• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೆಂಗ್ವಿನ್‌ಗಳ ನಾಡಿಗೂ ಕಾಲಿಟ್ಟ ಮಹಾಮಾರಿ ಕೊರೊನಾ

|

ಲಂಡನ್, ಏಪ್ರಿಲ್ 4: ಮಹಾಮಾರಿ ಕೊರೊನಾ ಜಗತ್ತಿನಲ್ಲಿ ಎಲ್ಲ ರಾಷ್ಟ್ರಗಳಿಗೂ ತನ್ನ ಪ್ರಭಾವವನ್ನು ಚಾಚುತ್ತಾ ಸಾಗಿದೆ. ಪೆಂಗ್ವಿನ್‌ಗಳ ಸ್ವರ್ಗವಾದ ಅಟ್ಲಾಂಟಿಕ್ ಹಿಮಸಾಗರದ ಮಧ್ಯ ಇರುವ ಪಾಲ್ಕಾಲ್ಯಾಂಡ್‌ ಎಂಬ ದ್ವೀಪ ರಾಷ್ಟ್ರಕ್ಕೂ ಕೊರೊನಾ ಕರಿನೆರಳು ಬಡೆದಿದೆ.

ಪಾಲ್ಕಾಲ್ಯಾಂಡ್‌ನ ಒಬ್ಬ ವ್ಯಕ್ತಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. 3400 ಜನರ ಮೇಲೆ ಕೊರೊನಾ ಶಂಕೆ ಇದ್ದು, ಸದ್ಯ ಒಬ್ಬ ವ್ಯಕ್ತಿಗೆ ಮಾತ್ರ ಕೊರೊನಾ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಪಾಲ್ಕಾಲ್ಯಾಂಡ್ ಕೋವಿಡ್ ಬಗ್ಗೆ ತೀವ್ರ ಮುನ್ನೆಚ್ಚರಿಕೆ ವಹಿಸಿದಾಗಲೂ ಕೋವಿಡ್ ಆಕ್ರಮಿಸುವುದನ್ನು ತಪ್ಪಿಸಲು ಆಗಿಲ್ಲ. ಚೀನಾದಲ್ಲಿ ಕೊರೊನಾ ಉಪಟಳ ಪ್ರಾರಂಭಿಸಿದಾಗಿನಿಂದಲೇ ಪಾಲ್ಕಾಲ್ಯಾಂಡ್ ಕೋವಿಡ್ ಎದುರಿಸಲು ಸಿದ್ದವಾಗಿತ್ತು. ಪಾಲ್ಕಾಲ್ಯಾಂಡ್ ಜನ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಮಹಾಮಾರಿಯನ್ನು ಎದುರಿಸಲು ಸಿದ್ದ ಎಂದು ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ.

ಪಾಲ್ಕಾಲ್ಯಾಂಡ್ ಎಂಬುದು ದ್ವೀಪ ರಾಷ್ಟ್ರಗಳ ಸಮೂಹವಾಗಿದೆ. ಅರ್ಜೆಂಟೈನಾದಿಂದ ಆಕ್ರಮಣಕ್ಕೆ ಒಳಗಾಗಿದ್ದ ಈ ರಾಷ್ಟ್ರ 1982 ರಲ್ಲಿ ಸ್ವಾತಂತ್ಯಗೊಂಡಿದೆ. ಇಲ್ಲಿ ಪೆಂಗ್ವಿನ್‌ಗಳು ಹೆಚ್ಚು ಕಂಡು ಬರುತ್ತವೆ.

English summary
Falkland Islands Confirm First Covid19 Case. Falkland Islands is famous for penguins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X