ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 110ರಷ್ಟು ಆತ್ಮವಿಶ್ವಾಸವಿದೆ, 221 ಸೀಟುಗಳಲ್ಲಿ ಗೆಲ್ಲುತ್ತೇವೆ: ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ, ಫೆಬ್ರವರಿ 11: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಬಗ್ಗೆ ಶೇ 110ರಷ್ಟು ಆತ್ಮವಿಶ್ವಾಸ ಹೊಂದಿರುವುದಾಗಿ ಗುರುವಾರ ತಿಳಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಕನಿಷ್ಠ 221 ಸೀಟುಗಳಲ್ಲಿ ಜಯಗಳಿಸಲಿದೆ ಎಂಬ ಅವರು ಭರವಸೆ ವ್ಯಕ್ತಪಡಿಸಿದರು. 'ನನ್ನ ಆತ್ಮವಿಶ್ವಾಸದ ಮಟ್ಟ ಶೇ 110ರಷ್ಟಿದೆ. ಎಷ್ಟು ಸೀಟುಗಳಲ್ಲಿ ಗೆಲ್ಲುತ್ತೇವೆಂದು ಹೇಳಲಾರೆ. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ನಾವು ಗೆದ್ದಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಖಂಡಿತಾ. ಅದು 221 ಸೀಟುಗಳಿಗಿಂತ ಕಡಿಮೆ ಇರುವುದಿಲ್ಲ' ಎಂದರು.

ಕೋವಿಡ್ ಲಸಿಕೆ ಕಾರ್ಯಕ್ರಮ ಮುಗಿದ ಬಳಿಕ ಸಿಎಎ ಜಾರಿ: ಅಮಿತ್ ಶಾಕೋವಿಡ್ ಲಸಿಕೆ ಕಾರ್ಯಕ್ರಮ ಮುಗಿದ ಬಳಿಕ ಸಿಎಎ ಜಾರಿ: ಅಮಿತ್ ಶಾ

'ಇಂಡಿಯಾ ಟುಡೆ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಈ ಹೋರಾಟ ಹಿಂದಿಗಿಂತ ವಿಭಿನ್ನ ಎಂದು ಹೇಳಲಾಗದು. ಹೋರಾಟದಲ್ಲಿ ಆತ್ಮವಿಶ್ವಾಸ ಹೊಂದಿದವರು ಎಂದಿಗೂ ಹೆದರಲಾರರು. ನಾನು ಬೀದಿ ಹೋರಾಟಗಾರ್ತಿ. ನಾನು ಪ್ರತಿದಿನ ಹೋರಾಡಬೇಕು. ಇದು ದಿನಚರಿಯಾಗಿದೆ' ಎಂದು ಹೇಳಿದರು.

West Bengal CM Mamata Banerjee Says She Has 110 Percent Confidence Of Victory

'ಬಂಗಾಳವು ಎಂದಿಗೂ ಜಾತಿ ಅಥವಾ ಧರ್ಮಾಧಾರಿತ ರಾಜಕಾರಣ ಕಂಡಿಲ್ಲ. ಅದನ್ನು ಶುರುಮಾಡಿರುವುದು ಬಿಜೆಪಿ. ಅವರು ಧರ್ಮ ಮತ್ತು ಜಾತಿ ಆಧಾರದಲ್ಲಿ ಜನರು ಒಬ್ಬರಿಗೊಬ್ಬರು ಕಿತ್ತಾಡುವಂತೆ ಮಾಡಿದರು. ಕೆಲವು ಬಾಂಗ್ಲಾದೇಶದಿಂದ ಬಂದಿದ್ದಾರೆ, ಕೆಲವರು ಬಿಹಾರದಿಂದ ಬಂದಿದ್ದಾರೆ ಎಂದು ಬಂಗಾಳಿಗಳನ್ನೂ ವಿಭಜಿಸಿದರು. ಭಾಷೆಯ ವಿಚಾರದಲ್ಲಿಯೂ ಒಬ್ಬರನ್ನು ಒಬ್ಬರ ಮೇಲೆ ಎತ್ತಿಕಟ್ಟಿದರು. ಬಿಜೆಪಿಯವರು ಇದನ್ನೆಲ್ಲ ಏಕೆ ಮಾಡುತ್ತಾರೆ ಎಂದರೆ, ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚುನಾವಣೆಗೆ ಬಂದರೆ ಅವರು ಸೋಲುತ್ತಾರೆ. ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಪ್ರತಿದಿನ ಗೂಂಡಾಗಿರಿ ಮಾಡುತ್ತಾರಷ್ಟೇ. ಎಲ್ಲರನ್ನೂ ಅದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ದಾಳಿಗಳಿಂದ ಹೆದರಿಸುತ್ತಾರೆ. ಇದು ಸರ್ಕಾರ ಕೆಲಸ ಮಾಡುವ ರೀತಿಯೇ?' ಎಂದು ಪ್ರಶ್ನಿಸಿದರು.

English summary
West Bengal Assembly Eelection 2021: Chief Minister Mamata Banerjee said she has 110 percent confidence of victory and she will win more than 221 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X