ಉತ್ತರ ಪ್ರದೇಶದ ಎಲ್ಲಾ ನದಿಗಳಲ್ಲೂ ವಾಜಪೇಯಿ ಚಿತಾಭಸ್ಮ ವಿಸರ್ಜನೆ

ಲಕ್ನೋ, ಆಗಸ್ಟ್ 18: ಉತ್ತರ ಪ್ರದೇಶದ ಎಲ್ಲಾ ನದಿಗಳಲ್ಲೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಮೇರು ವ್ಯಕ್ತಿತ್ವದ ಭಾರತರತ್ನ ವಾಜಪೇಯಿ ಅವರಿಗೆ ಇದು ನಾವು ನೀಡುವ ಗೌರವ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಈ ರಾಜ್ಯದಲ್ಲಿ ಹರಿಯುವ ನದಿಗಳಾದ ಗಂಗಾ, ಯಮುನಾ, ತಪತಿ, ಗೋಮತಿ, ಸಿಂಧು, ವರುಣಾ ಸೇರಿದಂತೆ ಇನ್ನಿತರ ಎಲ್ಲಾ ನದಿಗಳಲ್ಲೂ ವಾಜಪೇಯಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಗುತ್ತದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಈ ವಿಷಯವನ್ನು ತಿಳಿಸಿದ್ದರು.

Ashes of ex PM Atal Bihari Vajpayee to be immersed across every river in UP

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ, ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದರು. 93 ವರ್ಷ ವಯಸ್ಸಿನ ವಾಜಪೇಯಿ ಅವರ ನಿಧನಕ್ಕೆ ಇಡೀ ವಿಶ್ವವೇ ಸಂತಾಪ ಸೂಚಿಸಿತ್ತು.

ಆಗಸ್ಟ್ 17 ರಂದು ದೆಹಲಿಯ ರಾಜ್ ಘಾಟ್ ನ ಸ್ಮೃತಿಸ್ಥಳದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ವಾಜಪೇಯಿ ಅವರ ಶವಯಾತ್ರೆಗೆ ಕಾಲ್ನಡಿಗೆಯಲ್ಲೇ ಹೆಜ್ಜೆ ಹಾಕಿ ಅತ್ಯುನ್ನತ ನಾಯಕನಿಗೆ ಗೌರವ ಅರ್ಪಿಸಿದ್ದರು. ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶಸ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+