ಕೊಪ್ಪಳ: ಗನ್ ತೋರಿಸಿ ನಾಲ್ವರು ಗ್ರಾ.ಪಂ. ಸದಸ್ಯರ ಕಿಡ್ನಾಪ್

Subscribe to Oneindia Kannada

ಕೊಪ್ಪಳ, ಡಿಸೆಂಬರ್ 31: ಗನ್ ತೋರಿಸಿ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಪಹರಣ ನಡೆಸಿರುವ ಅಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ದುರ್ಗಾದೇವಿ ದೇವಾಲಯದ ಬಳಿ ಈ ಘಟನೆ ನಡೆದಿದೆ.

ವೋಟಿಗಾಗಿ ಕಿಡ್ನಾಪ್?

ವಿಜಯಪುರ ಜಿಲ್ಲೆ ಸಿಂದಗಿಯ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಿನ ನಿಗದಿಯಾಗಿತ್ತು. ಈ ಹಿನ್ನಲೆಯಲ್ಲಿ 30 ಸದಸ್ಯರ ತಂಡ ಚಿತ್ರದುರ್ಗ ಪ್ರವಾಸಕ್ಕೆ ಹೊರಟಿತ್ತು.

4 Gram Panchayat members kidnapped by showing Gun

ಮಾರ್ಗಮಧ್ಯದಲ್ಲಿ ದುರ್ಗಾದೇವಿ ದೇವಾಲಯಕ್ಕೆ ಗ್ರಾಮ ಪಂಚಾಯತ್ ಸದಸ್ಯರ ತಂಡ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಅಪರಿಚಿತರು ಗನ್ ಸಹಿತ ದಾಳಿ ನಡೆಸಿ ಬೆದರಿಸಿ ನಾಲ್ವರು ಸದಸ್ಯರನ್ನು ಸಿನಿಮೀಯ ಶೈಲಿಯಲ್ಲಿ ಅಪಹರಣ ಮಾಡಿದ್ದಾರೆ.

ಅಪಹರಣಕ್ಕೊಳಗಾದ ಸದಸ್ಯರು ಶಿವಮ್ಮ, ಶಾರದಮ್ಮ, ಶಶಿಕಲಾ ಹಾಗೂ ಶಿವಣ್ಣ ಎನ್ನಲಾಗಿದೆ. ವೋಟಿಗಾಗಿ ಈ ನಾಲ್ವರು ಸದಸ್ಯರನ್ನು ಅಪಹರಣ ಮಾಡಿರಬಹುದು ಎಂದುಕೊಳ್ಳಲಾಗಿದೆ. ಈ ಸಂಬಂಧ ಇತರ ಸದಸ್ಯರು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A shocking incident took place in Koppal district where four gram panchayat members were kidnapped by showing gun at them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