ಕೊಪ್ಪಳ ಪೌರಕಾರ್ಮಿಕರಿಗೆ 30x40 ಸೈಟ್ ಭಾಗ್ಯ ನೀಡಿದ ಸಿಎಂ!
ಕೊಪ್ಪಳ, ಡಿಸೆಂಬರ್ 14: ಕೊಪ್ಪಳದ ಪೌರಕಾರ್ಮಿಕರಿಗೆ 30x40 ಅಳತೆಯ ನಿವೇಶನವನ್ನು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಹೊಸ ಯೋಜನೆಗೆ ನಾಂದಿ ಹಾಡಿದರು.
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಆರಂಭಿಸಿರುವ ನವಕರ್ನಾಟಕ ನಿರ್ಮಾಣ ಯಾತ್ರೆಯ ಭಾಗವಾಗಿ ಇಂದು(ಡಿ. 14)ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿದ್ದಾರೆ. ಕರ್ನಾಟಕದ ಭತ್ತದ ಕಣಜ(rice bowl) ಎಂದೇ ಕರೆಯಲಾಗುವ ಕೊಪ್ಪಳದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿರುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಕೊಪ್ಪಳ ಪ್ರವಾಸದ ಮುಖ್ಯಾಂಶಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅವರ ಟ್ವಿಟ್ಟರ್ ನಲ್ಲೇನಿದೆ, ನೀವೇ ನೋಡಿ.
| Array |
ಸೈಟ್ ಭಾಗ್ಯ
ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಕೊಪ್ಪಳದಲ್ಲಿ ಪೌರಕಾರ್ಮಿಕರಿಗೆ 30x40 ಅಳತೆಯ ನಿವೇಶನ ನೀಡುವ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಶಿಕ್ಷಣ ಕ್ಷೇತ್ರದಲ್ಲೂ ಮುಂದೆ
ಕೊಪ್ಪಳ ಜಿಲ್ಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಹೆಚ್ಚು ಶ್ರಮ ವಹಿಸಲಾಗಿದೆ. ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದು ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರವನ್ನೂ ಆರಂಭಿಸಲಾಗಿದೆ ಎಂದು ಟ್ವೀಟ್ ಮಾಡಿರುವ ಅವರು, ಕೊಪ್ಪಳದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಏನೆಲ್ಲ ಮಾಡುತ್ತಿದೆ ಎಂಬುದನ್ನೂ ಬರೆದಿದ್ದಾರೆ.
|
ಆಮೂಲಾಗ್ರ ಬೆಳವಣಿಗೆ
ಕಾಲೇಜುಗಳ ನಿರ್ಮಾಣಕಾರ್ಯ ದಿಂದ ಹಿಡಿದು ಸ್ನಾತಕೋತ್ತರ ಪದವಿ ಕೇಂದ್ರಗಳ ಸ್ಥಾಪನೆಯವರೆಗೆ ಕೊಪ್ಪಳ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬೆಳವಣಿಗೆ ಸಾಧಿಸಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
|
ಕರ್ನಾಟಕದ ಅಕ್ಕಿಯ ಬಟ್ಟಲು
ಕರ್ನಾಟಕದ ಭತ್ತದ ಕಣಜವಾದ ಕೊಪ್ಪಳ ಇನ್ನು ಕೆಲವೇ ದಿನಗಳಲ್ಲಿ ಏಷ್ಯಾದ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್ ಅನ್ನು ಹೊಂದಲಿದೆ. ಕೃಷಿಗೆ ಉತ್ತೇಜನ ನೀಡುವ ಉದ್ದೇಶ ಮತ್ತು ಲಾಭದಾಯಕ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶ ನಮ್ಮದು ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.












Click it and Unblock the Notifications