ಒಂದೇ ಹುಡುಗಿ ಲವ್ ಮಾಡಲು ಹೋಗಿ ಪ್ರಾಣತೆತ್ತ ಇಬ್ಬರು ಶಿಕ್ಷಕರು!

ಲಕ್ನೋ, ಫೆಬ್ರವರಿ 20: ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಅವರ ಬದುಕಿಗೆ ಆಸರೆಯಾಗಬೇಕಿದ್ದ ಶಿಕ್ಷಕರಿಬ್ಬರು, ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸಲು ಹೋಗಿ ಕೊನೆಗೆ ಇಬ್ಬರೂ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರಪ್ರದೇಶದ ಮಿರ್ಜಾಪುರದ ಕುರೈಥಿಯ ಎಚ್ ಪಿ ತಿವಾರಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷರಾಗಿದ್ದ ಇಬ್ಬರು ಶಿಕ್ಷಕರು ಅದೇ ಶಾಲೆಯ ವಿದ್ಯಾರ್ಥಿನಿಯನ್ನು ಪ್ರೀತಿಸಿ ಕೊನೆಗೆ ಇಬ್ಬರೂ ಸಾವಿನಲ್ಲಿ ಅಂತ್ಯಕಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಇಬ್ಬರು ಶಿಕ್ಷಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದ ಮೇಲೆ ಶಾಲಾ ಸಿಬ್ಬಂದಿ ಸಹೋದ್ಯೋಗಿಗಳು ಇಬ್ಬರಿಗೂ ವಿಷಯ ಮನವರಿಕೆ ಮಾಡಿದ್ದರು. ಪ್ರೀತಿಯ ಅಮಲಿನಲ್ಲಿದ್ದ ಶಿಕ್ಷಕ ಕೊನೆಗೂ ತನ್ನ ಸಹೋದ್ಯೋಗಿ ಶಿಕ್ಷಕನನ್ನು ಕೊಲೆ ಮಾಡಿಸಿದ್ದ. ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದ ಎಂದು ವರದಿ ವಿವರಿಸಿದೆ.

 2 Young Teachers Dead For One Girl In Uttar Pradesh

ತಿವಾರಿ ಪಬ್ಲಿಕ್ ಶಾಲೆಯಲ್ಲಿ ಸೂರಜ್, ಅನೂಜ್ ಹಾಗೂ ರತ್ನೇಶ್ ಮೂವರು ಶಿಕ್ಷಕರಾಗಿದ್ದರು. ಸೂರಜ್ ಮತ್ತು ಅನೂಜ್ ಆಪ್ತ ಸ್ನೇಹಿತರಾಗಿದ್ದರು. ಅನೂಜ್ ಕಳೆದ ಮೂರು ವರ್ಷಗಳಿಂದ ಅದೇ ಶಾಲೆಯ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಸೂರಜ್ ಕೂಡಾ ಅದೇ ಹುಡುಗಿ ಜತೆ ಮೊಬೈಲ್ ನಲ್ಲಿ ಮಾತನಾಡತೊಡಗಿದ್ದ. ಈ ಬಗ್ಗೆ ಅನೂಜ್ ಗೆ ವಿಷಯ ತಿಳಿದಾಗ ಸೂರಜ್ ಗೆ ತಾನು ಪ್ರೀತಿಸುತ್ತಿದ್ದ ವಿಷಯ ಮನವರಿಕೆ ಮಾಡಲು ಯತ್ನಿಸಿದ್ದ.

ಕೊನೆಗೆ ಅನೂಜ್, ರತ್ನೇಶ್ ಫೆಬ್ರವರಿ 11ರಂದು ಮಫ್ಲರ್ ನಿಂದ ಸೂರಜ್ ಉಸಿರುಗಟ್ಟಿಸಿ ಕೊಂದು ಶವವನ್ನು ಬಾವಿಗೆ ಎಸೆದಿದ್ದರು. ಫೆ.13ರಂದು ಅನೂಜ್ ಆತ್ಮಹತ್ಯೆಗೆ ಶರಣಾಗಿದ್ದ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ನಂತರ ಪೊಲೀಸರು ರತ್ನೇಶ್ ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+