• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಪ್ಪಳ ಚುನಾವಣಾ ಕಣ : ಸಂಗಣ್ಣ ಕರಡಿಗೆ ಸಿಗುವುದೇ ಗೆಲವು?

|

ಕೊಪ್ಪಳ, ಏಪ್ರಿಲ್ 11 : ಕೊಪ್ಫಳ ಕ್ಷೇತ್ರದ ಚುನಾವಣೆ ಎಂದರೆ ಸಂಗಣ್ಣ ಕರಡಿ ಹಾಗೂ ಕೆ.ಬಸವರಾಜ ಹಿಟ್ನಾಳ ಅವರ ಕುಟುಂಬದ ನಡುವಿನ ಸ್ಪರ್ಧೆ ಎಂಬಂತಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಎರಡೂ ಕುಟುಂಬದವರು ಎದುರಾಳಿಗಳು.

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣಕರಡಿ, ಕಾಂಗ್ರೆಸ್‌-ಜೆಡಿಎಸ್‌ನಿಂದ ಕೆ.ಬಸವರಾಜ ಹಿಟ್ನಾಳ್ ಪುತ್ರ ರಾಜಶೇಖರ ಹಿಟ್ನಾಳ್ ಅಭ್ಯರ್ಥಿಗಳು.

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಪುಟ

ಹಾಲಿ ಸಂಸದರಿದ್ದರೂ ಕೊಪ್ಪಳ ಕ್ಷೇತ್ರಕ್ಕೆ ಬಿಜೆಪಿ ತಡವಾಗಿ ಅಭ್ಯರ್ಥಿ ಘೋಷಣೆ ಮಾಡಿತು. ರಾಜಶೇಖರ್ ಹಿಟ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಕೊಪ್ಪಳಕ್ಕೆ ಬಿಜೆಪಿ ಚುನಾವಣಾ ಉಸ್ತುವಾರಿ ಬಿ.ಶ್ರೀರಾಮುಲು. ಆದ್ದರಿಂದ, ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಮತ್ತೆ ಎದುರಾಳಿಗಳು ಎನ್ನುತ್ತಿದ್ದಾರೆ ಜನರು.

ಕೊಪ್ಪಳ ಕ್ಷೇತ್ರ ಪರಿಚಯ: ಭತ್ತದ ಕಣಜದಲ್ಲಿ ಗೆಲುವು ಯಾರಿಗೆ?

ಕೊಪ್ಪಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದೆ. ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಆದ್ದರಿಂದ, ಕಾಂಗ್ರೆಸ್ ಬಲ ಮತ್ತಷ್ಟು ಹೆಚ್ಚಿದೆ. ಅಭ್ಯರ್ಥಿಗಳು ಈಗಾಗಲೇ ಬಿರುಸಿನಿಂದ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ....

ಸತತ ಐದು ಚುನಾವಣೆಯಲ್ಲಿ ಮುಖಾಮುಖಿ

ಸತತ ಐದು ಚುನಾವಣೆಯಲ್ಲಿ ಮುಖಾಮುಖಿ

ಸಂಗಣ್ಣ ಕರಡಿ ಮತ್ತು ಕೆ.ಬಸವರಾಜ ಹಿಟ್ನಾಳ್ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಚುನಾವಣೆ ಎದುರಿಸಿದ್ದಾರೆ. ಬಸವರಾಜ ಹಿಟ್ನಾಳ್ ಅವರು ಒಂದು ಬಾರಿ ಮಾತ್ರ ಗೆದ್ದಿದ್ದಾರೆ. ನಾಲ್ಕು ಬಾರಿ ಸಂಗಣ್ಣ ಕರಡಿ ಗೆದ್ದಿದ್ದಾರೆ.

ಸೇಡು ತೀರಿಸಿಕೊಂಡ ಪುತ್ರ

ಸೇಡು ತೀರಿಸಿಕೊಂಡ ಪುತ್ರ

ಕೆ.ಬಸವರಾಜ ಹಿಟ್ನಾಳ್ ಪುತ್ರ ರಾಘವೇಂದ್ರ ಹಿಟ್ನಾಳ್ ಅವರು ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದು ಸಂಗಣ್ಣ ಕರಡಿ ಅವರನ್ನು ಸೋಲಿಸಿದರು. 2018ರ ಚುನಾವಣೆಯಲ್ಲಿ ಸಂಗಣ್ಣ ಕರಡಿ ಪುತ್ರ ಅಮರೇಶ್ ಸಂಗಣ್ಣ ಕರಡಿ ಅವರಿಗೆ ಸೋಲಿನ ರುಚಿ ತೋರಿಸಿದರು.

ಸಂಸತ್‌ಗೆ ಹೋದ ಸಂಗಣ್ಣ ಕರಡಿ

ಸಂಸತ್‌ಗೆ ಹೋದ ಸಂಗಣ್ಣ ಕರಡಿ

ಸಂಗಣ್ಣ ಕರಡಿ ಅವರು 2013ರಲ್ಲಿ ಸೋತ ಬಳಿಕ 2014ರ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿ ಜಯಗಳಿಸಿದರು. ಈ ಬಾರಿಯೂ ಅವರೇ ಅಭ್ಯರ್ಥಿಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದ ರಾಜಶೇಖರ್ ಹಿಟ್ನಾಳ್ ಅವರು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಅಭ್ಯರ್ಥಿ.

ಕ್ಷೇತ್ರವಾರು ಬಲಾಬಲ

ಕ್ಷೇತ್ರವಾರು ಬಲಾಬಲ

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೊಪ್ಪಳ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಸಿಂಧನೂರ, ಶಿರಗುಪ್ಪ, ಮುಸ್ಕಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

* ಕನಕಗಿರಿ, ಗಂಗಾವತಿ, ಶಿರಗುಪ್ಪ, ಯಲಬುರ್ಗಾದಲ್ಲಿ ಬಿಜೆಪಿ ಶಾಸಕರು ಇದ್ದಾರೆ

* ಕೊಪ್ಪಳ, ಕುಷ್ಟಗಿ, ಮುಸ್ಕಿಯಲ್ಲಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

* ಸಿಂಧನೂರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.

2014ರ ಚುನಾವಣೆ ಫಲಿತಾಂಶ

2014ರ ಚುನಾವಣೆ ಫಲಿತಾಂಶ

2014ರ ಚುನಾವಣೆಯಲ್ಲಿ ಕರಡಿ ಸಂಗಣ್ಣ ಅವರು 4,86,383 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಸವರಾಜ ಹಿಟ್ನಾಳ್ ಅವರು 4,53,969 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

English summary
Koppal lok sabha seat political picture. Sitting MP Sanganna Karadi BJP candidate and Rajashekar Hitnal Congress-JD(S) candidate. Election will be held on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X