• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?

|
Google Oneindia Kannada News

ಲಕ್ನೋ, ಜುಲೈ 03 : ಶುಕ್ರವಾರ ಬೆಳ್ಳಂಬೆಳಗ್ಗೆ ಉತ್ತರ ಪ್ರದೇಶ ಬೆಚ್ಚಿ ಬಿದ್ದಿದೆ. ರೌಡಿಗಳನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ಸೇರಿದಂತೆ 8 ಪೊಲೀಸ್ ಸಿಬ್ಬಂದಿಗಳು ಹತ್ಯೆಯಾಗಿದ್ದಾರೆ.

   Heavy rain predicted ಇನ್ನೆರಡು ದಿನ ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆ | Karnataka | Oneindia Kannada

   ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಮತ್ತು ಆತನ ಸಹಚರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಹೋಗಿದ್ದರು.

   ರೌಡಿಗಳಿಂದ ಗುಂಡಿನ ದಾಳಿ: ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರ ಹತ್ಯೆರೌಡಿಗಳಿಂದ ಗುಂಡಿನ ದಾಳಿ: ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರ ಹತ್ಯೆ

   ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ವಿಕಾಸ್ ದುಬೆ ಪೊಲೀಸರಿಗೆ ಬೇಕಾಗಿದ್ದ. ಜೈಲಿನಲ್ಲಿದ್ದಾಗಲೇ ಶಿವರಾಜ್‌ಪುರ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಬಂದಿದ್ದ ಈತ ಪ್ರಭಾವಶಾಲಿ ರೌಡಿ. ದರೋಡೆ, ಅಪಹರಣ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

   ಪೊಲೀಸ್ ಠಾಣೆಯಲ್ಲಿ ಅಪ್ಪ-ಮಗ ಸಾವು; 3 ಪೊಲೀಸರ ಬಂಧನ ಪೊಲೀಸ್ ಠಾಣೆಯಲ್ಲಿ ಅಪ್ಪ-ಮಗ ಸಾವು; 3 ಪೊಲೀಸರ ಬಂಧನ

   ಮೂರು ಪೊಲೀಸ್ ಠಾಣೆಗಳ ಸಿಬ್ಭಂದಿ ದಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಮತ್ತು ಆತನ ಸಹಚರರು ಅಡಗಿದ ಮಾಹಿತಿ ಪಡೆದು ಗುರುವಾರ ತಡರಾತ್ರಿ ದಾಳಿ ನಡೆಸಿದ್ದರು. ಆಗ ಕಟ್ಟಡದ ಮೇಲೆ ಅವಿತುಕುಳಿತಿದ್ದ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದೆ.

   ಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಬಂಧನಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಬಂಧನ

   ಪ್ರಸಿದ್ಧಿ ಪಡೆದ ವಿಕಾಸ್ ದುಬೆ

   ಪ್ರಸಿದ್ಧಿ ಪಡೆದ ವಿಕಾಸ್ ದುಬೆ

   2001ರಲ್ಲಿ ವಿಕಾಸ್ ದುಬೆ ಹೆಸರು ದೇಶದಲ್ಲಿ ಎಲ್ಲರಿಗೂ ಪರಿಚಿತವಾಯಿತು. ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ದುಬೆ ಹತ್ಯೆ ಮಾಡಿದ್ದ. ಹತ್ಯೆಯಾಗುವ ಸಮಯದಲ್ಲಿ ಸಂತೋಷ್ ಶುಕ್ಲಾ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ದುಬೆ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಸೆಷನ್ಸ್ ನ್ಯಾಯಾಲಯ ಆತನನ್ನು ಆರೋಪ ಮುಕ್ತ ಎಂದು ಆದೇಶ ನೀಡಿತು.

   ಹಲವು ಪ್ರಕರಣದಲ್ಲಿ ಹೆಸರು

   ಹಲವು ಪ್ರಕರಣದಲ್ಲಿ ಹೆಸರು

   ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. 2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. (ಇಂದು ಗುಂಡಿನ ದಾಳಿ ನಡೆದ ಸ್ಥಳ)

   ಸಂಬಂಧಿಕರ ಹತ್ಯೆಗೆ ಸಂಚು

   ಸಂಬಂಧಿಕರ ಹತ್ಯೆಗೆ ಸಂಚು

   ವಿಕಾಸ್ ದುಬೆ ಹಲವು ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ. 2018ರಲ್ಲಿ ಜೈಲಿನಿಂದಲೇ ಸಂಬಂಧಿಕ ಅನುರಾಗ್ ಹತ್ಯೆಗೆ ಸಂಚು ರೂಪಿಸಿದ್ದ. ಅನುರಾಗ್ ಪತ್ನಿ ವಿಕಾಸ್ ದುಬೆ ಸೇರಿದಂತೆ ನಾಲ್ವರು ವಿರುದ್ಧ ದೂರು ನೀಡಿದ್ದಳು. (ಪೊಲೀಸರ ಹತ್ಯೆ ನಡೆದ ಸ್ಥಳ)

   ಜೈಲಿನಿಂದಲೇ ಸಂಚು

   ಜೈಲಿನಿಂದಲೇ ಸಂಚು

   2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ. ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ. (ರೌಡಿಗಳು ಅಡಗಿದ್ದ ಸ್ಥಳ)

   English summary
   8 police personnel including a DSP have been shot by criminals at Kanpur, Uttar Pradesh. Know about noted rowdy sheeter Vikas Dubey.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X