ಬ್ರೆಕ್ಸಿಟ್ ಜಾರಿಗೆ ಏಳು ದಿನಕ್ಕೆ ಮುನ್ನ ಯುರೋಪಿಯನ್ ಒಕ್ಕೂಟ-ಬ್ರಿಟನ್ ನಡುವೆ ಒಪ್ಪಂದ
ಲಂಡನ್, ಡಿಸೆಂಬರ್ 24: ಜಗತ್ತಿನ ಅತಿ ದೊಡ್ಡ ವ್ಯಾಪಾರಿ ಬ್ಲಾಕ್‌ಗಳಲ್ಲಿ ಒಂದಾದ ಐರೋಪ್ಯ ಒಕ್ಕೂಟದಿಂದ ಹೊರಬರಲು ಕೇವಲ ಏಳು ದಿನಗಳು ಇರುವ ಮುನ್ನ ಯುರೋಪಿಯನ್ ಒಕ್ಕೂಟದೊಂದಿಗೆ ಯುನೈಟೆಡ್ ಕಿಂಗ್‌ಡಮ್ ಬ್ರೆಕ್ಸಿಟ್ ಪೂರ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಹಲವು ತಿಂಗಳ ಚೌಕಾಸಿ ಮಾತುಕತೆಯ ಬಳಿಕ ಈ ಸಹಿ ಹಾಕಲಾಗಿದೆ.
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ 'ಬ್ರೆಕ್ಸಿಟ್' ಪ್ರಕ್ರಿಯೆ ಶುರುವಾದ ಬಳಿಕ ಬ್ರಿಟನ್ ಮತ್ತು ಒಕ್ಕೂಟದ ನಡುವೆ ಯಾವುದೇ ವ್ಯಾಪಾರ ಒಪ್ಪಂದಗಳು ನಡೆಯುವ ಬಗ್ಗೆ ಅನುಮಾನಗಳು ಮೂಡಿದ್ದವು. ಇದರಿಂದ ತೀವ್ರ ಆರ್ಥಿಕ ಅರಾಜಕತೆ ಮತ್ತು ಸರಕು ಹಾಗೂ ಔಷಧಗಳ ಪೂರೈಕೆಯಲ್ಲಿನ ವ್ಯತ್ಯಯದ ಭೀತಿ ಉಂಟಾಗಿತ್ತು.
'ಡೀಲ್ ಈಸ್ ಡನ್' (ಒಪ್ಪಂದ ಮುಗಿದಿದೆ) ಎಂಬ ಸಂಗತಿಯನ್ನು ಬ್ರಿಟನ್ ಸರ್ಕಾರ ಸಂತಸದಿಂದ ಹಂಚಿಕೊಂಡಿದೆ. 'ನಮ್ಮ ಹಣ, ಗಡಿಗಳು, ಕಾನೂನುಗಳು, ವ್ಯಾಪಾರ ಮತ್ತು ನಮ್ಮ ಮೀನುಗಾರಿಕೆ ನೀರಿನ ಭಾಗಗಳಲ್ಲಿನ ನಿಯಂತ್ರಣವನ್ನು ಮರಳಿ ಪಡೆದಿದ್ದೇವೆ' ಎಂದು ತಿಳಿಸಿದೆ.

'ಈ ಒಪ್ಪಂದವು ಯುಕೆಯ ಪ್ರತಿ ಭಾಗದಲ್ಲಿನ ಕುಟುಂಬಗಳು ಮತ್ತು ಉದ್ಯಮಗಳಿಗೆ ಅದ್ಭುತ ಸುದ್ದಿ. ಶೂನ್ಯ ಟಾರಿಫ್ ಮತ್ತು ಶೂನ್ಯ ಕೋಟಾಗಳ ಆಧಾರದಲ್ಲಿ ಮುಕ್ತ ವ್ಯಾಪಾರ ಒಪ್ಪಂದವನ್ನು ನಾವು ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದೇವೆ' ಎಂದು ಬ್ರಿಟನ್ ತಿಳಿಸಿದೆ.
ಹಲವು ತಿಂಗಳಿನಿಂದ ಈ ಒಪ್ಪಂದದ ಮಾತುಕತೆಗಳು ಅಂತಿಮ ತೀರ್ಮಾನಕ್ಕೆ ಬರುವುದರಲ್ಲಿ ಹಿನ್ನಡೆ ಅನುಭವಿಸಿದ್ದವು. ಮುಖ್ಯವಾಗಿ ಮೀನುಗಾರಿಕೆ ವಿಭಾಗಕ್ಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ಇದರಿಂದ 4.5 ವರ್ಷಗಳ ತಿಣುಕಾಟ ಕೊನೆಗೂ ಅಂತ್ಯ ಕಂಡಂತಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications