ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿತ್ತು ಕೋಳಿ ತಲೆ: ಮಹಿಳೆ ಶಾಕ್
ಲಂಡನ್ ಡಿಸೆಂಬರ್ 24: ಸ್ನೇಹಿತರೆಲ್ಲಾ ಸೇರಿ ಪಾರ್ಟಿ ಮಾಡ್ಬೇಕು ಅಂದ್ರೆ, ಮನೆಗೆ ಗೆಸ್ಟ್ ಬಂದಾಗ ಊಟ ಮಾಡಬೇಕು ಅಂದ್ರೆ, ಯಾರಿಗಾದ್ರು ಟ್ರೀಟ್ ಕೊಡಿಸ್ಬೇಕು ಅಂದ್ರೆ ಬಹುತೇಕರು ಆಯ್ಕೆ ಮಾಡಿಕೊಳ್ಳುವುದು ಕೆಎಫ್‌ಸಿ ಚಿಕನ್. ಅದ್ಯಾಕೋ ಏನೋ ಅದರ ರುಚಿಗೋ ಶುಚಿಗೋ ಗೊತ್ತಿಲ್ಲ ಕೆಎಫ್‌ಸಿ ಅಂದ್ರೆ ಜನರಿಗೆ ಎಲ್ಲಿಲ್ಲದ ಪ್ರೀತಿ. ಸ್ಪಷಲ್ ಡೇ ಹೊರತಾಗಿ ಪ್ರತೀ ವೀಕೆಂಡ್‌ನಲ್ಲಿ ಕೆಎಫ್‌ಸಿ ಚಿಕನ್ ಸವಿಯುವವರು ಇದ್ದಾರೆ. ಅಷ್ಟೇ ಯಾಕೆ ಪ್ರತಿನಿತ್ಯ ಕೆಎಫ್‌ಸಿ ಚಿಕನ್ ತಿನ್ನೋರು ನಮ್ಮ ಸುತ್ತ ತುಂಬಾ ಜನ ಇದ್ದಾರೆ. ಅಷ್ಟಕ್ಕೂ ಈ ವಿಚಾರವನ್ನ ಯಾಕೆ ಹೇಳ್ತಾಯಿದಿವಿ ಅನ್ಕೊಂಡ್ರಾ. ಅದಕ್ಕೆ ಉತ್ತರ ಕೇಳಿದ್ರೆ ನೀವು ಒಂದು ಕ್ಷಣ ಬೆಚ್ಚಿ ಬೀಳ್ತೀರಿ. ಮಹಿಳೆಯೊಬ್ಬಳು ಕೆಎಫ್‌ಸಿಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೋಳಿಯ ತಲೆಯನ್ನು ಕಂಡು ಅಘಾತಗೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಡೀ ಕೋಳಿಯ ತಲೆಯು ಗರಿಗರಿಯಾಗಿ ಡೀಪ್-ಫ್ರೈ ಮಾಡಲಾಗಿದೆ. ಅದರಲ್ಲಿ ಕೋಳಿಯ ಕಣ್ಣುಗಳು, ಕೊಕ್ಕೆ ಕೂಡ ಕಾಣಿಸುತ್ತದೆ. ಗೇಬ್ರಿಯಲ್ ಎಂಬ ಮಹಿಳಾ ಗ್ರಾಹಕಿ ಆಗ್ನೇಯ ಲಂಡನ್‌ನ ಟ್ವಿಕನ್‌ಹ್ಯಾಮ್‌ನಲ್ಲಿರುವ ಕೆಎಫ್‌ಸಿ ಫೆಲ್ತಮ್‌ನಿಂದ ಚಿಕನ್ ಹಾಟ್ ವಿಂಗ್ಸ್ ಆರ್ಡರ್ ಮಾಡಿದ್ದಾರೆ. ಬಳಿಕ ಅವರಿಗೆ ತಲುಪಿದ ಕೆಎಫ್‌ಸಿ ಚಿಕನ್ ನ ವಿಲಕ್ಷಣ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ಆರ್ಡರ್ ಮಾಡಿದ ಚಿಕನ್ ಹಾಟ್ ವಿಂಗ್ಸ್ ನಲ್ಲಿ ಫ್ರೈಡ್ ಚಿಕನ್ ಹೆಡ್ ಅನ್ನು ಕಂಡುಕೊಂಡಿದ್ದೇನೆ. ಇದನ್ನು ಕಂಡು ನನಗೆ ಚಿಕನ್ ಸೇವಿಸಲಾಗದೆ ಎಸೆದಿದ್ದೇನೆ" ಎಂದು ಅವರು ಬರೆದಿದ್ದಾರೆ.
ಫೋಟೋದಲ್ಲಿ ಕೊಕ್ಕನ್ನು ಸಹ ಕತ್ತರಿಸದೇ ಇಡೀ ತಲೆಯನ್ನು ಗರಿಗರಿಯಾಗಿ ಬೇಯಿಸಿ ಹಾಗೆಯೇ ನೀಡಿರುವುದನ್ನು ಕಾಣಬಹುದಾಗಿದೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವಾರು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.ಘಟನೆಗೆ ಕಾರಣವಾದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೆಎಫ್‌ಸಿ ತಿಳಿಸಿದೆ. "ಈ ಫೋಟೋದಿಂದ ನಾವು ನಿಜವಾಗಿಯೂ ಆಶ್ಚರ್ಯಗೊಂಡಿದ್ದೇವೆ. ಗೇಬ್ರಿಯೆಲ್ ಸಂಪರ್ಕಕ್ಕೆ ಬಂದಾಗಿನಿಂದ, ಅದು ಹೇಗೆ ಸಂಭವಿಸಿತು ಎಂದು ನಾವು ಪರಿಶೀಲಿಸುತ್ತಿದ್ದೇವೆ "ಎಂದು ಕೆಎಫ್‌ಸಿ ವರದಿಯಲ್ಲಿ ಉಲ್ಲೇಖಿಸಿದೆ.

ಈ ವೈರಲ್ ಫೋಟೋ ಬಗ್ಗೆ ಕೆಎಫ್‌ಸಿ ಪ್ರತಿಕ್ರಿಯೆ ನೀಡಿದೆ. ಈ ಫೋಟೋ ನೋಡಿ ನಾವು ಕೂಡ ಶಾಕ್ ಆಗಿದ್ದೇವೆ. "ನಾವು ಫ್ರೆಶ್ ಆಗಿ ತಯಾರಿಸಿದ ಚಿಕನ್ ಅನ್ನು ನೀಡುತ್ತೇವೆ. ಹೀಗಾಗಿ ಕೆಎಫ್‌ಸಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಗ್ರಾಹಕರು ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ. ಅದರ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಜೊತೆಗೆ ಕೆಎಫ್‌ಸಿ ಸಿಬ್ಬಂದಿಗೆ ಎಲ್ಲವನ್ನೂ ಹೊಸದಾಗಿ ತಯಾರಿಸಲು ಮಾಹಿತಿ ನೀಡುತ್ತದೆ. ಶುಚಿಯಾಗಿರುವತ್ತ ಹೆಚ್ಚಾಗಿ ಗಮನ ಹರಿಸುತ್ತದೆ. ಚಿಕನ್ ಸಿದ್ಧಪಡಿಸುವ ನಮ್ಮ ಸಿಬ್ಬಂದಿಗೆ, ಪೂರೈಕೆದಾರರು, ಪಾಲುದಾರರು ಮತ್ತು ತಂಡಗಳೊಂದಿಗೆ ಕಟ್ಟುನಿಟ್ಟಾದ ತಿಳಿಸುವ ಮೂಲಕ ಸ್ಪಷ್ಟವಾಗಿ ಜಾರಿಕೊಂಡಿದೆ" ಎಂದು KFC ಹೇಳಿದೆ.
"ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪೂರೈಕೆದಾರರ ಹೊರತಾಗಿ ಈಗಾಗಲೇ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಮತ್ತೆ ಸಂಭವಿಸುವುದನ್ನು ತಡೆಯಲು ನಮ್ಮ ತಂಡಗಳಿಗೆ ಮರು ತರಬೇತಿ ನೀಡುತ್ತಿದೆ" ವಿಲಕ್ಷಣ ಅನುಭವಕ್ಕೆ ಪರಿಹಾರವಾಗಿ ಗ್ರಾಹಕರಿಗೆ ಕೆಲವು ಉಚಿತ ಊಟವನ್ನು ನೀಡಿದೆ ಎಂದು ಕೆಎಫ್‌ಸಿ ಹೇಳಿದೆ.
"ಆದರೆ ಇಂಥಹ ಕ್ರಮಗಳಿಂದ ಗೇಬ್ರಿಯಲ್ ಅವರ ಅನುಭವವನ್ನು ಬದಲಾಯಿಸುವುದಿಲ್ಲ. ಆದ್ದರಿಂದ ನಾವು ಅವರನ್ನು ಸಂಪರ್ಕಿಸಿದ್ದೇವೆ. ಈ ತಪ್ಪು ಮರುಕಳಿಸದಂತೆ ನಾವು ಅವರಿಗೆ ತಿಳಿಸಿದ್ದೇವೆ. ಸಿಬ್ಬಂದಿಯಿಂದಾಗಿರಬಹುದಾದ ತಪ್ಪಿಗೆ ಕ್ಷಮೆ ಕೂಡ ಕೇಳಲಾಗಿದೆ. ಜೊತೆಗೆ ಅವರಿಗೆ ಕೆಲವು ಉಚಿತ KFC ಚಿಕನ್ ಕೂಡ ನೀಡಲಾಗಿದೆ. ಅದನ್ನು ಅವರು ಸ್ವೀಕರಿಸಿದ್ದಾರೆ" ಎಂದು KFC ಉಲ್ಲೇಖಿಸಿದೆ.












Click it and Unblock the Notifications