Breaking; ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯ ಸ್ಥಿತಿ ಗಂಭೀರ

ಲಂಡನ್, ಸೆ. 8: ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಬಕಿಂಗ್‌ಹ್ಯಾಂನ ಅರಮನೆ ಸಿಬ್ಬಂದಿ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಸ್ಕಾಟ್‌ಲೆಂಡ್‌ನಲ್ಲಿರುವ ಮನೆಯಲ್ಲೇ ರಾಣಿ ಅವರಿಗೆ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಆದರೆ, ರಾಣಿಯ ವೈದ್ಯರು ಹೇಳುವ ಪ್ರಕಾರ, ಅವರು ಆರಾಮವಾಗಿಯೇ ಇದ್ದಾರೆ. ಆದರೆ, ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುವ ಅವಶ್ಯಕತೆ ಇದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

96 ವರ್ಷದ ರಾಣಿ ಎರಡನೇ ಎಲಿಜಬೆತ್ ಅನಾರೋಗ್ಯ ಹಿನ್ನೆಲೆಯಲ್ಲಿ ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರುಸ್ ಆತಂಕ ವ್ಯಕ್ತಪಡಿಸಿದ್ದಾರೆ. "ಬಕಿಂಗ್‌ಹ್ಯಾಂ ಅರಮನೆಯಿಂದ ಕೇಳಿಬಂದ ಸುದ್ದಿಯಿಂದ ಇಡೀ ದೇಶ ಚಿಂತೆಗೆ ಒಳಗಾಗಿದೆ" ಎಂದು ಲಿಜ್ ಟ್ರುಸ್ ಟ್ವೀಟ್ ಮಾಡಿದ್ದಾರೆ.

ಎರಡನೇ ಎಲಿಜಬೆತ್ ರಾಣಿ ಬ್ರಿಟನ್ ದೇಶದ ಇತಿಹಾಸದಲ್ಲೇ ಅತಿ ಸುದೀರ್ಘ ಕಾಲ ಅಡಳಿತ ನಡೆಸಿದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. 70 ವರ್ಷಗಳಿಂದಲೂ ಅವರು ರಾಣಿಯಾಗಿ ಅಧಿಕಾರ ನಡೆಸಿದ್ದಾರೆ. 1952ರಲ್ಲಿ ಅವರು ರಾಣಿಯಾಗಿದ್ದು.

Britain Queen Elizabeth II Health Updates, Doctors Worried

ಕಳೆದ ವರ್ಷ ಎಲಿಜಬೆತ್ ರಾಣಿಯ ಪತಿ ಫಿಲಿಪ್ ನಿಧನ ಹೊಂದಿದ್ದರು. ಫಿಲಿಪ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಎರಡನೇ ಎಲಿಬಬೆತ್‌ಗೆ ನಾಲ್ವರು ಮಕ್ಕಳಿದ್ದು, ವೇಲ್ಸ್ ರಾಜಕುಮಾರ್ ಚಾರ್ಲ್ಸ್ ಮೊದಲನೆಯ ಪುತ್ರ. ಹಾಗೆಯೇ, ಪ್ರಿನ್ಸ್ ಆಂಡ್ರ್ಯೂ, ಪ್ರಿನ್ಸ್ ಎಡ್ವರ್ಡ್ ಮತ್ತು ರಾಜಕುಮಾರಿ ಆನ್ ಅವರು ಇತರ ಮೂವರು ಮಕ್ಕಳು.

ಎಲಿಜಬೆತ್ ರಾಣಿಗೆ ಉತ್ತರಾಧಿಕಾರಿಯಾಗಲಿರುವುದು ರಾಜಕುಮಾರ ಚಾರ್ಲ್ಸ್. ಸದ್ಯ ಇವರು ವೇಲ್ಸ್‌ನ ಪ್ರಿನ್ಸ್ ಆಗಿದ್ದಾರೆ. ಪ್ರಿನ್ಸ್ ಚಾರ್ಲ್ಸ್ ಮತ್ತವರ ಪತ್ನಿ ಕ್ಯಾಮಿಲಾ ಅವರು ರಾಣಿಯ ಆರೋಗ್ಯ ವಿಚಾರಿಸಲು ಸ್ಕಾಟ್‌ಲೆಂಡ್‌ನ ಬಲ್ಮೋರಲ್‌ಗೆ ತೆರಳಿದ್ದಾರೆ. ಎಲಿಬಜೆತ್ ಮೊಮ್ಮದ ಪ್ರಿನ್ಸ್ ವಿಲಿಯಂ ಕೂಡ ತೆರಳಿದ್ದಾರೆ.

Britain Queen Elizabeth II Health Updates, Doctors Worried

ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದಲೂ ರಾಣಿ ಎಲಿಜಬೆತ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿರುವುದು ಗೊತ್ತಾಗಿದೆ. ಅವರಿಗೆ ನಡೆಯಲು ಮತ್ತು ನಿಂತುಕೊಳ್ಳಲೂ ಕಷ್ಟ ಎಂಬಂತಹ ಮಾತುಗಳು ಕೇಳಿಬರುತ್ತಿದ್ದವು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದಾರೆನ್ನಲಾಗಿದೆ. ನಿನ್ನೆ ಬುಧವಾರ ರಾಣಿ ಅವರು ತಮ್ಮ ಹಿರಿಯ ರಾಜಕೀಯ ಸಲಹೆಗಾರರೊಂದಿಗೆ ಸಭೆ ನಡೆಸಬೇಕಿತ್ತು. ಆದರೆ, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ಸಭೆಯನ್ನು ರದ್ದು ಮಾಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+