• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಕೆಯ ಹೋಟೆಲ್‌ ಒಂದರಲ್ಲಿ ಭಾರತ ಮೂಲದ ವೈದ್ಯನ ಶವ ಪತ್ತೆ

|

ಲಂಡನ್, ಮೇ 30: ಭಾರತ ಮೂಲದ ವೈದ್ಯನ ಶವ ಯುಕೆಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದೆ.

ಕೊವಿಡ್ 19 ರೋಗಿಗಳಿಗೆ ಇವರು ಚಿಕಿತ್ಸೆ ನೀಡುತ್ತಿದ್ದರು. ಲಾಕ್‌ಡೌನ್ ಇರುವ ಕಾರಣ ಮನೆಗೆ ಹೋಗದೆ ಅವರು ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು.

ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

ಡಾ. ರಾಜೇಶ್ ಗುಪ್ತಾ(ಮೃತ ವೈದ್ಯ)ವೆಕ್ಸಾಮ್ ಪಾರ್ಕ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಯುಕೆ ಆಸ್ಪತ್ರೆಯ ಉನ್ನತ ಹುದ್ದೆಗೇರಿದ್ದರು. ಅವರು ಕವಿಯಾಗಿದ್ದರು, ಪೇಯಿಂಟರ್, ಫೋಟೊಗ್ರಾಫರ್, ಅಡುಗೆಯನ್ನೂ ಚೆನ್ನಾಗಿ ಮಾಡುತ್ತಿದ್ದರು ಎಂದು ಅವರ ಸಹೋದ್ಯೋಗಿಗಳು ನೆನೆಸಿಕೊಂಡಿದ್ದಾರೆ.

ಯುಕೆಗೆ ಬರುವ ಮುನ್ನ ರಾಜೇಶ್ ಅವರು ಜಮ್ಮುವಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಅವರು ಪತ್ನಿ , ಪುತ್ರನನ್ನು ಅಗಲಿದ್ದಾರೆ. ಅವರ ಸಾವು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ.

ಕೊರೊನಾವ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಕಾರಣ ಕುಟುಂಬದವರಿಗೆ ತೊಂದರೆಯಾಗಬಾರದು ಎಂದು ಬೇರೆಡೆ ಉಳಿದುಕೊಳ್ಳುತ್ತಿದ್ದರು. ಯುಕೆಯಲ್ಲಿ 2 ಲಕ್ಷ 73 ಸಾವಿರ ಕೊರೊನಾ ಸೋಂಕಿತರಿದ್ದಾರೆ. 38,161 ಮಂದಿ ಸಾವನ್ನಪ್ಪಿದ್ದಾರೆ.

English summary
An Indian-origin doctor working on the frontline of the coronavirus pandemic at a UK hospital was found dead in the hotel where he was staying in order to isolate himself from his family during the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X