ರೇಣುಕಾಚಾರ್ಯ ದೊಡ್ಡವರು, ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಮಗಿಲ್ಲ: ಸವದಿ
ಕೊಪ್ಪಳ, ನವೆಂಬರ್ 1: ರೇಣುಕಾಚಾರ್ಯ ವಿರುದ್ಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ವ್ಯಂಗ್ಯ ಮುಂದುವರೆದಿದೆ.
ರೇಣುಕಾಚಾರ್ಯ ನಮ್ಮ ಗುರುಗಳು, ದೊಡ್ಡವರೂ ಕೂಡ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಮಗೆ ಇಲ್ಲ ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗಷ್ಟೇ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡಿ, 25 ಸಾವಿರ ಮತಗಳ ಅಂತರದಿಂದ ಸೋತವರು ಉಪಮುಖ್ಯಮಂತ್ರಿಯಾಗಿದ್ದಾರೆ , ಅನರ್ಹ ಶಾಸಕರಿಂದಲೇ ಅಧಿಕಾರ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದರು.

ಆದರೆ ನಾನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ, ಅವರು ದೊಡ್ಡವರು ನನ್ನ ಗುರುಗಳು ಇದ್ದಾರೆ, ರೇಣುಕಾಚಾರ್ಯ ಅವರು ನನಗೆ ಏನೇ ಹೇಳಿದರೂ ಅದು ಆಶೀರ್ವಾದವಿದ್ದಂತೆ ಯಾವುದೇ ಕಾರಣಕ್ಕೂ ಅದನ್ನು ಬೈಗುಳ ಎಂದು ಸ್ವೀಕರಿಸುವುದಿಲ್ಲ, ಅವರ ಬಗ್ಗೆ ಕೆಟ್ಟದಾಗಿಯೂ ಮಾತನಾಡುವುದಿಲ್ಲ ಎಂದು ಹೇಳಿದರು.
ಎರಡು ದಿನಗಳ ಹಿಂದೆ, ಲಕ್ಷ್ಮಣ ಸವದಿ ಇನ್ನೊಮ್ಮೆ ಚುನಾವಣೆಯಲ್ಲಿ ಸೋತರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದರು.












Click it and Unblock the Notifications