ಕೊಪ್ಪಳದಲ್ಲಿ ಇದ್ದಾರೆ ಒಬ್ಬ ನರೇಂದ್ರ ಮೋದಿ, ಆದರೆ ಪ್ರಧಾನಿಯಲ್ಲ

Lok Sabha elections 2019: ಕೊಪ್ಪಳದಲ್ಲಿ ಇದ್ದಾರೆ ಒಬ್ಬ ನರೇಂದ್ರ ಮೋದಿ, ಆದರೆ ಪ್ರಧಾನಿಯಲ್ಲ
ಕೊಪ್ಪಳ, ಫೆಬ್ರವರಿ 22: ಕೊಪ್ಪಳದಲ್ಲಿ ಇದ್ದಾರೆ ಒಬ್ಬ ನರೇಂದ್ರ ಮೋದಿ, ಅವರು ಭಾಷಣ ಮಾಡುವುದಿಲ್ಲ, ವಿದೇಶ ಪ್ರವಾಸ ಮಾಡುವುದಿಲ್ಲ, ಚುನಾವಣೆಯಲ್ಲೂ ನಿಂತಿಲ್ಲ, ಯಾರು ಅಂತೀರಾ ಪುಟ್ಟ ಮಗು..
ಕೊಪ್ಪಳ ತಾಲೂಕಿನ ಡೊಂಬರಹಳ್ಳಿ ಗ್ರಾಮದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ಧಾರೆಡ್ಡಿ ದುರ್ಗದ ಅವರು ತಮ್ಮ ಮೊಮ್ಮಗನಿಗೆ 'ನರೇಂದ್ರ ಮೋದಿ' ಎಂದು ನಾಮಕರಣ ಮಾಡಿದ್ದಾರೆ.
ಮೋದಿಯ ಪಡಿಯಚ್ಚು ಉಡುಪಿಯ ಅಡುಗೆ ಭಟ್ಟ ಸದಾನಂದ ನಾಯಕ್
ಸಿದ್ಧಾರೆಡ್ಡಿಯವರ ಮಗಳು ಕಳೆದ ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ನಕ್ಷತ್ರದ ಪ್ರಕಾರ ನ ಅಕ್ಷರದಿಂದ ಬರುವ ಹೆಸರನ್ನು ಇಡಬೇಕು ಎಂದು ಸೂಚಿಸಿದಾಗ ನರೇಂದ್ರ ಮೋದಿ ಎಂದು ನಾಮಕರಣ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕೆ ಅವರ ಮಗಳು ಹಾಗೂ ಅಳಿಯ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಮೇಲಿದ್ದ ಅಭಿಮಾನ ಇಮ್ಮಡಿಯಾಗಿದೆ. ಮೊಮ್ಮಗನಿಗೆ ನರೇಂದ್ರ ಮೋದಿ ಎಂದು ಕರೆಯಲು ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.