ಜೈಲಲ್ಲೇ ಇದ್ದರೂ ಪರವಾಗಿಲ್ಲ, ದುಡ್ಡು ಕೊಡ್ತೀನಿ ಎಂದ ವಿಜಯ್ ಮಲ್ಯ!
ಲಂಡನ್, ಏಪ್ರಿಲ್ 17: ಅತ್ತ ಸಾಲ ತೀರಿಸಲಾಗದೆ, ಇತ್ತ ಸಿಬ್ಬಂದಿಗೆ ಸಂಬಳವನ್ನೂ ನೀಡಲಾಗದೆ ಮುಚ್ಚುವ ಹಂತಕ್ಕೆ ಬಂದಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ ಬಗ್ಗೆ ಕನಿಕರ ವ್ಯಕ್ತಪಡಿಸಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಉದ್ಯಮಿ ವಿಜಯ್ ಮಲ್ಯ, ತಮ್ಮ ಹಣವನ್ನು ತೆಗೆದುಕೊಂಡು ಜೆಟ್ ಏರ್‌ವೇಸ್ ಉಳಿಸಿ ಎಂದು ಮತ್ತೆ ಹೇಳಿದ್ದಾರೆ.
ಜೆಟ್ ಏರ್‌ವೇಸ್ ಸಂಕಷ್ಟದ ಕುರಿತಂತೆ ಅನುಕಂಪ ತೋರಿಸಿ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ಒಂದು ಕಾಲದಲ್ಲಿ ಕಿಂಗ್‌ಫಿಶರ್‌ಗೆ ಜೆಟ್ ಏರ್‌ವೇಸ್ ಪ್ರಮುಖ ಸ್ಪರ್ಧಿಯಾಗಿದ್ದರೂ, ಈಗಿನ ಪರಿಸ್ಥಿತಿ ನೋಡಿದಾಗ ವಿಷಾದ ಎನಿಸುತ್ತದೆ. ಏರ್ ಇಂಡಿಯಾ ಉಳಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಹಣ ಸಿಗುತ್ತದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ. ಈ ತಾರತಮ್ಯ ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.
ತಾವು ಹಣ ಮರುಪಾವತಿಸಲು ಸಿದ್ಧನಾಗಿದ್ದರೂ ತಮ್ಮ ಬಗ್ಗೆ ಮಾಧ್ಯಮಗಳು ಕಥೆ ಕಟ್ಟುತ್ತಿವೆ. ಲಂಡನ್ನೋ ಅಥವಾ ಭಾರತದ ಜೈಲೋ, ಎಲ್ಲಿದ್ದರೂ ತಾವು ಹಣ ಮರಳಿಸಲು ಸಿದ್ಧ. ಆದರೆ, ಬ್ಯಾಂಕುಗಳು ಏಕೆ ಅದನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಮಲ್ಯ ಮತ್ತೆ ಪ್ರಶ್ನೆ ಹಾಕಿದ್ದಾರೆ.
ಜೆಟ್ ಏರ್‌ವೇಸ್ ಸಂಸ್ಥೆಗೆ ಸಹಾಯ ಮಾಡುವುದಾಗಿ ಮಲ್ಯ ಈ ಹಿಂದೆಯೂ ಹೇಳಿದ್ದರು. ತಾವು ಬ್ಯಾಂಕುಗಳಿಗೆ ಸಾಲ ತೀರಿಸಬೇಕಿದೆ. ಅದಕ್ಕೆ ಆಸ್ತಿ ಮಾರಲು ಸಿದ್ಧನಿರುವುದಾಗಿ ಕರ್ನಾಟಕ ಹೈಕೋರ್ಟ್ ಎದುರು ಒಪ್ಪಿಕೊಂಡಿದ್ದಾಗಿದೆ. ಆ ಹಣವನ್ನು ತೆಗೆದುಕೊಂಡು ಜೆಟ್ ಏರ್‌ವೇಸ್‌ಗೆ ನೀಡಿ ಎಂದು ಮಲ್ಯ ಕೋರಿದ್ದರು.
ಸಾರ್ವಜನಿಕ ಬ್ಯಾಂಕುಗಳು ಮತ್ತು ಇತರೆ ಸಾಲದಾತರಿಗೆ ಹಣ ಮರಳಿಸಲು ನನ್ನ ಸ್ಥಿರ ಆಸ್ತಿಗಳನ್ನು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಂದೆ ಇರಿಸಿದ್ದೇನೆಂದು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಬ್ಯಾಂಕುಗಳು ನನ್ನ ಹಣವನ್ನೇಕೆ ತೆಗೆದುಕೊಳ್ಳುತ್ತಿಲ್ಲ? ಏನಿಲ್ಲದಿದ್ದರೂ ಅದು ಜೆಟ್ ಎರ್‌ವೇಸ್ ಉಳಿಸಲು ಸಹಾಯಮಾಡುತ್ತದೆ ಎಂದು ಮಲ್ಯ ಹೇಳಿದ್ದರು.
