Get Updates
Get notified of breaking news, exclusive insights, and must-see stories!

ತೆರೆಸಾ ಮೇ ಸರ್ಕಾರ ಪತನದ ಭೀತಿ, ಮುಳುವಾದ ಬ್ರೆಕ್ಸಿಟ್ ಒಪ್ಪಂದ

ಲಂಡನ್, ಜನವರಿ 16: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ತೀರ್ಮಾನ ಕುರಿತ ಒಪ್ಪಂದಕ್ಕೆ ಬ್ರಿಟನ್ನಿನ ಸಂಸತ್ತಿನಲ್ಲಿ ಸೋಲುಂಟಾಗಿದೆ. ಇದರಿಂದ ಕನ್ಸರ್ವೇಟಿವ್ ಪಕ್ಷದ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ಲೇಬರ್ ಪಾರ್ಟಿ ಹೇಳಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ತೀರ್ಮಾನವನ್ನು ಕಳೆದ ವರ್ಷ ಮಾರ್ಚ್‌ 29ರಂದು ತೆಗೆದುಕೊಳ್ಳಲಾಗಿದೆ. ಆದರೆ ಇದಕ್ಕೆ ಬ್ರಿಟನ್‌ ಸಂಸತ್ತಿನಲ್ಲಿ ಸಮ್ಮತಿ ಸಿಕ್ಕಿಲ್ಲ, ಹೀಗಾಗಿ, ಸರ್ಕಾರ ಪತನದ ಭೀತಿಯಲ್ಲಿಯೇ ಇಲ್ಲಿ ತನಕ ಥೆರೆಸಾ ಮೇ ಅವರು ಅಧಕರ ನಡೆಸುತ್ತಾ ಬಂದಿದ್ದಾರೆ.

Setback for May, British MPs vote overwhelmingly to reject Brexit deal

ಬ್ರೆಕ್ಸಿಟ್ ವಿರುದ್ಧ ಮತ: ಪ್ರಧಾನಿ ತೆರೇಸಾ ಮೇ ಅವರು ಬ್ರೆಕ್ಸಿಟ್ ಒಪ್ಪಂದ ಪರ ಮತ ಹಾಕುವಂತೆ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯ ಮಂಡಿಸಿದ್ದರು. ಇದನ್ನು ಅನುಮೋದಿಸಿ 202 ಮಂದಿ ಮತ ಬಂದಿದ್ದರೆ, 432 ಮಂದಿ ಇದನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಹೀಗಾಗಿ, 230ಕ್ಕೂ ಅಧಿಕ ಮತಗಳ ಅಂತರದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ 'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಹೆಚ್ಚು ಮತಗಳು(2016 ಜೂನ್ 23ರ ಎಣಿಕೆ 51.9%) ಬಿದ್ದಿದ್ದವು. ಜನಾದೇಶದ ಬಳಿಕ ಪ್ರಧಾನಿ ಹುದ್ದೆಗೆ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ತುಂಬಿದ್ದ ತೆರೇಸಾ ಮೇ ಬ್ರೆಕ್ಸಿಟ್ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

ದೇಶದ ಒಳಿತಿಗಾಗಿ ಈ ವಿಧೇಯಕ ಪರ ಮತ ಚಲಾಯಿಸುವಂತೆ ಮೇ ಸಂಸತ್ ಸದಸ್ಯರಲ್ಲಿ ಮನವಿ ಮಾಡಿದ್ದರು. ಒಂದು ವೇಳೆ ಬ್ರೆಕ್ಸಿಟ್‌ ಒಪ್ಪಂದಕ್ಕೆ ಸಂಸತ್‌ನಲ್ಲಿ ಅನುಮೋದನೆ ದೊರೆಯದಿದ್ದರೆ ಅದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ದುರಂತ ಮತ್ತು ಕ್ಷಮಿಸಲಾಗದ ನಂಬಿಕೆ ದ್ರೋಹ ಆಗಲಿದೆ ಎಂದು ಮೇ ಎಚ್ಚರಿಕೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+