2nd PUC Results: ಮಗಳೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ತಾಯಿ
2nd PUC Results 2025: ರಾಜ್ಯದಲ್ಲಿ ಮಾರ್ಚ್ 1ರಿಂದ 20ರ ವರೆಗೆ ದ್ವಿತೀಯ ಪರೀಕ್ಷೆಗಳು ನಡೆದಿದ್ದವು. ಏಪ್ರಿಲ್ 8ರಂದು ಫಲಿತಾಂಶ ಹೊರಬಿದ್ದಿತ್ತು. ಈ ವೇಳೆ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ವಿಶೇಷ ಅಂದ್ರೆ ಮಗಳ ಜೊತೆಗೆ ತಾಯಿ ಪರೀಕ್ಷೆ ಬರೆದು ಉತ್ತೀರ್ಣರಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ತಾಯಿಯೊಬ್ಬರು ತನ್ನ ಮಗಳ ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪಾಸಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಕುಕನೂರ ತಾಲ್ಲೂಕಿನ ಬಿನ್ನಾಳ ಗ್ರಾಮದ ನಿವಾಸಿ ಮೃತ್ಯುಂಜಯವ್ವ ಕಮಬಳಿ ಎಂಬುವವರು 42ನೇ ವಯಸ್ಸಿನಲ್ಲಿ ಮಗಳೊಂದಿಗೆ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಮಹಾದೇವಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 472 (ಶೇಕಡ 78.66) ಅಂಕ ಪಡದು ಗಮನ ಸೆಳೆದಿದ್ದಾರೆ. ಹಾಗಾದ್ರೆ ಯಾವ್ಯಾವ ವಿಷಯದಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಯಾವ ವಿಷಯದಲ್ಲಿ ಎಷ್ಟು ಅಂಕ?
* ಕನ್ನಡ - 97
* ಇಂಗ್ಲೀಷ್ - 45
* ಇತಿಹಾಸ - 100
* ಅರ್ಥಶಾಸ್ತ್ರ - 67
* ಸಾಮಾಜಶಾಸ್ತ್ರ - 80
* ರಾಜ್ಯಶಾಸ್ತ್ರ - 83
ಮಹಾದೇವಿ ಕಳಕಪ್ಪ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಮಗಳು ಇಂಜಿನಿಯರಿಂಗ್, ಎಲ್‌ಎಲ್‌ಬಿ ಓದುತ್ತಿದ್ದು, ಮತ್ತೊಬ್ಬ ಮಗ ಪದವಿ ಓದುತ್ತಿದ್ದು, ದ್ವಿತೀಯ ಪಿಯುಸಿ ಕಲಿಯುತ್ತಿದ್ದ ತನ್ನ ಕೊನೆಯ ಮಗಳ ಜೊತೆ ಅವರು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. "20 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಮಕ್ಕಳ ಒತ್ತಾಯದ ಮೇರೆಗೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದೇನೆ ಎಂದು ಮಹಾದೇವಿ ಕಳಕಪ್ಪ," ಹೇಳಿದ್ದಾರೆ.
ಕಲೆಕೆಗೆವ ವಯಸಿನ ಮಿತಿ ಇಲ್ಲ ಎಂಬುದಕ್ಕೆ ಮೃತ್ಯುಂಜಯವ್ವ ಕಮಬಳಿ ಅವರು ಮಾಡಿರುವ ಈ ಸಾಧನೆಯೇ ಪ್ರಮುಖ ಸಾಕ್ಷಿಯಾಗಿದೆ. ಹೀಗೆ ಪ್ರತಿ ವರ್ಷವೂ ಸಹ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಬರೆದಾಗ ಇಂತಹ ಸಾಧನೆಯಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಸಾಮಾನ್ಯವಾಗು ಬಹುತೇಕ ಕಡೆಗಳಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸುವುದಿಲ್ಲ. ಅಂತಹದ್ದರಲ್ಲಿ ಕೆಲವೊಬ್ಬರು ಇಂತಹ ಬೇಲಿಗಳಿಗೆ ಮಣೆ ಹಾಕದೇ ತಮ್ಮ ಮನೆ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ.
ಸಾಧನೆ ಯಾರಪ್ಪನ ಸ್ವತ್ತಲ್ಲ. ತಾನು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಂತಹ ಘಟನೆಗಳೇ ಪ್ರಮುಖ ಉದಾಹರಣೆಗಳಾಗಿವೆ. ಅವರು ಹೀಗೆ ಅಂತಾರೆ, ಇವರು ಹೀಗೆ ಅಂತಾರೆ ಅಂತಾ ಬೇರೆಯವರ ಟೀಕೆಗಳಿಗೆ ಕಿವಿಗೊಡುತ್ತಾ ಹೋದರೆ ಜೀವನ ಹಳ್ಳ ಹಿಡಿಯುವುದು ಗ್ಯಾರಂಟಿ. ಬದಲಿಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗಿತ್ತಿರಬೇಕು. ಆಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಇನ್ನು ಮೃತ್ಯುಂಜಯವ್ವ ಕಮಬಳಿ ಅವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ ಅವರ ಮಕ್ಕಳು ಸೇರಿದಂತೆ ಕುಟುಂಬದವರ ಧೈರ್ಯವನ್ನು ಮೆಚ್ಚಲೇಬೇಕು. ಯಾಕಂದ್ರೆ ಈಗಿನ ಕಾಲದಲ್ಲಿ ಇಂತಹ ಪ್ರೇರಣೆ ಮಾತುಗಳನ್ನು ಹೇಳುವವರಿಗಿಂತ ಕಾಲು ಎಳೆಯುವವರೇ ಹೆಚ್ಚಿದ್ದಾರೆ. ಇಂತಹರನ್ನು ಮೆಟ್ಟಿಲು ಮಾಡಿಕೊಂಡು ಮುನ್ನುಗ್ಗಿದ್ದರೆ ಸಾಧನೆ ಖಚಿತ.












Click it and Unblock the Notifications