ಎಂ.ಬಿ.ಪಾಟೀಲ, ಸಿದ್ದರಾಮಯ್ಯ ತಲೆ ತಿರುಕರು: ಯಡಿಯೂರಪ್ಪ ವಾಗ್ದಾಳಿ
ಕೊಪ್ಪಳ, ಡಿಸೆಂಬರ್ 16: "ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆ ತಿರುಕರು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿವರ್ತನಾ ಯಾತ್ರೆಯಲ್ಲಿ ಶನಿವಾರ ಕೆಂಡ ಕಾರಿದ್ದಾರೆ.
ಮಹಾದಾಯಿ ವಿಚಾರವಾಗಿ ಮಾತನಾಡಿದ ಅವರು, ನೀನೇನು ನಾಲ್ಕೂವರೆ ವರ್ಷದಿಂದ ಕತ್ತೆ ಕಾಯ್ತಿದ್ದಿಯಾ ಎಂದು ಏಕವಚನದಲ್ಲೇ ಸಚಿವ ಎಂ.ಬಿ.ಪಾಟೀಲರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಯೋಜನೆ ಬಗ್ಗೆ ಇವರಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮಹಾದಾಯಿ ಯೋಜನೆ ಕಾಂಗ್ರೆಸ್ ನ ಪಾಪದ ಕೂಸು ಎಂದು ಆರೋಪಿಸಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕೃಷ್ಣಾ ಬಿ ಸ್ಕೀಂ ಯೋಜನೆಗಾಗಿ ಪ್ರಧಾನಿ ಮೋದಿಯವರ ಕಾಲನ್ನು ಹಿಡಿದಾದರೂ ಒಂದು ಲಕ್ಷ ಕೋಟಿ ರುಪಾಯಿ ಹಣ ತರುತ್ತೇನೆ ಎಂದಿದ್ದಾರೆ.

ಅದು ಸಾಧ್ಯವಾಗಲಿಲ್ಲ ಅಂದರೆ ನಿಮಗೆ ಮುಖ ತೋರಿಸಿಲ್ಲ ಎಂದು ಶಪಥ ಮಾಡಿದ್ದಾರೆ ಯಡಿಯೂರಪ್ಪ.
ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ. ನನ್ನ ವಿರುದ್ಧ ಎಫ್ ಐಆರ್ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಹಿತ ತೋರಿಸಲಿ. ಲಂಚ ಪಡೆದಿದ್ದೇನೆ ಎಂಬ ಆರೋಪ ಮಾಡಿಕೊಂಡು ತಿರುಗಾಡೋದು ಅಲ್ಲ. ಕೋರ್ಟ್ ನಿಂದಲೇ ಆ ಪ್ರಕರಣ ಖುಲಾಸೆಯಾಗಿದೆ ಎಂದು ಮುಖ್ಯಮಂತ್ರಿ ವಿರುದ್ಧವೂ ಶನಿವಾರ ಯಡಿಯೂರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications