ದೇವೇಗೌಡರ ಕುಟುಂಬ ಉತ್ತರ ಕರ್ನಾಟಕ ವಿರೋಧಿಗಳು: ಜಗದೀಶ್ ಶೆಟ್ಟರ್
ಕೊಪ್ಪಳ, ಡಿಸೆಂಬರ್ 03: ದೇವೇಗೌಡರು ಮತ್ತು ಅವರ ಕುಟುಂಬ ಉತ್ತರ ಕರ್ನಾಟಕದ ವಿರೋಧಿಗಳು ಎಂದು ಬಿಜೆಪಿ ಮುಖಮಡ ಜಗದೀಶ್ ಶೆಟ್ಟರ್ ಆರೋಪಿಸಿದರು.
ಕೊಪ್ಪಳಕ್ಕೆ ಬರ ಅಧ್ಯಯನ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಉತ್ಸವಕ್ಕೆ ಹಣ ಇಲ್ಲವೆಂದು ಹೇಳಿರುವುದು ದೇವೇಗೌಡರ ಕುಟುಂಬದ ಉತ್ತರ ಕರ್ನಾಟಕ ವಿರೋಧಿತನ ತೋರುತ್ತದೆ ಎಂದು ಅವರು ಟೀಕಿಸಿದರು.
ಟಿಪ್ಪು ಜಯಂತಿ ಆಚರಣೆಗೆ ಸರ್ಕಾರದ ಬಳಿ ಹಣ ಇದೆ ಆದರೆ ಹಂಪಿ ಉತ್ಸವ ಮಾಡಲು ಬರದ ನೆಪ ಹೇಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಗುಡುಗಿದರು.

ಕುಮಾರಸ್ವಾಮಿ ಅವರು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರವೇ ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಬರ ಇದ್ದರೂ ಸಹ ಸಿಎಂ ತಮ್ಮದೇ ರಾಜಕೀಯ ಹಿತಾಸಕ್ತಿ ಅನುಸಾರವಷ್ಟೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಗುಡಿಯಲ್ಲಿ ಕೂತ ದೇವರಿಗೂ ಎಚ್ಡಿಕೆಯ ಮಲತಾಯಿ ಧೋರಣೆ, ಶೆಟ್ಟರ್: ಸಿಎಂ ಪ್ರತಿಕ್ರಿಯೆ
ರಾಜ್ಯದಲ್ಲಿ ಉಂಟಾಗಿರುವ ಬರ ಕುರಿತು ಸರ್ಕಾರಕ್ಕೆ ಚಿಂತೆ ಇಲ್ಲ. ಬರದ ಅಧ್ಯಯನವನ್ನು ಸರ್ಕಾರ ಮಾಡಿಲ್ಲ. ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ ಅದು ಕೇವಲ ಮಾತಿಗಷ್ಟೆ ಸೀಮಿತವಾಗಿದೆ ಕೃತಿಗಿಳಿದಿಲ್ಲ ಎಂದು ಆರೋಪಿಸಿದರು.












Click it and Unblock the Notifications