• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

81 ವರ್ಷದ ತಂದೆ ಜೀವ ಉಳಿಸಲು ಕೊವಿಡ್ ಹೋರಾಟದಲ್ಲಿ ಗೆದ್ದ ಮಗ

|

ಲಂಡನ್, ಮೇ 3: ಡೆಡ್ಲಿ ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಇಡೀ ವೈದ್ಯಕೀಯ ಕ್ಷೇತ್ರ ಹರಸಾಹಸ ಪಡ್ತಿದೆ. 50 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಅಪಾಯವಾಗಿ ಪರಿಣಮಿಸಿದೆ. ಹಿರಿಯ ವ್ಯಕ್ತಿಗಳಿಗೆ ಸೋಂಕು ತಗುಲಿದರೆ ಅವರನ್ನು ರಕ್ಷಿಸುವುದು ಬಹಳ ಸವಾಲಾಗಿದೆ.

ಇಂತಹ ಸವಾಲಿನ ಸಂದರ್ಭದಲ್ಲಿ ತನ್ನ 81 ವರ್ಷದ ತಂದೆಯನ್ನು ಮನೆಯಲ್ಲೇ ಇಟ್ಟುಕೊಂಡು ಕೊರೊನಾ ಸೋಂಕಿನಿಂದ ಪಾರು ಮಾಡಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 81 ವರ್ಷದ ಸೂರಿಗೆ ಕೊವಿಡ್ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದರು.

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

ಶ್ವಾಸ ಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸೂರಿ ಅವರ ಬದುಕುಳಿಯುವುದು ಕಷ್ಟಸಾಧ್ಯ, ಶೇಕಡಾ 95 ರಷ್ಟು ಚಿಕಿತ್ಸೆ ಫಲಕಾರಿಯಾಗುವುದು ಅನುಮಾನ ಎಂದು ಹೇಳಿ 'ಮನೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದರು. ಆದರೂ ಭರವಸೆ ಕಳೆದುಕೊಳ್ಳ ಮಗ, ಅಚ್ಚರಿ ಎಂಬಂತೆ ತಂದೆಯನ್ನು ಕಾಪಾಡಿಕೊಂಡಿದ್ದಾರೆ. ಮುಂದೆ ಓದಿ....

ಎಲ್ಲ ಪ್ರಯತ್ನಗಳು ಕೈಕೊಟ್ಟಿತ್ತು

ಎಲ್ಲ ಪ್ರಯತ್ನಗಳು ಕೈಕೊಟ್ಟಿತ್ತು

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸೂರಿಗೆ ಹೃದಯಾಸಂಬಂಧಿ ಕಾಯಿಲೆಯೂ ಕಾಡಿತ್ತು. ಇದರ ಜೊತೆಗೆ ಕೊರೊನಾ ಲಕ್ಷಣಗಳು ಆವರಿಸಿಕೊಂಡಿತ್ತು. ಕೊರೊನಾ ಶಂಕೆ ವ್ಯಕ್ತಪಡಿಸಿದ್ದರು. ಬಹು ಅಂಗಾಂಗ ಸಮಸ್ಯೆ ಮತ್ತು 81 ವರ್ಷ ವಯಸ್ಸು ವೆಂಟಿಲೇಟರ್ ಚಿಕಿತ್ಸೆ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿತ್ತು. ವಾಟ್ಫೋರ್ಡ್ ಜನರಲ್ ಆಸ್ಪತ್ರೆ ವೈದ್ಯರು ಸೂರಿ ಬದುಕಿಸುವ ಪ್ರಯತ್ನ ಕೈಬಿಟ್ಟರು. ಮಗನನ್ನು ಕರೆದು 'ನೀವು ಮನೆಗೆ ಕರೆದುಕೊಂಡು ಹೋಗಬಹುದು' ಎಂದು ಹೇಳಿಬಿಟ್ಟರು.

