕ್ಟೋಬರ್ ತಿಂಗಳಿನಲ್ಲಿ ನಡೆದ ಲಖಿಂಪುರ ಖೇರಿ ಘಟನೆಯಿಂದ ಇನ್ನೂ ಸಮಾಧಾನಗೊಳ್ಳದ ಲಖಿಂಪುರ ಖೇರಿ ರೈತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 'ನೋಟಾ' ಆಯ್ಕೆಯನ್ನು ಬಳಸಲು ಯೋಚಿಸುತ್ತಿದ್ದಾರೆ. ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ತಮ್ಮನ್ನು ಮೋಸ ಮಾಡಿದ್ದರೆ, ಇತರ ಪಕ್ಷಗಳು ನಿಷ್ಪರಿಣಾಮಕಾರಿ ಎಂದು ಲಖಿಂಪುರ ರೈತರು ಆರೋಪಿಸಿದ್ದಾರೆ.
ತೆರಾಯ್ ಬೆಲ್ಟ್‌ನಲ್ಲಿರುವ ಲಖಿಂಪುರ ಖೇರಿ ಜಿಲ್ಲೆಯ ಜನಸಂಖ್ಯೆಯ ಬಹುಪಾಲು ರೈತರು, ವಿವಾದಿತ ಕೃಷಿ ಕಾನೂನುಗಳಿಂದಾಗಿ ಬಿಜೆಪಿಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ. ಹಾಗಂತ ಅಖಿಲೇಶ್ ಯಾದವ್ ಅವರ ಎಸ್‌ಪಿಯನ್ನು ಬೆಂಬಲಿಸಲು ಲಖಿಂಪುರ ರೈತರು ಬಯಸುವುದಿಲ್ಲ. ಯಾದವ್ ನೇತೃತ್ವದ ಸರ್ಕಾರವು ಕಬ್ಬು ಗಿರಣಿ ಮಾಲೀಕರು ಸಾಗುವಳಿದಾರರಿಗೆ ಪಾವತಿಸಬೇಕಾದ 2,000 ಕೋಟಿ ರೂಪಾಯಿ ಬಡ್ಡಿಯನ್ನು ಮನ್ನಾ ಮಾಡಿದೆ. ಇದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಅಧಿಕಾರಕ್ಕಾಗಿ ಓಟು, ಕೆಲಸಕ್ಕಾಗಿ ಬರೀ ನೋಟು
ಚುನಾವಣೆಯ ಸಮಯದಲ್ಲಿ ಎಲ್ಲಾ ಪಕ್ಷಗಳು ಅವರಿಗೆ ಸಹಾಯ ನೀಡುತ್ತವೆ. ಆದರೆ ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ, ಅಗತ್ಯ ಬಿದ್ದರೆ ಫೆಬ್ರವರಿ 23 ರಂದು 'ನೋಟಾ' (ಮೇಲಿನ ಯಾವುದೂ ಅಲ್ಲ) ಆಯ್ಕೆ ಮಾಡುತ್ತೇವೆ ಎಂದು ಹಲವಾರು ರೈತರು ಹೇಳಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು (ಬಿಜೆಪಿ, ಎಸ್‌ಪಿ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್) ಚುನಾವಣಾ ಸಮಯದಲ್ಲಿ ಅವರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತವೆ. ಚುನಾವಣೆ ಬಳಿಕ ಅವುಗಳನ್ನು ಸರಕುಗಳಾಗಿ ಬಳಸುತ್ತವೆ ಎಂದು ಇಲ್ಲಿನ ಪಾಲಿಯಾ ತಹಸಿಲ್‌ನಲ್ಲಿರುವ ಮಾರೌಚಾ ಗ್ರಾಮದ ರೈತ ಜಗ್‌ಪಾಲ್ ಧಿಲ್ಲೋನ್ ಪಿಟಿಐಗೆ ತಿಳಿಸಿದ್ದಾರೆ.

ಲಖಿಂಪುರದಲ್ಲಿ ನೋಟಾ ಆಯ್ಕೆಗೆ ರೈತರ ಚಿಂತನೆ
ಚುನಾವಣಾ ವ್ಯವಸ್ಥೆಯ ಪ್ರಮುಖ ಅಸ್ತ್ರ ಎಂದು ನೋಟಾ ಆಯ್ಕೆಯನ್ನು ಗುರುತಿಸಲಾಗುತ್ತಿದೆ. ಮತದಾನದ ಮೂಲಕ ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತದಾನಕ್ಕಿದೆ. ಮತ ಚಲಾವಣೆ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ. ಆದರೆ ಇತ್ತೀಚಿನ ರಾಜಕೀಯ ವ್ಯವಸ್ಥೆಯಿಂದ ಸೂಕ್ತ ಅಭ್ಯರ್ಥಿಯ ಆಯ್ಕೆಯು ಮತದಾರನಿಗೆ ಗೊಂದಲವೇ ಸರಿ. ಇಂತಹ ಸಂದರ್ಭದಲ್ಲಿ ಯಾವೊಬ್ಬ ಅಭ್ಯರ್ಥಿಗೂ ಮತ ಚಲಾಯಿಸದೇ ತನ್ನ ಮತದಾನದ ಕರ್ತವ್ಯವನ್ನು ನಿಭಾಯಿಸುವುದೇ ನೋಟಾ ಆಯ್ಕೆ. ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದು ನಿಮ್ಮ ಅಭಿಪ್ರಾಯ ತಿಳಿಸಲು ಸಿಕ್ಕಿರುವ ಹೊಸ ಹಕ್ಕು.
2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ 'ಪೀಪಲ್ ಯೂನಿಯನ್ ಫರ್ ಸಿವಿಕ್ ಲಿಬರ್ಟೀಸ್' ಎಂಬ ಸಂಸ್ಥೆ ನೋಟಾ ಜಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ಈ ಅರ್ಜಿಯನ್ನು ಬೆಂಬಲಿಸಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ ನೋಟಾ ಆಯ್ಕೆಯನ್ನು ಮತಪತ್ರ, ಮತಯಂತ್ರದಲ್ಲಿ ಅಳವಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಅಲ್ಲದೆ ಇದರಿಂದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದೆಂದು ಸುಪ್ರೀಂಕೋರ್ಟ್ ಪರೋಕ್ಷ ಸೂಚನೆ ನೀಡಿತ್ತು.
ಈ ಬಳಿಕ ಚುನಾವಣಾ ಆಯೋಗವು ಮೊದಲ ಬಾರಿ ನೋಟಾ ಆಯ್ಕೆಯನ್ನು ಅಕ್ಷರದ ಸಂಕೇತವಾಗಿ ನೀಡಿತ್ತು. ಇದರಿಂದ ಒಂದಷ್ಟು ಗೊಂದಲಗಳು ಕೂಡ ಉಂಟಾಗಿದ್ದವು. ಆದರೆ ಇದೀಗ ಆಯೋಗವು ನೋಟಾ ಚಿಹ್ನೆಯನ್ನು ರೂಪಿಸಿದ್ದು, ಗುಣಿಸು ಗುರುತು ಅಥವಾ ತಪ್ಪು ರೀತಿಯಲ್ಲಿ ಇರುವ ಚಿಹ್ನೆಯು ಮುಂಬರುವ ಚುನಾವಣೆಯಲ್ಲಿ ಇವಿಎಂ ಮೇಲೆ ಕಾಣಿಸಲಿದೆ. 2013 ರಲ್ಲಿ ನಡೆದ ಛತ್ತೀಸ್ಗಢ್, ಮಿಜೋರಾಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಮೊದಲ ಬಾರಿಗೆ ಬಳಸಲಾಯಿತು.

