ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ಕೃಷಿ ಚುಟವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ

|
Google Oneindia Kannada News

ಕೊಪ್ಪಳ, ಏಪ್ರಿಲ್ 09 : "ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇತರ ದವಸ ಧಾನ್ಯಗಳ ಸಾಗಟ ಮತ್ತು ಅವುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ" ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.

Recommended Video

ಇಂತವರಗೆ ಏನು ಮಾಡಬೇಕು ನೀವೇ ಹೇಳಿ | No license | Seller | Oneindia kannada

ಗುರುವಾರ ಸಚಿವರು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೋವಿಡ್-19 ತಡೆಯಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

 ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಕಣ್ಣೀರಿಟ್ಟ ರೈತ ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಕಣ್ಣೀರಿಟ್ಟ ರೈತ

ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ಬೀಜ, ಗೊಬ್ಬರಗಳ ಸರಬರಾಜು ಹಾಗೂ ಇತರೆ ಕೃಷಿ ಚಟುವಟಿಕೆಗಳ ಸಭೆಯಲ್ಲಿ ಚರ್ಚೆ ನಡೆಯಿತು. "ಲಾಕ್ ಡೌನ್ ಜಾರಿಯಲ್ಲಿದ್ದರೂ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ" ಎಂದರು.

ಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲುಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲು

"ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೇಲಿನ ನಿರ್ಬಂಧವನ್ನು ತೆಗೆಯಲಾಗಿದೆ, ರೈತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಾವು ಬೆಳೆದ ಫಸಲುಗಳನ್ನು ಮಾರಾಟ ಮಾಡಬಹುದಾಗಿದೆ" ಎಂದು ಸಚಿವರು ಸ್ಪಷ್ಟಪಡಿಸಿದರು.

 ಮೆಣಸಿನ ಕಾಯಿಗೆ ಸಿಗದ ಬೆಲೆ; ಫ್ರೀಯಾಗಿ ಹಂಚಿದ ಕೊಡಗಿನ ರೈತ ಮೆಣಸಿನ ಕಾಯಿಗೆ ಸಿಗದ ಬೆಲೆ; ಫ್ರೀಯಾಗಿ ಹಂಚಿದ ಕೊಡಗಿನ ರೈತ

ಯಾವುದೇ ನಿರ್ಬಂಧವಿಲ್ಲ

ಯಾವುದೇ ನಿರ್ಬಂಧವಿಲ್ಲ

ಸಭೆಯಲ್ಲಿ ಮಾತನಾಡಿದ ಸಚಿವರು, "ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಯಂತೆ ರೈತರು ಬೆಳೆದ ಯಾವುದೇ ಬೆಳೆಗಳಿಗೆ ನಿರ್ಬಂಧವಿರುವುದಿಲ್ಲ. ರೈತರು ತಮ್ಮ ಬೆಳೆಗಳನ್ನು ಯಾವುದೇ ಮಾರುಕಟ್ಟೆಗೆ ಸಾಗಿಸಬಹುದು, ಮಾರಾಟ ಮಾಡಬಹುದಾಗಿದೆ" ಎಂದು ಹೇಳಿದರು.

ಹಲವಾರು ಕ್ರಮ ಕೈಗೊಳ್ಳಲಾಗಿದೆ

ಹಲವಾರು ಕ್ರಮ ಕೈಗೊಳ್ಳಲಾಗಿದೆ

"ಪ್ರತಿಯೊಂದು ಕಾಲದಲ್ಲಿ ರೈತರು ಒಂದಿಲ್ಲೊಂದು ಸಮಸ್ಯೆಗಳ ಹೊಡೆತಕ್ಕೆ ಸಿಲುಕಿಕೊಳ್ಳುತಾರೆ. ಈ ಹಿಂದೆ ಪ್ರಕೃತಿ ವಿಕೋಪ, ಬರಗಾಲ ಹಾಗೂ ಪ್ರಸ್ತುತ ಕೋವಿಡ್-19 ನಿಂದಾಗಿ ರೈತ ಬೆಳೆದ ಫಸಲುಗಳ ಮಾರಾಟಕ್ಕೆ ತೊಂದರೆಯಾಗುತ್ತಿದೆ. ರೈತರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ" ಎಂದು ಸಚಿವರು ತಿಳಿಸಿದರು.

ಭತ್ತದ ಬೆಳೆಗೆ ಹಾನಿಯಾಗಿದೆ

ಭತ್ತದ ಬೆಳೆಗೆ ಹಾನಿಯಾಗಿದೆ

"ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳದ ಕೆಲವು ಭಾಗಗಳಲ್ಲಿ ಮೊನ್ನೆ ಆಲಿಕಲ್ಲು ಮಳೆಯಿಂದಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಿಲ್ಲಾಡಳಿತ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಶೇಷ ಸಮಿತಿ ರಚಿಸಿ, ಹಾನಿಯಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ, ಸಮೀಕ್ಷೆ ನಡೆಸಿ ಹಾನಿಯಾದ ಅಂದಾಜು ಮೊತ್ತದ ವರದಿಯನ್ನು ಸಲ್ಲಿಸುವಂತೆ" ಕೃಷಿ ಸಚಿವರು ಸೂಚಿಸಿದರು.

ಟೊಮೆಟೋ ಬೆಳೆ

ಟೊಮೆಟೋ ಬೆಳೆ

"ಕೊಪ್ಪಳ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗಾರರು ತಮ್ಮ ಫಸಲನ್ನು ಕೆಚ್‌ಅಪ್ ಕಾರ್ಖಾನೆಗಳಿಗೆ ಮಾರಾಟ ಮಾಡಬಹುದು. ರಾಜ್ಯದಲ್ಲಿ ಸಾಧ್ಯವಾಗದಿದ್ದರೆ ಬೇರೆ ರಾಜ್ಯದ ಕಾರ್ಖಾನೆಗಳನ್ನು ಸಂಪರ್ಕಿಸಿ ಅವರಿಗೆ ಮಾರಾಟ ಮಾಡಬಹುದು. ಕೇರಳ ಹೊರತು ಪಡಿಸಿ ಬೇರೆ ರಾಜ್ಯಗಳ ಗಡಿಗಳಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಅತ್ಯವಶ್ಯಕ ಸಾಮಗ್ರಿಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ" ಎಂದು ಸಚಿವರು ಸ್ಪಷ್ಟಪಡಿಸಿದರು.

English summary
Karnataka agriculture minister B.C. Patil has said that there are no restrictions on agricultural activities during the 21 days lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X