ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಎಸ್‌ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಯುಪಿಯನ್ನು ಜಂಗಲ್ ರಾಜ್‌ಗೆ ತಳ್ಳಿವೆ'

|
Google Oneindia Kannada News

ಲಕ್ನೋ ಜನವರಿ 25: ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಮಂಗಳವಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಪ್ರತಿಪಕ್ಷಗಳು ರಾಜಕೀಯವನ್ನು ಕ್ರಿಮಿನಲ್ ಮಾಡುವ ಮೂಲಕ, ಅಪರಾಧವನ್ನು ರಾಜಕೀಯಗೊಳಿಸುವ ಮತ್ತು ಮಾಫಿಯಾವನ್ನು ರಕ್ಷಿಸುವ ಮೂಲಕ ಉತ್ತರ ಪ್ರದೇಶವನ್ನು ಜಂಗಲ್ ರಾಜ್‌ಗೆ ತಳ್ಳಿದ್ದಾರೆ ಎಂದು ದೂರಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥರು, ಬಿಎಸ್‌ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಸರ್ಕಾರಗಳು ಸಾರ್ವಜನಿಕರಿಗೆ ತೊಂದರೆ ನೀಡುವುದರಲ್ಲಿ ತಪ್ಪಿತಸ್ಥರು ಎಂದು ಆರೋಪಿಸಿದ್ದಾರೆ.

ರಾಜಕೀಯವನ್ನು ಅಪರಾಧೀಕರಿಸುವ, ಅಪರಾಧವನ್ನು ರಾಜಕೀಯಗೊಳಿಸುವ ಮತ್ತು ಮಾಫಿಯಾವನ್ನು ರಕ್ಷಿಸುವ ಮೂಲಕ ಉತ್ತರ ಪ್ರದೇಶವನ್ನು ಜಂಗಲ್ ರಾಜ್‌ಗೆ ತಳ್ಳಿದ್ದಾರೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಮಂಗಳವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಯಾವತಿ ಟ್ವೀಟ್ ಮಾಡಿ, 'ರಾಜಕೀಯವನ್ನು ಅಪರಾಧೀಕರಿಸುವ ಮೂಲಕ, ಅಪರಾಧವನ್ನು ರಾಜಕೀಯಗೊಳಿಸುವ ಮೂಲಕ ಬಿಎಸ್ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಉತ್ತರಪ್ರದೇಶವನ್ನು ಜಂಗಲ್ ರಾಜ್‌ಗೆ ತಳ್ಳಿದ್ದಾರೆ. ತಮ್ಮ ಪಕ್ಷದ ಗೂಂಡಾಗಳು ಮತ್ತು ಮಾಫಿಯಾಗಳನ್ನು ರಕ್ಷಿಸಿ ಕಾನೂನಿನೊಂದಿಗೆ ಆಟವಾಡುತ್ತಿದ್ದಾರೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಬಡ ಮತ್ತು ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ' ಎಂದು ಮಾಯಾವತಿ ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಫೆಬ್ರವರಿ 10 ರಂದು ಮೊದಲ ಹಂತದ ಮತದಾನ ನಡೆಯಲಿದೆ. ರಾಜಕೀಯ ಮೇಲಾಟದ ನಡುವೆಯೂ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ತಮ್ಮ ಶಕ್ತಿಯನ್ನೆಲ್ಲ ಎಸೆದಿವೆ. ಇದೇ ವೇಳೆ ನಾಯಕರ ವಾಗ್ದಾಳಿ ಮುಂದುವರಿದಿದೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

All Parties Except BSP Pushed UP Into Jungle Raj: Mayawati
ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ

ಜೊತೆಗೆ ಮಾಯಾವತಿ ಅವರು ಕೆಲಸ, ಕಾನೂನು ಮತ್ತು ಸುವ್ಯವಸ್ಥೆ, ವಲಸೆಯ ಬಗ್ಗೆ ಯುಪಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಯುಪಿಯಲ್ಲಿ ಭಯ, ಭ್ರಷ್ಟಾಚಾರ, ತಾರತಮ್ಯ ಉತ್ತರಪ್ರದೇಶದಲ್ಲಿ ತಾಂಡವವಾಡುತ್ತಿದೆ. ಯುಪಿಯ ಜನ ಜೀವನ ಮತ್ತು ಆಸ್ತಿಯ ಅಭದ್ರತೆ, ಕಳಪೆ ಕಾನೂನು ಮತ್ತು ಸುವ್ಯವಸ್ಥೆ, ನಿರುದ್ಯೋಗ ಮತ್ತು ಲಕ್ಷಗಟ್ಟಲೆ ಜನರ ವಲಸೆ ಈ ರಾಜ್ಯದ ದೊಡ್ಡ ಸಮಸ್ಯೆಗಳಾಗಿವೆ. ಯುಪಿ ಬೃಹತ್ ಜನಸಂಖ್ಯೆಯನ್ನು ಹೊಂದಿದ್ದು, ಇದು ನಿರಂತರವಾಗಿ ಹೆಚ್ಚುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ. ಮುಂದಿನ ಟ್ವೀಟ್, ಯುಪಿಯಲ್ಲಿ ಬಿಎಸ್‌ಪಿ ಸರ್ಕಾರದ ಅವಧಿಯಲ್ಲಿ, ಸುಮಾರು 2.5 ಲಕ್ಷ ಬಡ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ವಸತಿ ಒದಗಿಸಲಾಗಿದೆ ಮತ್ತು ಸುಮಾರು 15-20 ಲಕ್ಷ ಮನೆಗಳಿಗೆ ಸಿದ್ಧತೆಗಳು ನಡೆಯುತ್ತಿವೆ, ಆದರೆ ಸರ್ಕಾರ ಬದಲಾದ ಕಾರಣ, ಈ ಕೆಲಸ ಅಪೂರ್ಣವಾಗಿದೆ. ಇದರ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.


ಬಿಎಸ್‌ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಸರ್ಕಾರಗಳು ರಾಜಕೀಯ ಮತ್ತು ಅಪರಾಧವನ್ನು ರಾಜಕೀಯಗೊಳಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಕಾನೂನಿನೊಂದಿಗೆ ಆಟವಾಡುತ್ತವೆ ಮತ್ತು ತಮ್ಮ ಪಕ್ಷದ ಗೂಂಡಾಗಳು ಮತ್ತು ಮಾಫಿಯಾಗಳನ್ನು ರಕ್ಷಿಸುತ್ತಿವೆ ಮತ್ತು ಉತ್ತರ ಪ್ರದೇಶವನ್ನು ಬಡ ಮತ್ತು ಹಿಂದುಳಿದಿರುವ ಮೂಲಕ ಜಂಗಲ್ ರಾಜ್‌ಗೆ ತಳ್ಳುತ್ತಿವೆ. ಆದರೆ ಅವರ ಜುಮ್ಲಾಗಳು ಮುಂದುವರೆಯುತ್ತವೆ," ಅವರು ಹೇಳಿದರು.

ಇನ್ನೂ ನಿನ್ನೆ ಮಾಯಾವತಿ ಅವರು ಯುಪಿ ಸಿಎಂ ಯೋಗಿ ಮಠದ ಬಗ್ಗೆ ಕಾಮೆಂಟ್ ಮಾಡಿದ್ದರು. "ಗೋರಖ್‌ಪುರದಲ್ಲಿ ಯೋಗಿ ಆದಿತ್ಯನಾಥ್ ಅವರು ಹೆಚ್ಚು ಸಮಯ ವಾಸಿಸುವ ಮಠವು ಯಾವುದೇ ದೊಡ್ಡ ಬಂಗಲೆಗಿಂತ ಕಡಿಮೆಯಿಲ್ಲ ಎಂದು ಪಶ್ಚಿಮ ಯುಪಿಯ ಜನರಿಗೆ ಬಹುಶಃ ತಿಳಿದಿಲ್ಲ, ಅವರು ಈ ಬಗ್ಗೆ ಹೇಳಿದ್ದರೆ ಚೆನ್ನಾಗಿರುತ್ತಿತ್ತು," ಎಂದು ಮಾಯಾವತಿ ಟ್ವೀಟ್ ಮಾಡಿದ್ದರು. ಅಲ್ಲದೇ ಈ ಹಿಂದೆ ತಾವು ಅಧಿಕಾರದಲ್ಲಿದ್ದ ವೇಳೆ ಮಾಡಿರುವ ಕಾರ್ಯಗಳ ಬಗ್ಗೆ ಯೋಗಿ ಪ್ರಸ್ತಾಪಿಸಬೇಕಿತ್ತು ಎಂದು ಹೇಳಿದರು.

English summary
BSP president Mayawati on Tuesday attacked her rivals, saying they have pushed Uttar Pradesh into "jungle raj" by criminalising politics, politicising crime and protecting the mafia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X