ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ವೇಳೆ ಹುಟ್ಟಿದ ಮಗುವಿಗೆ ವಿಚಿತ್ರ ಹೆಸರಿಟ್ಟ ದಂಪತಿಗಳು

|
Google Oneindia Kannada News

ಲಕ್ನೋ, ಏಪ್ರಿಲ್ 14: ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗುತ್ತಿದ್ದಂತೆಯೇ, ಹುಟ್ಟುವ ಮಕ್ಕಳಿಗೆ ಶೋಂಕಿತ್, ಶಂಕಿತ್ ಎನ್ನುವ್ ಹೆಸರನ್ನು ಇಡಬಹುದು ಎನ್ನುವ ಜೋಕ್ಸ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದವು.

ಉತ್ತರಪ್ರದೇಶದ ಸಹರನ್ಪುರ ಜಿಲ್ಲೆ, ವಿಜಯ ವಿಹಾರದ ನಿವಾಸಿ, ಓಂ ವೀರ್ ಸಿಂಗ್ ದಂಪತಿಗಳು ತಮ್ಮ ಗಂಡು ಮಗುವಿಗೆ 'ಸ್ಯಾನಿಟೈಸರ್' ಎಂದು ಹೆಸರಿಡಲು ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನವಜಾತ ಶಿಶುವಿಗೆ 'ಕೊರೊನಾ' ಎಂದು ನಾಮಕರಣಉತ್ತರ ಪ್ರದೇಶದಲ್ಲಿ ನವಜಾತ ಶಿಶುವಿಗೆ 'ಕೊರೊನಾ' ಎಂದು ನಾಮಕರಣ

ಈ ವಿಚಿತ್ರ ಹೆಸರು ಯಾಕಾಗಿ ಇಡುತ್ತಿದ್ದೇವೆ ಎನ್ನುವುದಕ್ಕೆ ಕಾರಣ ನೀಡುವ ದಂಪತಿಗಳು, ಜಗತ್ತಿಗೇ ಮಾರಣಾಂತಿಕವಾಗಿರುವ ಈ ಕೊರೊನಾ ವೈರಸ್ ವಿರುದ್ದ ಹೋರಾಡಲು ಸಾಮರ್ಥ್ಯವಿರುವುದು ಸ್ಯಾನಿಟೈಸರ್ ಗೆ ಮಾತ್ರ, ಹಾಗಾಗಿ ಈ ಹೆಸರನ್ನು ಇಡುತ್ತಿದ್ದೇವೆ ಎಂದು ಹೇಳುತ್ತಾರೆ.

After Covid And Corona, Newborn Baby In Uttar Pradesh Named Sanitizer

ಮುಂದೆ, ಕೊರೊನಾ ವಿಚಾರದ ಬಗ್ಗೆ ಮಾತನಾಡಿದಾಗಲೆಲ್ಲಾ, ಸ್ಯಾನಿಟೈಸರ್, ಜನರನ್ನು ಕಾಪಾಡಿತು ಎನ್ನುವುದನ್ನು ಜನ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ, ಅದಕ್ಕಾಗಿ ಮಗುವಿಗೆ ಈ ಹೆಸರನ್ನು ಇಡಲು ನಿರ್ಧರಿಸಿದ್ದೇವೆ ಎಂದು ದಂಪತಿಗಳು ಹೇಳುತ್ತಾರೆ.

ಭಾನುವಾರ ಈ ಮಗು ಹುಟ್ಟಿದ್ದು, ಮಗುವಿಗೆ ಏನು ಹೆಸರು ಇಡುತ್ತೀರಾ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಪ್ರಶ್ನಿಸಿದಾಗ, ಸ್ಯಾನಿಟೈಸರ್ ಎಂದು ದಂಪತಿಗಳು ಹೇಳಿದ್ದಾರೆ. ಅದಕ್ಕೆ, ಆಸ್ಪತ್ರೆಯವರು ಫಳ್ಳೆಂದು ನಕ್ಕಿದ್ದಾರೆ.

ಈ ರೀತಿ ಚಿತ್ರವಿಚಿತ್ರ ಹೆಸರು ಇಡುವುದು ಇದೇ ಮೊದಲೇನಲ್ಲ. ಈ ಹಿಂದೆ, ಲಾಕ್ ಡೌನ್, ಕೋವಿಡ್, ಕೊರೊನಾ ಎನ್ನುವ ಹೆಸರನ್ನೂ ದಂಪತಿಗಳು ತಮ್ಮ ಮಗುವಿಗೆ ನಾಮಕರಣ ಮಾಡಿದ ಉದಾಹರಣೆಗಳಿವೆ.

English summary
After 'Covid' And 'Corona', Newborn Baby In Uttar Pradesh Named 'Sanitizer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X