ಸರ್ಕಾರಕ್ಕೆ ಮುಖಭಂಗ : ಕೊಪ್ಪಳ ಎಸ್ಪಿ ವರ್ಗಾವಣೆಗೆ ಸಿಎಟಿ ತಡೆ

Posted By: Gururaj
Subscribe to Oneindia Kannada

ಬೆಂಗಳೂರು, ಮಾರ್ಚ್ 13 : ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮುಖಭಂಗವಾಗಿದೆ. ಎಸ್‌ಪಿ ಅನುಪ್ ಕುಮಾರ್ ಶೆಟ್ಟಿ ವರ್ಗಾವಣೆಗೆ ಮಂಗಳವಾರ ಸಿಎಟಿ ತಡೆ ನೀಡಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಂಗಳವಾರ ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿ ಈ ಕುರಿತು ಆದೇಶ ನೀಡಿದೆ. ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅನುಪ್ ಕುಮಾರ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿ, ತಡೆ ನೀಡಲಾಗಿದೆ.

ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

CAT stays transfer of Koppal SP Anoop Kumar Shetty

ಕರ್ನಾಟಕ ಸರ್ಕಾರ ಮಾರ್ಚ್ 9ರಂದು ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಕೊಪ್ಪಳ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದ ಅನೂಪ್ ಕುಮಾರ್ ಶೆಟ್ಟಿ ಅವರನ್ನು ಬೆಂಗಳೂರಿನ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆ

ಒಂದು ವರ್ಷಕ್ಕಿಂತ ಮೊದಲು ವರ್ಗಾವಣೆ ಮಾಡಿದ್ದನ್ನು ಅನೂಪ್ ಕುಮಾರ್ ಶೆಟ್ಟಿ ಅವರು ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ.

ಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿಗಳು ಗರಂ, ರತ್ನಪ್ರಭಾಗೆ ಪತ್ರ

ಚುನಾವಣೆ ಸಮಯದಲ್ಲಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಪ್ರತಿಪಕ್ಷ ಬಿಜೆಪಿಯ ನಾಯಕರು ಅಧಿಕಾರಿಗಳ ವರ್ಗಾವಣೆಗೆ ಖಂಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Central Administrative Tribunal (CAT) on March 13, 2018 stayed the transfer of Koppal Superintendent of Police Anoop Kumar Shetty.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