ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ ನಗರಕ್ಕೆ ಇನ್ನು ಕುಡಿಯುವ ನೀರಿನ ಸಮಸ್ಯೆ ಇಲ್ಲ

By Gururaj
|
Google Oneindia Kannada News

ಕೊಪ್ಪಳ, ಆಗಸ್ಟ್ 02 : ಕೊಪ್ಪಳ ನಗರಕ್ಕೆ ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ತುಂಗಭದ್ರಾ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ 24*7 ಯೋಜನೆಯಡಿ ನೀರು ಪೂರೈಕೆ ಮಾಡುವ ಕಾರ್ಯ ಆರಂಭಗೊಂಡಿದೆ.

'ಈ ಯೋಜನೆಯಡಿ ಹುಲಿಕೆರೆಯನ್ನು ಭರ್ತಿ ಮಾಡಿ, ನೀರು ಸಂಗ್ರಹಿಸುತ್ತಿರುವುದರಿಂದ ಕೊಪ್ಪಳ ನಗರಕ್ಕೆ ಇನ್ನು ಮುಂದೆ ಬೇಸಿಗೆಯಲ್ಲೂ ನೀರಿನ ತೊಂದರೆ ಎದುರಾಗುವುದಿಲ್ಲ' ಎಂದು ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?

ಕೊಪ್ಪಳ ನಗರಕ್ಕೆ ತಾಲೂಕಿನ ಕಾಸನಕಂಡಿ ಬಳಿ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ 24*7 ನೀರು ಪೂರೈಸುವ 54. 07 ಕೋಟಿ ರೂ. ವೆಚ್ಚದ ಯೋಜನೆಗೆ ಈ ಹಿಂದೆ ಅನುಮೋದನೆ ಪಡೆದು, ಕಾಮಗಾರಿ ಪ್ರಾರಂಭಿಸಲಾಗಿತ್ತು. 2041ಕ್ಕೆ ನಗರದ ಜನಸಂಖ್ಯೆ 1.65 ಲಕ್ಷ ಆಗಬಹುದೆಂಬ ಅಂದಾಜಿನಂತೆ 135 ಎಲ್‍ಪಿಸಿಡಿ ನೀರು ಪೂರೈಸುವ ಯೋಜನೆಗೆ ಕಾಮಗಾರಿ ಆರಂಭವಾಯಿತು.

No drinking water crisis for Koppal in summer

ಕಳೆದ ಏಪ್ರಿಲ್ 23 ರಂದು ಪ್ರಾಯೋಗಿಕವಾಗಿ ನೀರು ಪೂರೈಕೆ ಚಾಲನೆ ನೀಡಲಾಯಿತು. ಇದೀಗ ಕೊಪ್ಪಳ ನಗರಕ್ಕೆ 24*7 ಕುಡಿಯುವ ನೀರು ಪೂರೈಕೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ಪೈಪ್‍ಲೈನ್ ಜಾಲ ವಿಸ್ತರಿಸುವ ಕಾರ್ಯಕ್ಕೂ ಶೀಘ್ರವೇ ಚಾಲನೆ ನೀಡಲಾಗುತ್ತದೆ.

ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ನಗರದ ಜನ ಕುಡಿಯುವ ನೀರಿಗೆ ತೊಂದರೆ ಅನುಭವಿಸುವ ಸ್ಥಿತಿ ಇತ್ತು. ಆದರೆ, ಇದೀಗ ತುಂಗಭದ್ರಾ ಜಲಾಶಯದಿಂದ ನಗರದ ಹುಲಿಕೆರೆಯನ್ನು ಭರ್ತಿ ಮಾಡಲಾಗುತ್ತಿರುವುದರಿಂದ, ಹೆಚ್ಚಿನ ನೀರು ಸಂಗ್ರಹವಾಗಲಿದೆ.

No drinking water crisis for Koppal in summer

ಯೋಜನೆ ವಿವರ : ಕೊಪ್ಪಳ ನಗರಕ್ಕೆ ತಾಲೂಕಿನ ಕಾಸನಕಂಡಿ ಬಳಿ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ 24*7 ನೀರು ಪೂರೈಸುವ 54. 07 ಕೋಟಿ ರೂ. ವೆಚ್ಚದ ಯೋಜನೆಗೆ 2011ರಲ್ಲಿ ಸರ್ಕಾರ ತಾಂತ್ರಿಕ ಅನುಮೋದನೆ ನೀಡಿತ್ತು.

ಇದಾದ ಬಳಿಕ ಕಾಮಗಾರಿಗೆ ವೇಗ ದೊರೆತಿದ್ದು, ತುಂಗಭದ್ರಾ ಜಲಾಶಯದಲ್ಲಿ 10 ಮೀ. ವ್ಯಾಸದ ಜಾಕ್‍ವೆಲ್ ಕಂ ಪಂಪ್‍ಹೌಸ್ ನಿರ್ಮಾಣ ಮಾಡಲಾಗಿದೆ. ಹೊಸ ಮಾದರಿಯ 600 ಹೆಚ್.ಪಿ. ಸಬ್‍ಮರ್ಸಿಬಲ್ ಡೀಪ್‍ವೆಲ್ ಪಂಪ್ ಅಳವಡಿಸಲಾಗಿದೆ. ಇದಕ್ಕಾಗಿ 33 ಕೆ.ವಿ. ಉಪವಿದ್ಯುತ್ ಕೇಂದ್ರ ನಿರ್ಮಿಸಲಾಗಿದ್ದು, ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ ಇದೆ.

English summary
Koppal city will get 24*7 water from Tungabhadra dam back water. City will not face drinking water crisis in summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X