ಶ್ರೀರಾಮನ ಹೆಸರಲ್ಲಿ ಕೊಲೆ, ದರೋಡೆ ನಡೆಸುತ್ತಿದ್ದಾರೆ : ಅನ್ಸಾರಿ
ಕೊಪ್ಪಳ, ಜನವರಿ 29 : ಮನೆಯಲ್ಲಿ ಶ್ರೀರಾಮಚಂದ್ರನ ಪೂಜೆ ಮಾಡುವವರು ಮನೆಯಿಂದ ಹೊರಬಂದು ಕೂಡಲೇ ಅದೇ ರಾಮನ ಹೆಸರಿನಲ್ಲಿ ಕೊಲೆ ಮತ್ತು ಲೂಟಿ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ಮುಸ್ಲಿಂ ವರ್ತಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ಸಾರಿ, ಶ್ರೀರಾಮನ ಹೆಸರಿನಲ್ಲಿ ಕೊಲೆ ಮಾಡುತ್ತಿದ್ದಾರೆ, ಮನೆಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ, ಹೊರಗಡೆ ಬಂದು ರಾಮನ ಹೆಸರಿನಲ್ಲಿ ಕೊಲೆ, ಲೂಟಿ, ದರೋಡೆ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜನರು ಶ್ರೀರಾಮನ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ, ನಮ್ಮ ಯುವಕರನ್ನು ಜೈಲಿಗೆ ಕಳುಹಿಸಬೇಕು ಎಂದು ಕುಮ್ಮಕ್ಕು ನೀಡುತ್ತಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ, ಕಾನೂನು ಇಲ್ಲ, ನಮಗೆ ಇರುವ ದೇಶಾಭಿಮಾನ ಅವರಿಗೆ ಇಲ್ಲ, ಪೊಲೀಸ್ ಇಲಾಖೆಯವರು ನಮ್ಮವರಲ್ಲ, ಅವರು ಪೊಲೀಸರಿಗೆ ಲೇ ಎಂದು ಮಾತನಾಡಿಸುತ್ತಾರೆ ನಾವು ಅವರಿಗೆ ರೀ ಎಂದು ಗೌರವಕೊಟ್ಟು ಮಾತನಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications