ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲಿವರಿ ಬಾಯ್‌ಗೆ ಜಾತಿ ನಿಂದನೆ ಮಾಡಿ, ಥಳಿಸಿದ ಗ್ರಾಹಕ

|
Google Oneindia Kannada News

ಲಕ್ನೋ, ಜೂನ್ 20: ಝೊಮಾಟೊ ಆಹಾರ ಡೆಲಿವರಿ ಉದ್ಯೋಗಿ ಮೇಲೆ ಗ್ರಾಹಕನೊಬ್ಬ ಜಾತಿ ನಿಂದನೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಮುಖದ ಮೇಲೆ ಉಗುಳಿದ್ದಾನೆ, ಮಾತ್ರವಲ್ಲದೇ ಗ್ರಾಹಕನ ಜೊತೆ ಹಲವರು ಸೇರಿಕೊಂಡು ಥಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಡೆಲಿವರಿ ಮ್ಯಾನ್ ಗ್ರಾಹಕನಿಗೆ ಆಹಾರ ಡೆಲಿವರಿ ಮಾಡಲು ಹೋದಾಗ ಗ್ರಾಹಕ ಆತನ ಹೆಸರು ಕೇಳಿದ್ದಾನೆ. ಝೊಮಾಟೊ ಉದ್ಯೋಗಿ ಹೆಸರು ಹೇಳುತ್ತಿದ್ದಂತೆ ಈ ಘಟನೆ ನಡೆದಿದೆ. ಅಲ್ಲದೇ ಗ್ರಾಹಕನು 'ಅಸ್ಪೃಶ್ಯ' ಎಂದು ನಿಂದಿಸಿ ಆಹಾರ ಸ್ವೀಕರಿಸಲು ನಿರಾಕರಿಸಿದ್ದಾನೆ.

ಫೇಸ್‌ಬುಕ್‌ ಯುವತಿಯರಿಗೆ ಸೆಕ್ಸ್ ವಿಡಿಯೋ ಡೆಲಿವರಿ..!ಫೇಸ್‌ಬುಕ್‌ ಯುವತಿಯರಿಗೆ ಸೆಕ್ಸ್ ವಿಡಿಯೋ ಡೆಲಿವರಿ..!

ದೌರ್ಜನ್ಯಕ್ಕೊಳಗಾದ ವಿನೀತ್ ಕುಮಾರ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಖಾಸಿಮ್ ಅಬಿದಿ ತಿಳಿಸಿದ್ದಾರೆ.

A Customer Thrashed Zomato Delivery Boy And Made Casteist Slur On Him In Lucknow

ಆರೋಪಿಗಳ ಪತ್ತೆಗಾಗಿ ಆ ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಅಬಿದಿ ತಿಳಿಸಿದ್ದಾರೆ. "ಸೋಮವಾರ ಸಂತ್ರಸ್ತ ಮತ್ತು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿರುವ ಎಸಿಪಿ ಕಂಟೋನ್ಮೆಂಟ್‌ಗೆ ತನಿಖೆಯನ್ನು ನೀಡಲಾಗಿದೆ" ಎಂದು ಅವರು ಹೇಳಿದರು.

ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?

ಶನಿವಾರ ಸಂಜೆ ಆರ್ಡರ್ ಸ್ವೀಕರಿಸಿದ್ದಾರೆ. ಮನೆಗೆ ಆಹಾರ ಡೆಲಿವರಿ ಕೊಡಲು ಹೋದ ಸಮಯದಲ್ಲಿ ಗ್ರಾಹಕ ಮನೆಯಿಂದ ಹೊರಬಂದು ಹೆಸರು ಮತ್ತು ಜಾತಿ ಕೇಳಿದ್ದಾನೆ ಎಂದು ಹಲ್ಲೆಗೊಳಗಾದ ಕುಮಾರ್ ಹೇಳಿದರು.

"ನಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂದು ತಿಳಿದ ನಂತರ, ಗ್ರಾಹಕ ಜಾತಿ ಹೆಸರಿನಲ್ಲಿ ನಿಂದನೆ ಮಾಡಿದರು. ಅಸ್ಪೃಶ್ಯರ ಕೈಯಿಂದ ಆಹಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಆಹಾರ ಸ್ವೀಕರಿಸಲು ಸಿದ್ಧವಿಲ್ಲದಿದ್ದರೆ ಆರ್ಡರ್ ರದ್ದುಗೊಳಿಸುವಂತೆ ನಾನು ಅವರಿಗೆ ಹೇಳಿದೆ." ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಬೈಕ್ ಕಸಿದು ದೌರ್ಜನ್ಯ; ಆರೋಪಿಗಳು ತಮ್ಮ ಮುಖಕ್ಕೆ ಉಗುಳಿದರು ಮತ್ತು ಮನೆಯಿಂದ ಹೊರಬಂದ 10-12 ಜನರೊಂದಿಗೆ ಥಳಿಸಿದ್ದಾರೆ ಎಂದು ಝೊಮಾಟೋ ಉದ್ಯೋಗಿ ಕುಮಾರ್ ಆರೋಪಿಸಿದ್ದಾರೆ.

"ಆರೋಪಿಗಳು ನನ್ನ ಮೋಟಾರ್‌ಸೈಕಲ್ ಸಹ ತೆಗೆದುಕೊಂಡರು. ನಾನು ಪೊಲೀಸ್ ನಿಯಂತ್ರಣ ಕೊಠಡಿಗೆ ಡಯಲ್ ಮಾಡಿದೆ, ಪೊಲೀಸರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದರು. ನನ್ನ ಮೋಟಾರ್‌ ಸೈಕಲ್ ಪೊಲೀಸರು ನನಗೆ ವಾಪಸ್ ಕೊಡಿಸಿದರು" ಎಂದು ಕುಮಾರ್ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಆಹಾರ ವಿತರಣಾ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದು, ಈ ಹಿಂದೆ ಇಂತಹ ಸನ್ನಿವೇಶ ಎದುರಾಗಿರಲಿಲ್ಲ ಎಂದು ಕುಮಾರ್ ಹೇಳಿದರು.

English summary
A Customer thrashed Zomato Delivery Boy and abused then spat on His face and made casteist slur on Him. FIR lodged against customer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X