ನ್ಯಾಯಕ್ಕಾಗಿ ರೈತರು ಪಟ್ಟು
ಅಕ್ಟೋಬರ್ 3 ರಂದು ನಡೆದ ಅಘಾತಕಾರರಿ ಘಟನೆಯಿಂದಾಗಿ ಬಿಜೆಪಿ ವಿರುದ್ಧ ಸ್ಥಳೀಯ ರೈತರು ಭರವಸೆಯನ್ನು ಉಳಿಸಕೊಂಡಿಲ್ಲ. ಅಕ್ಟೋಬರ್ 3 ರಂದು ಲಖಿಂಪುರ ಖೇರಿಯ ಟಿಕೋನಿಯಾ ಗ್ರಾಮದಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದು ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಅವರು ಜೈಲು ಸೇರಿದ್ದಾರೆ. ಆದರೆ ಘಟನೆಯ ಹೊಣೆ ಹೊತ್ತು ಅಜಯ್ ಮಿಶ್ರಾ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ರೈತರ ಕೂಗನ್ನು ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಇದು ರೈತರಿಗೆ ದೊಡ್ಡಮಟ್ಟದಲ್ಲಿ ನೋವನ್ನುಂಟು ಮಾಡಿದೆ. ಹೀಗಾಗಿ ಬಿಜೆಪಿಗೆ ಮತನೀಡಲು ರೈತರು ಮುಂದಾಗುತ್ತಿಲ್ಲ.
ತನ್ನ ಇಬ್ಬರು ಸಹೋದರರೊಂದಿಗೆ ಪಾಲಿಯಾದಲ್ಲಿ 45 ಎಕರೆ ಜಮೀನು ಹೊಂದಿರುವ ಕೇವಲ್ ಸಿಂಗ್, ಹಿಂದಿನ ಅಖಿಲೇಶ್ ಯಾದವ್ ಸರ್ಕಾರವು ಕಬ್ಬಿನ ರೈತರಿಗೆ ಗಿರಣಿ ಮಾಲೀಕರಿಂದ ಪಡೆಯಲು ಅರ್ಹವಾಗಿದ್ದ 2,000 ಕೋಟಿ ರೂಪಾಯಿಗಳ ಬಡ್ಡಿಯನ್ನು ಹೇಗೆ ಮನ್ನಾ ಮಾಡಿತು ಎಂಬುದನ್ನು ರೈತರು ಮರೆಯುವುದಿಲ್ಲ ಎಂದು ಹೇಳುತ್ತಾರೆ. "ಬಿಜೆಪಿ ಆಡಳಿತದಲ್ಲಿ ರೈತರ ಸ್ಥಿತಿ ಹದಗೆಟ್ಟಿದೆ, ಇದು ವಿಪರ್ಯಾಸವೆಂದರೆ ನಮ್ಮ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ" ಎಂದು ಅವರು ಹೇಳಿದರು.

