ಅಯೋಧ್ಯೆ ತೀರ್ಪು: ಮರುಪರಿಶೀಲನಾ ಅರ್ಜಿಗೆ ಒಲ್ಲೆ ಎಂದ ಸುನ್ನಿ ವಕ್ಫ್ ಬೋರ್ಡ್
ಲಕ್ನೋ, ನವೆಂಬರ್ 26: ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಮಂಗಳವಾರ ಸ್ಪಷ್ಟಪಡಿಸಿದೆ.
ಏಳು ಮುಸ್ಲಿಂ ಮಂಡಳಿಗಳಲ್ಲಿ 6 ಮಂಡಳಿಯವರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿರುವುದರಿಂದ ಬಹುಮತದ ಆಧಾರದ ಮೇಲೆ ನಾವು ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ತಾನು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ನವೆಂಬರ್ 17 ರಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ತಿಳಿಸಿತ್ತು. ಆದರೆ ಇಂದು ತನ್ನ ಅಭಿಪ್ರಾಯವನ್ನು ಅದು ಬದಲಿಸಿಕೊಂಡಿದ್ದು, ಮೇಲ್ಮನವಿ ಸಲ್ಲಿಸದಿರುವುದೇ ತನ್ನ ಕೊನೆಯ ನಿರ್ಧಾರ ಎಂದಿದೆ.

ಹಲವು ದಶಕಗಳಿಂದ ವಿವಾದದಲ್ಲಿದ್ದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ನವೆಂಬರ್ 09 ರಂದು ಹೊರಬಿದ್ದಿದ್ದು, ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.












Click it and Unblock the Notifications