ಪಶ್ಚಿಮ ಬಂಗಾಳದಲ್ಲಿ ವಾರಕ್ಕೆ ಎರಡು ದಿನ ಸಂಪೂರ್ಣ ಲಾಕ್‌ಡೌನ್

ಕೊಲ್ಕತ್ತಾ, ಜುಲೈ 20: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಪಶ್ಚಿಮ ಬಂಗಾಳದಲ್ಲಿ ವಾರಕ್ಕೆ ಎರಡು ದಿನ ಸಂಫೂರ್ಣ ಲಾಕ್‌ಡೌನ್‌ ಮಾಡಲು ಸರ್ಕಾರ ಮುಂದಾಗಿದೆ.

ವಾರಕ್ಕೆ ಎರಡು ದಿನ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿ ಅಲ್ಫಾನ್ ಬಂಡೋಪಾಧ್ಯಾಯ ಸೋಮವಾರ ಆದೇಶಿಸಿದ್ದಾರೆ.

ಈ ವಾರದಲ್ಲಿ ಗುರುವಾರ ಮತ್ತು ಶನಿವಾರ ಲಾಕ್‌ಡೌನ್ ಜಾರಿಯಲ್ಲಿರುತ್ತೆ ಎಂದು ತಿಳಿಸಿದ್ದಾರೆ. ಜುಲೈ 31ರವರೆಗೂ ಪಶ್ಚಿಮ ಬಂಗಾಳದಲ್ಲಿ ಈ ಆದೇಶ ಪಾಲನೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

West Bengal Govt Announces Complete Lockdown For Two Days Every Week

ಇಷ್ಟು ದಿನ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್‌ಡೌನ್ ಇತ್ತು. ಇದೀಗ, ವಾರಕ್ಕೆ ಎರಡು ದಿನ ಲಾಕ್‌ಡೌನ್ ಜಾರಿ ಮಾಡಲಾಗಿದೆ. ನಿನ್ನೆಯಷ್ಟೇ ರಾಜ್ಯ ಗೃಹ ಇಲಾಖೆ ಕಂಟೈನ್‌ಮೆಂಟ್ ಲಾಕ್‌ಡೌನ್ ಜುಲೈ 31ರವರೆಗೂ ಮುಂದುವರಿಯಲಿದೆ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ 42487 ಜನರಿಗೆ ಕೊರೊನಾ ವೈರಸ್ ತಗುಲಿದೆ. ಇದರಲ್ಲಿ 24,883 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 16,492 ಕೇಸ್‌ಗಳು ಸಕ್ರಿಯವಾಗಿದೆ. ಇದುವರೆಗೂ 1,112 ಜನರು ಸೋಂಕಿಗೆ ಬಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+