ಮತ ನೀಡಲ್ಲ ಎಂದ ರೈತರು
ಕಬ್ಬಿನ ನಿಯಂತ್ರಣ ಆದೇಶ 1966ರ ಪ್ರಕಾರ ಕಬ್ಬಿನ ಬಾಕಿ ಬೆಲೆಯನ್ನು 14 ದಿನಗಳೊಳಗೆ ಪಾವತಿಸದಿದ್ದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಶೇ.15ರಷ್ಟು ಬಡ್ಡಿ ನೀಡಬೇಕು. ಆದಾಗ್ಯೂ, ಎಸ್‌ಪಿ ಸರ್ಕಾರವು ಈ ಬಡ್ಡಿ ಮೊತ್ತವನ್ನು ಮನ್ನಾ ಮಾಡಿತು. ಇದು ಉದ್ಯಮವು ದುರ್ಬಲ ಹಂತದ ಮೂಲಕ ಸಾಗುತ್ತಿದೆ ಎಂದು ಉಲ್ಲೇಖಿಸಿ ಮುಂಬರುವ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತೀರಿ ಎಂಬ ಪ್ರಶ್ನೆಗೆ, "ನಮಗೆ ಬಿಜೆಪಿ ಅಥವಾ ಎಸ್‌ಪಿಯಿಂದ ಯಾವುದೇ ಭರವಸೆ ಇಲ್ಲ. ಉಳಿದ ಪಕ್ಷಗಳಿಗೆ ಯಾವುದೇ ಅರ್ಥವಿಲ್ಲ. ಹೆಚ್ಚಿನ ಸಂಖ್ಯೆಯ ರೈತರು ಮತದಾನದಿಂದ ದೂರವಿರಲು ಮುಂದಾಗಿದ್ದಾರೆ. ಆದರೆ ಅಗತ್ಯ, ನಾವು ನೋಟಾ ಬಟನ್ ಒತ್ತುತ್ತೇವೆ." ಎಸ್ಪಿ ಮತ್ತು ಬಿಜೆಪಿ ರೈತರಿಗೆ ಮೋಸ ಮಾಡಿದೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆಯ ಮುಖ್ಯಸ್ಥ ವಿಎಂ ಸಿಂಗ್ ಆರೋಪಿಸಿದ್ದಾರೆ.

ಸಂಕಷ್ಟದಲ್ಲಿ ರೈತರು
ಲಖಿಂಪುರ ಖೇರಿ ಜಿಲ್ಲೆಯ ಶೇ.75 ರಷ್ಟು ರೈತರು ಕಬ್ಬು ಬೆಳೆಯುತ್ತಾರೆ. ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ವಲಯದ ಒಂಬತ್ತು ಸಕ್ಕರೆ ಕಾರ್ಖಾನೆಗಳು ಇಲ್ಲಿ ಸುಮಾರು 15 ಲಕ್ಷ ಕ್ವಿಂಟಾಲ್ ಕಬ್ಬನ್ನು ತರುತ್ತವೆ. ಇಲ್ಲಿನ ಗೋಳಾದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತ ಮುಖಂಡ ಅಂಜನಿ ದೀಕ್ಷಿತ್ ಮಾತನಾಡಿ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ಫೆ.6ರವರೆಗೆ ಮಾತ್ರ ರೈತರಿಗೆ ಹಣ ಪಾವತಿಸಿವೆ. "ಇದುವರೆಗೆ ಸಕ್ಕರೆ ಕಾರ್ಖಾನೆಗಳು ನಮಗೆ ಹಣ ನೀಡಿಲ್ಲ. ಈ ಹಿಂದೆ ಎಸ್‌ಪಿ ಸರ್ಕಾರ ರೈತರ ಬಗ್ಗೆ ಗಮನ ಹರಿಸಿಲ್ಲ. ಇಂದು ಅಖಿಲೇಶ್ ಯಾದವ್ (ಅನ್ನ ಸಂಕಲ್ಪ ಅಭಿಯಾನದ ವೇಳೆ) ರೈತರೊಂದಿಗೆ ಇದ್ದೇನೆ ಎಂದು ಹೇಳುತ್ತಾರೆ. "ಆಗ ನರೇಂದ್ರ ಮೋದಿ ಭರವಸೆಗಳನ್ನು ನೀಡಿದರು. ನಮ್ಮ ಬಾಕಿ ಪಾವತಿಯಾಗುವುದಾಗಿ ಖಚಿತಪಡಿಸಿದರು. ಆದರೆ ಐದು ವರ್ಷ ಕಳೆದರೂ ನಮ್ಮ ಚಿಂತೆಗೆ ಪರಿಹಾರ ಸಿಕ್ಕಿಲ್ಲ,'' ಎಂದು ಹೇಳಿದರು. ಕಬ್ಬಿನ ಬಾಕಿ ಹಣ ಪಾವತಿಯಾಗದ ಕಾರಣ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
Recommended Video
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications