60ರ ವೃದ್ಧೆ ಜೊತೆ 22ರ ಯುವಕನ ಲವ್ವಿ-ಡವ್ವಿ, ಕೇಸ್ ಹಾಕಿದ ಮಕ್ಕಳು!

ಲಕ್ನೋ, ಜನವರಿ.25: ಪ್ರೀತಿಗೆ ಕಣ್ಣಿಲ್ಲ ನಿಜ. ಆದರೆ ಇದು ಪ್ರೀತಿಯ ಕಥೆಯಲ್ಲ, ಬದಲಿಗೆ 60 ವರ್ಷದ ವೃದ್ಧೆಯ ಜೊತೆಗೆ 22 ವರ್ಷದ ಯುವಕ ಹೊಂದಿದ್ದ ಅಕ್ರಮ ಸಂಬಂಧದ ಕಥೆ. ಅಷ್ಟಕ್ಕೂ ಇಂಥದೊಂದು ಘಟನೆ ಪ್ರೇಮಸೌಧವಿರುವ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ.

7 ಮಕ್ಕಳು ಹಾಗೂ 7 ಮಂದಿ ಮೊಮ್ಮಕ್ಕಳನ್ನು ಹೊಂದಿರುವ ವೃದ್ಧೆಯೊಂದಿಗೆ 22ರ ಯುವಕನು ಅಕ್ರಮ ಸಂಬಂಧ ಹೊಂದಿದ್ದನು ಎಂದು ಆರೋಪಿಸಲಾಗಿದೆ. ಯುವಕ ವಿರುದ್ಧ ಆಗ್ರಾದ ಎತ್ಮಾದುದ್ದಲ್ಲಾ ಪೊಲೀಸ್ ಠಾಣೆಯಲ್ಲಿ ವೃದ್ಧೆಯ ಮಕ್ಕಳು ಹಾಗೂ ಮೊಮ್ಮಕ್ಕಳು ದೂರು ನೀಡಲು ತೆರಳಿದ್ದಾರೆ.

ಪೊಲೀಸ್ ಠಾಣೆಗೆ ಇದೇ ವೇಳೆ ಯುವಕನೂ ಸಹ ತನ್ನ ಸಂಬಂಧಿಕರ ಜೊತೆಗೆ ತೆರಳಿದ್ದು, ವೃದ್ಧೆಯ ಜೊತೆಗೆ ಮದುವೆಯಾಗುವುದಾಗಿ ಘೋಷಣೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಎರಡೂ ಕುಟುಂಬಗಳ ನಡುವೆ ಪೊಲೀಸ್ ಠಾಣೆಯ ಎದುರಿನಲ್ಲೇ ಜಗಳವಾಗಿದೆ.

22-Years Old Boy Affair With 60-Years Old Women

ಮನವೊಲಿಕೆಗೆ ಮಣಿಯದಿದ್ದಾಗ ಪೊಲೀಸರಿಗೆ ದೂರು:

ಆಗ್ರಾದ ಪ್ರಕಾಶ್ ನಗರದಲ್ಲಿ ವಾಸಿಸುತ್ತಿರುವ 60 ವರ್ಷದ ವೃದ್ಧೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನಿಗೆ ಮೊದಲು ಎಚ್ಚರಿಕೆ ನೀಡಲಾಗಿತ್ತು. ವೃದ್ಧೆಯ ಜೊತೆ ಸಂಬಂಧ ಮುಂದುವರಿಸದಂತೆ ಮನವೊಲಿಕೆ ಮಾಡಲಾಗಿತ್ತು. ಆದರೆ, ಯುವಕನು ಇದಕ್ಕೆ ಮಣಿಯದಿದ್ದಾಗ ಕೆರಳಿದ ವೃದ್ಧೆಯ ಸಂಬಂಧಿಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯುವಕನ ವಿರುದ್ಧ ಕುಟುಂಬ ಶಾಂತಿ ಕದಡಿದ್ದಾನೆ ಎಂದು ಆರೋಪಿಸಿ ಎತ್ಮಾದುದ್ದಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+