ಮತ್ತೆ ವಿವಾದಕ್ಕೆ ಮುನ್ನುಡಿ ಬರೆದ ದೀದಿ, ಅಲ್ಪಸಂಖ್ಯಾತ ಶಾಲೆಗೆ ಭೋಜನಾಲಯ
ಕೋಲ್ಕತ್ತಾ, ಜೂನ್ 28: ಒಂದಿಲ್ಲೊಂದು ವಿವಾದಾತ್ಮಕ ನಡೆಯ ಮೂಲಕವೇ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ವಿವಾದವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಶೇ.70 ಕ್ಕೂ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಭೋಜನಾಲಯವನ್ನು ನಿರ್ಮಿಸುವ ಕೆಲಸಕ್ಕೆ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಣವನ್ನು ಆ ಕಾರಣಕ್ಕಾಗಿ ವಿನಿಯೋಗಿಸಲಾಗುವುದು, ಅಲ್ಪಸಂಖ್ಯಾತ ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಭೋಜನಾಲಯದ ವ್ಯವಸ್ಥೆ ಮಾಡಲಾಗುವುದು. ಇದು ವಿದ್ಯಾರ್ಥಿಗಳನ್ನು ಬೇರೆ ಮಾಡಲು ತೆಗೆದುಕೊಂಡ ನಿರ್ಧಾರವಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ದಿಲೀಪ್ ಘೋಷ್, ಈ ತಾರತಮ್ಯವೇಕೆ? ಭೋಜನಾಲಯ ಕಟ್ಟುವುದಾದರೆ ಕಟ್ಟಲಿ. ಆದರೆ ಈ ಕೇವಲ ಅಲ್ಪಸಂಖ್ಯಾತರು ಹೆಚ್ಚಿರುವ ಶಾಲೆಗಳಿಗೆ ಮಾತ್ರವೇಕೆ? ವಿದ್ಯಾರ್ಥಿಗಗಳನ್ನೂ ಧರ್ಮದ ಹೆಸರಿನಲ್ಲಿ ಒಡೆವ ಕೆಲಸ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications