16 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಯೋಗಿ

ಲಕ್ನೋ, ಮಾರ್ಚ್ 28: ಚುನಾವಣೆ ಸಂದರ್ಭದಲ್ಲಿ ಭರಪೂರ ಆಶ್ವಾಸನೆ, ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ತಂತ್ರ ಹೊಸದೇನಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದ 16 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

7ನೇ ವೇತನ ಆಯೋಗದ ಅನ್ವಯ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದ್ದು, ಶೇ 3ರಿಂದ ಶೇ12ಕ್ಕೇರಿಸಲಾಗಿದೆ. ಜನವರಿ 01, 2019ರಿಂದ ಫೆಬ್ರವರಿ 28, 2019ರ ಅವಧಿಯ ಬಾಕಿ ಮೊತ್ತವನ್ನು ಸರ್ಕಾರ ಪಾವತಿಸುತ್ತಿದೆ.

ಏಪ್ರಿಲ್ ತಿಂಗಳ ಸಂಬಳದ ಜೊತೆಗೆ ಮಾರ್ಚ್ ತಿಂಗಳ ಅವಧಿಯ ಡಿಎ ಕೂಡಾ ಸಿಗಲಿದೆ. ಜನವರಿ 01, 2019ರಿಂದ ಪೂರ್ವನ್ವಯವಾಗುವಂತೆ ಡಿಎ ಹಾಗೂ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬಾಕಿ ಮೊತ್ತವೂ ಸಿಗಲಿದೆ.

7th Pay Commission: Higher education benefit, big hike in DA for 16 lakh employees

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಗೆ ತುಟ್ಟಿಭತ್ಯೆಯ ಶೇ 10ರಷ್ಟು ಭಾಗ ಸೇರಲಿದೆ. ಉದ್ಯೋಗಿಗಳ ಇತರೆ ಪಿಂಚಣಿ ಖಾತೆಗಳಿಗೆ ರಾಜ್ಯ ಸರ್ಕಾರದಿಂದ ಮೊತ್ತ ಸೇರ್ಪಡೆಯಾಗಲಿದೆ.

ಹೋಳಿ ಹಬ್ಬದ ಕೊಡುಗೆಯಾಗಿ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ 2,000 ರು ನಿಂದ 10,000 ರು ಹೆಚ್ಚಳವಾಗಿ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಉನ್ನತ ಪದವಿ ಗಳಿಸಿದ 6 ತಿಂಗಳೊಳಗೆ ಭತ್ಯೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+