|
ತಾರತಮ್ಯಕ್ಕೆ ಕ್ಷಮೆ ಇಲ್ಲ
ಒಂದು ಕಾಲದಲ್ಲಿ ಕಿಂಗ್‌ಫಿಶರ್‌ಗೆ ಜೆಟ್ ಏರ್‌ವೇಸ್ ಪ್ರಮುಖ ಸ್ಪರ್ಧಿಯಾಗಿದ್ದರೂ ಇಷ್ಟು ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ವೈಫಲ್ಯ ಕಂಡಿರುವುದಕ್ಕೆ ವಿಷಾದವಾಗುತ್ತಿದೆ. ಏರ್ ಇಂಡಿಯಾವನ್ನು ಮೇಲೆತ್ತಲು ಸರ್ಕಾರ 35 ಕೋಟಿ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡಿತ್ತು. ಸಾರ್ವಜನಿಕ ವಲಯದ ಸಂಸ್ಥೆಯಾಗಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮಲ್ಯ ಕಿಡಿಕಾರಿದ್ದಾರೆ.
|
ಕಿಂಗ್ ಫಿಶರ್ ಸಾಲಮಾಡಿತ್ತು
ಕಿಂಗ್ ಫಿಶರ್ ಮೇಲೆ ನಾನು ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದೆ. ಅದು ಅತ್ಯಂತ ವೇಗವಾಗಿ ದೇಶದ ಅತಿ ದೊಡ್ಡ ಮತ್ತು ಪುರಸ್ಕೃತ ವಿಮಾನಯಾನ ಸಂಸ್ಥೆಯಾಗಿ ಬೆಳೆದಿತ್ತು. ನಿಜ, ಕಿಂಗ್ ಫಿಶರ್ ಪಿಎಸ್‌ಯು ಬ್ಯಾಂಕುಗಳಿಂದಲೂ ಸಾಲ ಪಡೆದಿತ್ತು. ನಾನು ಶೇ 100ರಷ್ಟು ಹಣವನ್ನು ಮರಳಿ ಪಾವತಿಸುವುದಾಗಿ ತಿಳಿಸಿದ್ದೆ. ಆದರೆ, ಅದರ ಬದಲು ನನ್ನ ಮೇಲೆ ಅಪರಾಧಿ ಎಂಬ ಆರೋಪ ಹೊರಿಸಲಾಯಿತು. ವಿಮಾನಯಾನ ಸಂಸ್ಥೆಯ ಕರ್ಮ? ಎಂದು ಬೇಸರ ತೋಡಿಕೊಂಡಿದ್ದಾರೆ.
|
ಸಾಲ ಮರಳಿಸಲು ಸಿದ್ಧ
ಪಿಎಸ್‌ಯು ಬ್ಯಾಂಕುಗಳಿಗೆ ಶೇ 100ರಷ್ಟು ಪಾವತಿಸಲು ಸಿದ್ಧನಿರುವುದಾಗಿ ನಾನು ಪ್ರತಿ ಬಾರಿ ಹೇಳಿದಾಗಲೂ ಮಾಧ್ಯಮಗಳು, ನಾನು ಇಂಗ್ಲೆಂಡ್‌ನಿಂದ ಭಾರತಕ್ಕೆ ಗಡಿಪಾರಾಗುವುದಕ್ಕೆ ಭಯಭೀತನಾಗಿದ್ದೇನೆ, ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳುತ್ತವೆ. ನಾನು ಲಂಡನ್ ಅಥವಾ ಭಾರತದ ಜೈಲಿನಲ್ಲಿಯೇ ಇರಲಿ, ಸಾಲ ಮರಳಿಸಲು ಬಯಸಿದ್ದೇನೆ. ಆದರೆ, ನಾನು ಆಫರ್ ಮಾಡಿರುವುದನ್ನು ಮೊದಲು ತೆಗೆದುಕೊಳ್ಳಲು ಬ್ಯಾಂಕುಗಳು ಏಕೆ ಸಿದ್ಧವಿಲ್ಲ? ಎಂದು ಪ್ರಶ್ನಿಸಿದ್ದಾರೆ.
|
ಭಾರತ ಹೆಮ್ಮೆ ಪಡಬೇಕು
ನಾವು ಕಠಿಣ ಸ್ಪರ್ಧಿಗಳಾಗಿದ್ದರೂ, ಜೆಟ್ ಏರ್‌ವೇಸ್ ಕಟ್ಟಿದ ನರೇಶ್ ಮತ್ತು ನೀತಾ ಗೋಯಲ್ ಅವರ ಬಗ್ಗೆ ನನ್ನ ಅನುಕಂಪವಿದೆ. ಅವರ ಕುರಿತು ಭಾರತ ಸಾಕಷ್ಟು ಹೆಮ್ಮೆ ಪಡಬೇಕು. ಉತ್ತಮ ವಿಮಾನಸಂಸ್ಥೆ ಎಲ್ಲಡೆ ಗುಣಮಟ್ಟದ ಸಂಪರ್ಕ ಸೇವೆ ಒದಗಿಸುತ್ತಿತ್ತು. ಭಾರತದಲ್ಲಿ ಅನೇಕ ವಿಮಾನಗಳು ದೂಳು ತಿನ್ನುತ್ತಾ ಕೂರುತ್ತಿವೆ, ಏಕೆ? ಎಂದಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications