ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ವ್ಯಕ್ತಿ
ಅಮೇಥಿ, ಮೇ 08: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವ್ಯಕ್ತಿಯೊಬ್ಬ ಚುನಾವಣಾ ಆಯೋಗಕ್ಕೆ ತಮ್ಮ ರಕ್ತದಲ್ಲೇ ಪತ್ರ ಬರೆದಿದ್ದಾರೆ.
ಅಮೇಥಿಯ ಶಹ್ಘರ್ ಎಂಬ ಊರಿನ ಮನೋಜ್ ಕಶ್ಯಪ್ ಎಂಬಾತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶ ಕಂಡ ಮಹಾನ್ ಪ್ರಧಾನಿ. ಪಂಚಾಯತ್ ರಾಜ್ ಪದ್ಧತಿಯನ್ನು ಪರಿಚಯಿಸಿದ್ದು ಅವರು, ಕಂಪ್ಯೂಟರ್ ಕ್ರಾಂತಿಯಾಗುವಂತೆ ಮಾಡಿದ್ದು ಅವರು. ಆದರೆ ಅವರ ಬಗ್ಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಕೇಳಲಿ ನನಗೆ ಆಘಾತವಾಗಿದೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
स्वर्गीय राजीव गाँधी जी के मोदी के अपमान जनक टिप्पणी पर अमेठी के इस नवजवान ने निर्वाचन आयोग को चुनाव सम्पन्न होने के बाद खून से लिखा पत्र। pic.twitter.com/tEHTLZ1oRN
— Deepak Singh (@DeepakSinghINC) May 7, 2019
ಮೋದಿ ಅವರು ಇಂಥ ಹೇಳಿಕೆಗಳನ್ನು ನೀಡದಂತೆ ಅವರಿಗೆ ಎಚ್ಚರಿಕೆ ನೀಡಬೇಕು, ಇಂಥ ಹೇಳಿಕೆಗಳಿಂದ ರಾಜೀವ್ ಗಾಂಧಿ ಅವರ ಅಭಿಮಾನಿಗಳ ಭಾವನೆಗಳಿಗೆ ನೋವಾಗುತ್ತದೆ ಎಮದು ಮನೋಜ್ ಪತ್ರದಲ್ಲಿ ಬರೆದಿದ್ದಾನೆ.

ಈ ಪತ್ರವನ್ನು ಕಾಂಗ್ರೆಸ್ ಎಂಎಲ್ ಸಿ ದೀಪಕ್ ಸಿಂಗ್ ಎಂಬುವವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ, 'ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂಬರ್ 1' ಎಂದು ಅಣಕಿಸಿದ್ದರು. ಈ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.












Click it and Unblock the Notifications