ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೇಲಿ: ಆಟೋ ಮೇಲೆ ಶಾಲಾ ಮಕ್ಕಳನ್ನು ಕರೆದೊಯ್ದ ಚಾಲಕ- ಪ್ರಕರಣ ದಾಖಲು

|
Google Oneindia Kannada News

ಬರೇಲಿ, ಸೆಪ್ಟೆಂಬರ್ 02: ಸಾಮಾನ್ಯವಾಗಿ ಬಸ್‌, ಟೆಂಪೋ ಮೇಲೆ ಜನರು ಕುಳಿತು ಪ್ರಯಾಣಿಸುತ್ತಾರೆ. ಇದು ಸಂಚಾರ ನಿಯಮದ ಉಲ್ಲಂಘನೆಯಾಗಿದ್ದರೂ ಹಳ್ಳಿಗಾಡು ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಇಲ್ಲೊಬ್ಬ ಚಾಲಕ ಶಾಲಾ ಮಕ್ಕಳನ್ನು ಆಟೋ ಮೇಲೆ ಕೂಡಿಸಿಕೊಂಡು ರಸ್ತೆಯಲ್ಲಿ ಆಟೋ ಚಾಲನೆ ಮಾಡಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಆಟೋ ಚಾಲಕನೊಬ್ಬ ಸಹ ಪ್ರಯಾಣಿಕರಿಗೆ ಆಪತ್ತು ತರುವುದು ಮಾತ್ರವಲ್ಲದೆ ಮಕ್ಕಳ ಜೀವದ ಜೊತೆ ಚಲ್ಲಾಟವಾಡಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಶಾಲಾ ಮಕ್ಕಳು ಆಟೋದ ಮೇಲೆ ಕುಳಿತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವಿಡಿಯೊ ವೈರಲ್ ಆದ ನಂತರ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ. ಅವರ ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ ಆಟೋ ಚಾಲಕರು ದುಡ್ಡಿನ ಆಸೆಯಿಂದ ಅವರನ್ನು ರೀತಿ ಕರೆದೊಯ್ಯುತ್ತಾರೆ ಎಂದು ದೂರಿದ್ದಾರೆ.

ಮಕ್ಕಳ ವಯಸ್ಸು 12 ವರ್ಷಕ್ಕಿಂತ ಕಡಿಮೆ

ಮಕ್ಕಳ ವಯಸ್ಸು 12 ವರ್ಷಕ್ಕಿಂತ ಕಡಿಮೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡು ತಕ್ಷಣ ಕ್ರಮ ಕೈಗೊಂಡು ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಆಟೋ ಚಾಲಕನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ 3 ಶಾಲಾ ಮಕ್ಕಳು ಆಟೋದ ಮೇಲ್ಛಾವಣಿಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ಮಕ್ಕಳ ವಯಸ್ಸು 12 ವರ್ಷಕ್ಕಿಂತ ಕಡಿಮೆ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಈ ವಿಡಿಯೋ ಶುಕ್ರವಾರ ಸೆರೆ ಹಿಡಿಯಲಾಗಿದೆ.

ಘಟನೆ ಯಾವ ಅಧಿಕಾರಿಯ ಗಮನಕ್ಕೂ ಬಂದಿಲ್ಲ

ಘಟನೆ ಯಾವ ಅಧಿಕಾರಿಯ ಗಮನಕ್ಕೂ ಬಂದಿಲ್ಲ

ಶಾಲಾ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಿದ ಆಟೋ ಆರ್‌ಟಿಒ ಕಚೇರಿ ಹಾಗೂ ನಕಟಿಯ ಪೊಲೀಸ್‌ ಠಾಣೆ ದಾಟಿದೆ. ಆದರೆ ಯಾವೊಬ್ಬ ಅಧಿಕಾರಿಯ ಗಮನ ಆಟೋ ಕಡೆ ಹೋಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ, ಭೀಮ್ ಆರ್ಮಿ ಕಾರ್ಯಕರ್ತ ರಾಜ್ ಕುಮಾರ್ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಯುಪಿ ಪೊಲೀಸರಿಗೆ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಾಲಕ ಅಮಾಯಕ ಮಕ್ಕಳ ಪ್ರಾಣವನ್ನು ಪಣಕ್ಕಿಟ್ಟು ಆಟೋದ ಮೇಲ್ಛಾವಣಿ ಮೇಲೆ ಹೊತ್ತುಕೊಂಡು ಹೋಗುತ್ತಿದ್ದನು ಎಂದಿದ್ದಾರೆ.

ಅಪಾಯದಿಂದ ಮಕ್ಕಳು ಪಾರು

ಹೀಗೆ ಅಪಾಯಕಾರಿಯಾಗಿ ಆಟೋ ಮೇಲೆ ಕೂತಿದ್ದ ಈ ಮೂವರು ಮಕ್ಕಳಿಗೆ ಈ ಪಯಣ ಮಾರಕವಾಗಿ ಪರಿಣಮಿಸಬಹುದಿತ್ತು. ಅದೃಷ್ಟವಶಾತ್ ಮಕ್ಕಳಿಗೆ ಏನೂ ಆಗಲಿಲ್ಲ. ಆದರೆ ಜಾಗೃತ ನಾಗರಿಕರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಟೋ ಛಾವಣಿಯ ಮೇಲೆ ಮಕ್ಕಳು ಪ್ರಯಾಣಿಸುವ ವಿಡಿಯೊ ವೈರಲ್ ಆದ ನಂತರ, ಪೋಷಕರು, ಸಹ ಚಾಲಕರು ಮತ್ತು ಪೊಲೀಸ್-ಆಡಳಿತವು ಚಾಲಕನ ಮೇಲಿ ಹಿಡಿಶಾಪ ಹಾಕಿದೆ. ವಿಡಿಯೊ ವೈರಲ್ ಆದ ನಂತರ, ಜನರು ಆಟೋ ಚಾಲಕನ ವಿರುದ್ಧ ಪೊಲೀಸರು ಕ್ರಮಕ್ಕೆ ಒತ್ತಾಯಿಸಿದರು.

ದುಡುಕಿನ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲು

ದುಡುಕಿನ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲು

ವಿಷಯ ಬರೇಲಿ ಎಸ್‌ಎಸ್‌ಪಿ ಸತ್ಯಾರ್ಥ್ ಅನಿರುದ್ಧ್ ಪಂಕಜ್ ಅವರಿಗೆ ತಲುಪಿದ ತಕ್ಷಣ ಕೂಡಲೆ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಸಿಟಿ ರಾಹುಲ್ ಭಾಟಿ ಅವರಿಗೆ ಆದೇಶಿಸಿದರು. ನಂತರ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ತೆಗೆದುಕೊಂಡರು ಮತ್ತು ದಂಡ ವಿಧಿಸಿದರು. ಬದಲಿಗೆ, ದುಡುಕಿನ ಚಾಲನೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಅನ್ನು ಸಹ ದಾಖಲಿಸಲಾಗಿದೆ. ಚಾಲಕ ಅಮಾಯಕ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಕಾರಣ ಆಟೋ ಚಾಲಕನ ವಿರುದ್ಧ ಅತಿವೇಗದ ಚಾಲನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಎಸ್ಪಿ ರಾಹುಲ್ ಭಾಟಿ ತಿಳಿಸಿದ್ದಾರೆ.

English summary
A picture went viral on various social media platforms where three children can be seen sitting atop an auto rickshaw. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X