ಉತ್ತರ ಪ್ರದೇಶದಲ್ಲೂ ಮೈತ್ರಿ ಬಿರುಕು? ಬಿಜೆಪಿಗೆ ಆಘಾತದ ಸುಳಿವು!

ಲಕ್ನೋ, ಡಿಸೆಂಬರ್ 29: ಲೋಕಸಭಾ ಚುನಾವಣೆಗೆ ಬಿರುಸಿನ ತಯಾರಿ ನಡೆಸುತ್ತಿರುವ ಬಿಜೆಪಿಗೆ ಬಹುಮುಖ್ಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಭಾರೀ ಆಘಾತ ಎದುರಾಗುವ ಸುಳಿವು ಸಿಕ್ಕಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಇಲ್ಲಿನ ಹಲವು ಪ್ರಾದೇಶಿಕ ಪಕ್ಷಗಳು ಬಿಜೆಪಿಯಿಂದ ದೂರವಾಗುವ ಸೂಚನೆ ನೀಡಿವೆ.

ಶನಿವಾರ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಬಿಜೆಪಿ ಮೈತ್ರಿ ಪಕ್ಷಗಳು ನಿರ್ಧರಿಸಿವೆ. ಅಪ್ನಾ ದಳ್ ಮತ್ತು ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷಗಳು ಇಂದಿನ ಕಾರ್ಯಕ್ರಮದಿಂದ ದೂರವಿರಲಿವೆ.

Allies in UP hurt by BJPs arrogant attitude, skip PM Modis event

"ಉತ್ತರ ಪ್ರದೇಶದ ಬಿಜೆಪಿ ಮುಖಂಡರು ದುರಹಂಕಾರದಿಂದ ಸಮಾಜದ ದುರ್ಬಲ ವರ್ಗದವರನ್ನು ಕಡೆಗಣಿಸಲಾಗುತ್ತಿದೆ. ಈ ಸಮಸ್ಯೆಯನ್ನು ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಪರಿಹರಿಸಬೇಕು" ಎಂದು ಅಪ್ನಾದಳ್ ಮುಖಂಡ ಆಶಿಶ್ ಪಟೇಲ್ ಹೇಳಿದ್ದಾರೆ.

2014 ರ ಲೋಕಸಭೆ ಚುನಾವಣೆ ಮತ್ತು 2017 ರ ವಿಧಾನಸಭೆ ಚುನಾವಣೆಯನ್ನೂ ಅಪ್ನಾ ದಳ ಬಿಜೆಪಿ ಜೊತೆ ಸೇರಿ ಎದುರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+