ಮನೆಯಲ್ಲಿ ಚಿಕಿತ್ಸೆ ಆರಂಭಿಸಿದ ಮಗ

ಮನೆಯಲ್ಲಿ ಚಿಕಿತ್ಸೆ ಆರಂಭಿಸಿದ ಮಗ

ವಾಟ್ಫೋರ್ಡ್ ಜನರಲ್ ಆಸ್ಪತ್ರೆ ತಂದೆಯನ್ನು ಮನೆಗೆ ಕರೆದುಕೊಂಡು ಬಂದ ಮಗ ರಾಜ್ ನಾಥ್ವಾನಿ ಹೇಗಾದರೂ ಮಾಡಿ ಉಳಿಸಬೇಕು ಎಂದು ನಿರ್ಧರಿಸಿದನು. ''ಮತ್ತೆ ಆಸ್ಪತ್ರೆಗೆ ಹೋಗುವುದು ಬೇಡೆ. ಸಾಯುವುದಾದರೆ ನಾನು ಇಲ್ಲೇ ಸಾಯುತ್ತೇನೆ'' ಎಂದು ತಂದೆ ಮಗನ ಬಳಿಕ ಕೋರಿಕೆ ಇಟ್ಟರು. ಬಳಿಕ ಮನೆಯಲ್ಲೇ ಚಿಕಿತ್ಸೆ ಆರಂಭಿಸಿದನು. ಮೊದಲು ಇಡೀ ಮನೆಯನ್ನು ಸ್ವಚ್ಛಗೊಳಿಸಿದನು. 80 ವರ್ಷ ತಾಯಿಯನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಿ ಕ್ವಾರೆಂಟೈನ್ ಮಾಡಿದನು. ತಂದೆಯನ್ನು ಒಂದು ಕೋಣೆಯಲ್ಲಿಟ್ಟನು.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?

ಗೂಗಲ್ ಸ್ಪ್ರೆಡ್‌ಶೀಟ್ ಬಳಕೆ

ಗೂಗಲ್ ಸ್ಪ್ರೆಡ್‌ಶೀಟ್ ಬಳಕೆ

ಮನೆಗೆ ನರ್ಸ್‌ಗಳು ಹಾಗೂ ವೈದ್ಯರು ಬರುವ ಸಾಧ್ಯತೆ ಕಡಿಮೆ ಇದ್ದ ಕಾರಣ, ತಮ್ಮ ತಂದೆಯ ರಕ್ತದೊತ್ತಡ, ಆಕ್ಸಿಜನ್ ಮಟ್ಟ ಮತ್ತು ತಾಪಮಾನ ಮೇಲ್ವಿಚಾರಣೆ ತಿಳಿಯಲು ಗೂಗಲ್ ಸ್ಪ್ರೆಡ್‌ಶೀಟ್ ಮೊರೆ ಹೋದನು. ತಂದೆಯ ಜೊತೆ ಸಂಪರ್ಕ ನಿಯಂತ್ರಿಸಲು ಐಪ್ಯಾಡ್‌ ಮೂಲಕ ಬೇಬಿ ಮಾನಿಟರಿಂಗ್ ಅಪ್ಲಿಕೇಶನ್‌ ಅಳವಡಿಸಿದನು. ತಂದೆಯ ಜೊತೆ ಕುಟುಂಬದವರು ಮಾತನಾಡಲು ಈ ಅಪ್ಲಿಕೇಶನ್‌ ಸಹಾಯ ಮಾಡಿತು. ಕುಟುಂಬ ವೈದ್ಯರ ಸಹಾಯದಿಂದ ತಂದೆಯ ಆರೋಗ್ಯದ ಮೇಲೆ ನಿಗಾವಹಿಸಿದನು. ಆದರೆ, ತಂದೆಯ ಸ್ಥಿತಿ ಮತ್ತಷ್ಟು ಗಂಭೀರವಾಯಿತು.

