ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ರಾಸ್ ಪ್ರಕರಣದ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

|
Google Oneindia Kannada News

ಲಕ್ನೋ, ಅಕ್ಟೋಬರ್ 01: ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಷ್ಟು ಹೆಚ್ಚಾಗಿದೆ. ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ಬೆನ್ನಲ್ಲೇ ಬಾಲರಾಂಪುರ ಜಿಲ್ಲೆಯಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ.

ಕಾಲೇಜು ಶುಲ್ಕ ಪಾವತಿಸಲು ಹೋದ ದಲಿತ ಕುಟುಂಬದ ಮಗಳು ಶವವಾಗಿ ಪತ್ತೆಯಾದ ನಂತರ ಕುಟುಂಬ ಆಕ್ರೋಶ ಮುಗಿಲು ಮುಟ್ಟಿದೆ. ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶದಲ್ಲಿ ಸುಮಾರು ನಾಲ್ಕು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.

ಹತ್ರಾಸ್ ಅತ್ಯಾಚಾರ: ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ, ಉದ್ಯೋಗ ಪ್ರಕಟಿಸಿದ ಯೋಗಿಹತ್ರಾಸ್ ಅತ್ಯಾಚಾರ: ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ, ಉದ್ಯೋಗ ಪ್ರಕಟಿಸಿದ ಯೋಗಿ

ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಅಪಹರಣ

ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಅಪಹರಣ

ಸಂತ್ರಸ್ತೆಯ ಕುಟುಂಬ ಸದಸ್ಯರ ಪ್ರಕಾರ, ಬಲರಾಂಪುರ ಜಿಲ್ಲೆಯ ಗೈಸರಿ ಗ್ರಾಮದ 22 ವರ್ಷದ ಯುವತಿ ತನ್ನ ಎರಡನೇ ವರ್ಷದ ಪದವಿ ಶಿಕ್ಷಣಯುತ್ತಿದ್ದು, ಮಂಗಳವಾರ ಕಾಲೇಜು ಶುಲ್ಕವನ್ನು ಪಾವತಿಸಲು ಹೋಗಿದ್ದಳು. ಕಾಲೇಜಿನಿಂದ ಹಿಂದಿರುಗುವಾಗ, ಆಕೆಯನ್ನು ಅಪಹರಿಸಲಾಯಿತು. ತದನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೋಮಾಕ್ಕೆ ಹೋದ ನಂತರ ಸಂತ್ರಸ್ತೆಯನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಲಾಗಿದೆ.

ತಮ್ಮ ಮಗಳ ಪರಿಸ್ಥಿತಿ ಕಂಡು ಪೋಷಕರಿಗೆ ಆಘಾತ

ತಮ್ಮ ಮಗಳ ಪರಿಸ್ಥಿತಿ ಕಂಡು ಪೋಷಕರಿಗೆ ಆಘಾತ

ತಮ್ಮ ಮಗಳನ್ನು ರಿಕ್ಷಾದಲ್ಲಿ ನೋಡಿ ಪೋಷಕರು ಆಘಾತಕ್ಕೊಳಗಾದರು. ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಂದಿದ್ದ ಆಕೆಯ ಕಾಲು ಮತ್ತು ಬೆನ್ನು ಮೂಳೆ ಮುರಿದಿರುವುದು ಕಂಡುಬಂದಿದೆ. ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆಂದು ಘೋಷಿಸಲಾಯಿತು. ಮಗಳ ಭೀಕರ ಪರಿಸ್ಥಿತಿ ಕಂಡು ಕುಟುಂಬವು ತತ್ತರಿಸಿ ಹೋಗಿದೆ.

"ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ನಿರುದ್ಯೋಗವೇ ಕಾರಣ"

ಆಕೆಯ ಬಾಯಲ್ಲಿ ಒಂದು ಮಾತು ಕೂಡ ಹೊರ ಬರಲಿಲ್ಲ..

ಆಕೆಯ ಬಾಯಲ್ಲಿ ಒಂದು ಮಾತು ಕೂಡ ಹೊರ ಬರಲಿಲ್ಲ..

ರಿಕ್ಷಾದಲ್ಲಿ ಆಕೆ ಮನೆಗೆ ಬಂದಾಗ ಅವಳ ಬಾಯಿಂದ ಒಂದು ಮಾತು ಕೂಡ ಹೊರಬಂದಿಲ್ಲ. ಅವಳು ನೋವನ್ನು ಸಹಿಸಲಾರಳು, ಅವಳು ಇನ್ನು ಮುಂದೆ ಬದುಕುವುದಿಲ್ಲ ಎಂದು ಆಗಲೇ ಅನ್ನಿಸಿಬಿಟ್ಟಿತ್ತು ಎಂದು ಕುಟುಂಬವು ಕಣ್ಣೀರಿಟ್ಟಿದೆ.

ಡಗ್ರ್ಸ್ ನೀಡಿ ಅತ್ಯಾಚಾರವೆಸಗಿರುವ ಆರೋಪ

ಡಗ್ರ್ಸ್ ನೀಡಿ ಅತ್ಯಾಚಾರವೆಸಗಿರುವ ಆರೋಪ

ತಮ್ಮ ಮಗಳ ಪರಿಸ್ಥಿತಿಯನ್ನು ಆಧರಿಸಿ ಆರೋಪಿಸಿರುವ ಕುಟುಂಬವು ತಮ್ಮ ಮಗಳಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ. ಕನಿಷ್ಠ ಏನೆಲ್ಲಾ ಎಂದರು ಇಬ್ಬರು ಪಾಪಿಗಳು ಈ ಕೃತ್ಯವೆಸಗಿರಬಹುದು ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಇಬ್ಬರ ಬಂಧನ

ಪ್ರಕರಣ ಸಂಬಂಧ ಇಬ್ಬರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಲರಾಂಪುರ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹತ್ರಾಸ್ ಪ್ರಕರಣದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿಯೂ ಮಾಡಬಾರದು ಎಂದು ಒತ್ತಾಯಿಸಿದರು. ಆರೋಪಿಗಳನ್ನು ಕೂಡಲೇ ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

English summary
As the nation protests and awaits justice for the 19-year-old Dalit woman from Hathras, another Dalit woman was allegedly brutally gangraped and killed in Balrampur in Uttar Pradesh on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X