• search
 • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್ಚಿದ ಸೋಂಕು: ಬ್ರಿಟನ್‌ನಲ್ಲಿ ಮತ್ತೆ ಕಠಿಣ ಲಾಕ್‌ಡೌನ್ ಜಾರಿ

|

ಲಂಡನ್, ಜನವರಿ 5: ಕೊರೊನಾ ವೈರಸ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮತ್ತೊಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ. ಇದು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. 'ಈ ವಾರ ಅತ್ಯಂತ ಕಠಿಣದ ದಿನಗಳಾಗಿರಲಿವೆ. ಆದರೆ ನಮ್ಮ ಹೆಣಗಾಟದ ಕೊನೆಯ ಹಂತಕ್ಕೆ ನಾವು ಕಾಲಿರಿಸುತ್ತಿದ್ದೇವೆ ಎಂದು ನಿಜಕ್ಕೂ ನಂಬಿದ್ದೇನೆ' ಎಂದು ಅವರು ಹೇಳಿದ್ದಾರೆ.

   ಬ್ರಿಟನ್ ಪ್ರಧಾನಿ ಭಾರತಕ್ಕೆ ಬರ್ತಿರೋದಾದ್ರು ಯಾಕೆ ?? | Oneinda Kannada

   'ವೈರಸ್ ಕುರಿತಾದ ನಮ್ಮ ತಿಳಿವಳಿಕೆ ಬದಲಾಗದೆ ಇದ್ದರೆ, ಮರಣ ಪ್ರಮಾಣ ಇಳಿದರೆ ಮತ್ತು ಲಸಿಕೆಗಳು ಪರಿಣಾಮಕಾರಿಯಾದರೆ, 2021ರ ಫೆಬ್ರವರಿ ನಂತರವಷ್ಟೇ ಶಾಲೆಗಳನ್ನು ತೆರೆಯಲಾಗುವುದು' ಎಂದು ತಿಳಿಸಿದ್ದಾರೆ.

   'ಇಂದು ಯುನೈಟೆಡ್ ಕಿಂಗ್‌ಡಮ್‌ನ ಮುಖ್ಯ ಆರೋಗ್ಯ ಅಧಿಕಾರಿಗಳು ದೇಶವು ಎಚ್ಚರಿಕೆ ಮಟ್ಟ 5ಕ್ಕೆ ಸಾಗಬೇಕೆಂದು ಸಲಹೆ ನೀಡಿದ್ದಾರೆ. ಅದರ ಅರ್ಥ ಈಗ ಕ್ರಮ ತೆಗೆದುಕೊಳ್ಳದೆ ಹೋದರೆ ರಾಷ್ಟ್ರೀಯ ಆರೋಗ್ಯ ಸೇವೆ ಸಾಮರ್ಥ್ಯ 21 ದಿನಗಳ ಒಳಗೆ ಕ್ಷೀಣಿಸಲಿದೆ' ಎಂದು ಜಾನ್ಸನ್ ಹೇಳಿದ್ದಾರೆ.

   ಬ್ರಿಟನ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕನಿಷ್ಠ ಫೆಬ್ರವರಿ ಮಧ್ಯ ಅವಧಿಯವರೆಗೆ ಜಾರಿಯಲ್ಲಿರಲಿದೆ. ಬ್ರಿಟನ್ ಮಾರ್ಗಸೂಚಿಗಳ ಪ್ರಕಾರ ಎಲ್ಲ ತೀರಾ ಅಗತ್ಯವಲ್ಲದ ಅಂಗಡಿಗಳು, ವೈಯಕ್ತಿಕ ಕಾಳಜಿ ಸೇವೆಗಳು ಮುಚ್ಚಿರಲಿವೆ. ರೆಸ್ಟೋರೆಂಟ್‌ಗಳಲ್ಲಿ ಟೇಕ್ ಅವೇ ಸೇವೆ ಮಾತ್ರ ಲಭ್ಯವಿರಲಿದೆ.

   ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಕಾಲೇಜುಗಳು ಕೂಡ ತೆರೆಯುವುದಿಲ್ಲ. ಫೆಬ್ರವರಿ ಮಧ್ಯ ಭಾಗದವರೆಗೂ ಕ್ಯಾಂಪಸ್‌ಗೆ ಬರುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.

   ಬೋರಿಸ್ ಜಾನ್ಸನ್ ಅವರ ಘೋಷಣೆಗೂ ಮುನ್ನ ಇಂಗ್ಲೆಂಡ್‌, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನ ನಾಲ್ವರು ಮುಖ್ಯ ಆರೋಗ್ಯ ಅಧಿಕಾರಿಗಳು, ಶೀಘ್ರ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದರೆ 21 ದಿನಗಳ ಒಳಗೆ ಆರೋಗ್ಯ ಸೇವೆಗಳು ತೀರಾ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಹೇಳಿದ್ದರು.

   ಸ್ಕಾಟ್ಲೆಂಡ್‌ನ ನಿಕೋಲಾ ಸ್ಟುರ್ಜಿಯಾನ್ ಮತ್ತು ವೇಲ್ಸ್‌ನ ಮಾರ್ಕ್ ಡ್ರೇಕ್ ಫೋರ್ಡ್ ಕೂಡ ಜನವರಿ ಅಂತ್ಯವರೆಗೂ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ.

   English summary
   British PM Boris Johnson on Monday declared another nationwide lockdown amid rising of novel coronavirus mutants.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X