ಕೊರೊನಾ ಖಚಿತ ಪಡಿಸಿದ ವೈದ್ಯರು

ಕೊರೊನಾ ಖಚಿತ ಪಡಿಸಿದ ವೈದ್ಯರು

ಈ ಮೊದಲು ಸೂರಿಗೆ ಕೊರೊನಾ ಲಕ್ಷಣಗಳು ಇವೆ ಎಂದಷ್ಟೆ ಹೇಳಿದ್ದ ವೈದ್ಯರು ನಂತರ ಕೊವಿಡ್ ಸೋಂಕು ದೃಢಪಟ್ಟಿರುವುದನ್ನು ಹೇಳಿದರು. ಆದರೆ, ಪಿಪಿಇ ಕಿಟ್ ಕೊರತೆಯಿಂದ ಅವರು ಸೂರಿಗೆ ಮನೆಗೆ ಹೋಗಲು ಮುಂದಾಗಲಿಲ್ಲ. ಅದಾಗಲೇ ಲಂಡನ್‌ನಲ್ಲಿ ಪಿಪಿಇ ಕಿಟ್‌ಗಳ ಕೊರತೆ ಎದುರಾಗಿತ್ತು. ಈ ಮಧ್ಯ ಸೂರಿಯ ಗೂಗಲ್ ಸ್ಪ್ರೆಡ್‌ಶೀಟ್ ವರದಿ ನೋಡಿ ಕೆಲವು ಸಲಹೆಗಳನ್ನು ವೈದ್ಯರು ನೀಡಿದರು. ಮುಂಭಾಗವಾಗಿ ಮಲುಗುವುದರಿಂದ ಉಸಿರಾಟ ಸ್ವಲ್ಪ ನೆರವಾಗುವುದು ಎಂದು ಸೂಚಿಸಿದರು.

ಅಚ್ಚರಿ ಎಂಬಂತೆ ಚೇತರಿಕೆ

ಅಚ್ಚರಿ ಎಂಬಂತೆ ಚೇತರಿಕೆ

ಇಡೀ ಮನೆಯನ್ನು ಸ್ವಚ್ಛಗೊಳಿಸಿದ್ದರು. ಕೋಣೆಯಲ್ಲಿ ಕ್ವಾರೆಂಟೈನ್‌ ಮಾಡಿದರು. ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲಿಸಿದರು. ಗೂಗಲ್ ಸ್ಪ್ರೆಡ್‌ಶೀಟ್ ಪರಿಣಾಮಕಾರಿ ಬಳಸಿದರು. ತಂದೆ ಜೊತೆ ಯಾವು ಕ್ವಾರೆಂಟೈನ್ ಆಗಿ ಸೋಂಕು ಬೇರೆಯವರಿಗೆ ಹರಡದಂತೆ ನೋಡಿಕೊಂಡರು. ಅದರ ಪರಿಣಾಮ 81 ವರ್ಷದ ಸೂರಿಯಲ್ಲಿ ಚೇತರಿಕೆ ಕಂಡುಬಂತು. ತಿನ್ನಲು ಪಿಜ್ಜಾ, ಚಿಪ್ಸ್ ಕೇಳಿದರು. ಕ್ರಮೇಣ ಎದ್ದು ನಿಂತು ನಡೆದಾಡಲು ಅರಂಭಿಸಿದರು. ಸೂರಿ ಅವರ ಚೇತರಿಕೆಗೆ ನಿಜವಾದ ಕಾರಣ ಹೇಳದ ವೈದ್ಯರು, ರಾಜ್ ನಾಥ್ವಾನಿ ಅನುಸರಿದ ಕ್ರಮಗಳು ಇದಕ್ಕೆ ಸಹಾಯ ಮಾಡಿದೆ ಎಂದು ತಿಳಿಸಿದರು.

English summary
Coronavirus united kingdom: This man came home from the hospital to die. His son found a way to keep him alive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X