ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ವರ್ಷಗಳ ಬಳಿಕ ಮರಳಿದ ಅನ್ನಪೂರ್ಣ ದೇವಿ ವಿಗ್ರಹ: ವಾರಣಾಸಿಯಲ್ಲಿ ಪ್ರತಿಷ್ಠಾಪಿಸಲು ಸಜ್ಜು

|
Google Oneindia Kannada News

ವಾರಣಾಸಿ, ನವೆಂಬರ್ 12: ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕಳುವಾಗಿದ್ದ ಅನ್ನಪೂರ್ಣ ದೇವಿಯ ಅಪರೂಪದ ವಿಗ್ರಹ ಶೀಘ್ರದಲ್ಲೇ ತನ್ನ ಮೂಲ ಮನೆಗೆ ಮರಳಲು ಸಜ್ಜಾಗಿದೆ. ಇತ್ತೀಚೆಗೆ ಕೆನಡಾದಿಂದ ಹಿಂಪಡೆಯಲಾದ ವಿಗ್ರಹವು ಪ್ರಸ್ತುತ ದೆಹಲಿಯಲ್ಲಿದೆ ಮತ್ತು ನವೆಂಬರ್ 15 ರಂದು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಇಂದಿನಿಂದ ಆರಂಭಗೊಂಡು ಉತ್ತರ ಪ್ರದೇಶ ಸರ್ಕಾರವು ವಾರಣಾಸಿಗೆ ವಿಗ್ರಹವನ್ನು ಕೊಂಡೊಯ್ಯಲು ನಾಲ್ಕು ದಿನಗಳ ಮಾತಾ ಅನ್ನಪೂರ್ಣ ದೇವಿ ಯಾತ್ರೆಯನ್ನು ಕೈಗೊಳ್ಳಲಿದೆ.

ಸುದ್ದಿ ವಾಹನಿಗಳ ಪ್ರಕಾರ, ವಿಗ್ರಹವನ್ನು ಮೊದಲು ಅಲಿಘಢಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿಂದ ಅದನ್ನು ನವೆಂಬರ್ 12 ರಂದು ಕನೌಜ್‌ಗೆ ಕೊಂಡೊಯ್ಯಲಾಗುತ್ತದೆ. ಅದಾದ ಬಳಿಕ ವಿಗ್ರಹವು ನವೆಂಬರ್ 14 ರಂದು ಅಯೋಧ್ಯೆಗೆ ಹೋಗುತ್ತದೆ. ನಂತರ ಅದನ್ನು ಅಂತಿಮವಾಗಿ ನವೆಂಬರ್ 15 ರಂದು ಕಾಶಿ ವಿಶ್ವನಾಥ ದೇವಸ್ಥಾನ ವಾರಣಾಸಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಸೂಕ್ತ ಧಾರ್ಮಿಕ ಕ್ರಿಯೆಗಳ ನಂತರ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

Annapurna Devi idol stolen 100 years ago: outfit for installation in Varanasi

"100 ವರ್ಷಗಳ ಹಿಂದೆ, ಅನ್ನಪೂರ್ಣ ಮಾತೆಯ ವಿಗ್ರಹವು ಕಾಶಿಯಿಂದ ಕಣ್ಮರೆಯಾಯಿತು. ಇದು ಕೆನಡಾದ ವಿಶ್ವವಿದ್ಯಾಲಯದಲ್ಲಿ ಪತ್ತೆಯಾಗಿತ್ತು. ಸದ್ಯ ವಿಶ್ವವಿದ್ಯಾನಿಲಯದಿಂದ ಭಾರತ ಸರ್ಕಾರವು ಆ ವಿಗ್ರಹವನ್ನು ಸ್ವೀಕರಿಸಿದೆ ಮತ್ತು ಅದನ್ನು ಈಗ ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತಿದೆ. ನವೆಂಬರ್ 15 ರಂದು ವೈದಿಕ ಸ್ತೋತ್ರಗಳ ನಡುವೆ ಇದನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ಇರಿಸಲಾಗುವುದು,'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ 3 ರಂದು ಹೇಳಿದರು.

ಸ್ಥಳೀಯ ಸುದ್ದಿ ಮಾಧ್ಯಮಗಳು ಹಂಚಿಕೊಂಡ ವೀಡಿಯೊ ಪ್ರಕಾರ, ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಸ್ಮೃತಿ ಇರಾನಿ ಯುಪಿ ಸರ್ಕಾರಕ್ಕೆ ವಿಗ್ರಹವನ್ನು ಹಸ್ತಾಂತರಿಸುವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು ಒಂದು ಶತಮಾನದ ಹಿಂದೆ ಭಾರತದ ಕಾಶಿಯಿಂದ ಕಳವು ಮಾಡಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ಮರಳಿ ತರಲಾಗುತ್ತಿದೆ ಎಂದು ಘೋಷಿಸಿದ್ದರು. ಅದರಂತೆ ಇದೀಗ 18ನೇ ಶತಮಾನದ ಆ ವಿಗ್ರಹವನ್ನು ಕಾಶಿಗೆ ವಾಪಾಸ್ ತರಲಾಗುತ್ತಿದೆ.

ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸರ್ಕಾರವು ವಿಗ್ರಹವನ್ನು ಸ್ವೀಕರಿಸಿದೆ ಮತ್ತು ಅದನ್ನು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡುತ್ತಿದೆ ಎಂದು ತಿಳಿಸಿದರು. 100 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಅದು ಬೇರೆಯವರ ಕೈಯಿಂದ ಕೊನೆಗೆ ಕೆನಡಾದ ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಇದೀಗ ಭಾರತ ಸರ್ಕಾರವು ಕೆನಡಾದ ವಿಶ್ವವಿದ್ಯಾನಿಲಯದಿಂದ ಆ ವಿಗ್ರಹವನ್ನು ವಾಪಾಸ್ ಪಡೆದಿದೆ. ಅದನ್ನು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಲಾಗುತ್ತಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

ಹಾಗೇ, ವಿವಿಧ ದೇಶಗಳಿಂದ 55 ವಿಗ್ರಹಗಳು, ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ತರಲು ಪ್ರಧಾನಿ ಮೋದಿ ವ್ಯವಸ್ಥೆ ಮಾಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. 55 ಪುರಾತನ ವಸ್ತುಗಳ ಪೈಕಿ 42ನ್ನು 2014ರ ನಂತರ ಹಿಂತಿರುಗಿಸಲಾಗಿದ್ದು, ಅನ್ನಪೂರ್ಣ ದೇವಿ ಇದಕ್ಕೆ ಕೊನೆಯ ಸೇರ್ಪಡೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

Recommended Video

David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada

ಸುಮಾರು 100 ವರ್ಷಗಳ ಹಿಂದೆ ಕದ್ದು ಕೆನಡಾಕ್ಕೆ ಕೊಂಡೊಯ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಭಾರತಕ್ಕೆ ತರಲಾಗುತ್ತಿದ್ದು, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಆ ಪುರಾತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಈ ದೇವಿ ಒಂದು ಕೈಯಲ್ಲಿ ಖೀರ್ ಮತ್ತು ಇನ್ನೊಂದು ಕೈಯಲ್ಲಿ ಸೌಟನ್ನು ಹಿಡಿದಿದ್ದಾಳೆ. ವಿಭಿನ್ನವಾಗಿರುವ ಈ 100 ವರ್ಷಗಳ ಹಿಂದಿನ ವಿಗ್ರಹ ಕೊನೆಗೂ ತನ್ನ ಮೂಲ ಮನೆಗೆ ವಾಪಾಸ್ಸಾಗುತ್ತಿದೆ.

English summary
A rare idol of Goddess Annapurna, which was stolen from Varanasi about 100 years ago, is all set to return to its original home soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X